ತರ್ಲೆ ನನ್ಮಗ ಸಿನಿಮಾಗೆ ನಾನು ಪಡೆದ ಸಂಭಾವನೆ!!!

ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ಅವರ ಲೈಫ್ ಸ್ಟೋರಿ

ಭಾಗ – 16ಪರಮ್: ನಿಮಗೆ ಸಂಬಳ ಎಷ್ಟಿತ್ತು?


ಬ್ಯಾಂಕ್ ಜನಾರ್ಧನ್: ನಂಗೆ ಸಂಬಳ ಕಮ್ಮಿ ಇತ್ತು. ಸಂಬಳ ಕಮ್ಮಿ ಇದ್ರೂ ಕೆಲ್ಸ ಪರ್ಮನೆಂಟ್ ಇತ್ತಲ್ಲಾ? ಸಿನಿಮಾದಲ್ಲಿ, ಪಾರ್ಟ್ ಮಾಡಿದ್ರೆ ಮಾತ್ರ ಇರೋದಲ್ವಾ? ಆಗ ನಂಗೆ ಬ್ಯಾಂಕ್ ಅಲ್ಲಿ ಸಂಬಳ ತಿಂಗಳಿಗೆ 6500 ಏನೋ ಇತ್ತು. ಬೆಂಗಳೂರಿಗೆ ಬಂದು ಪ್ರಮೋಶನ್ ಆಗಿ ಸ್ವಲ್ಪ ಬೆಳಿತಾ ಹೋಯ್ತಲ್ಲಾ? ಬಹಳ ಕಮ್ಮಿ ಸಂಬಳ ನಮಗೆ ಅವಾಗ. ಈಗ ಸೇರ್ದವರಿಗೆ ಸ್ಟಾರ್ಟಿಂಗೇ ಮೂವತ್ತು ಸಾವಿರ ರೂಪಾಯಿ ಸಿಗುತ್ತೆ. ನಮಗೆ ಬಹಳ ಕಮ್ಮಿ ಇತ್ತು ಸಂಬಳ. ಒಂದು ಏಳು ಎಂಟು ಸಾವಿರ ರೂಪಾಯಿ ಸಿಗ್ತಾ ಇತ್ತು.


ತರ್ಲೆ ನನ್ಮಗ ಇಡೀ ಪಿಚ್ಚರ್‍ಗೆ 5000ರೂಪಾಯಿ. ಆ ಪಿಚ್ಚರೂ ಸೂಪರ್ ಹಿಟ್ ಆಗೋಯ್ತು. ಅದೂ ಹಂಡ್ರಡ್ ಡೇಸ್ ಆಗೋಯ್ತು.ಮುಂದುವರೆಯುವುದು…

183 views