ತೂಗುದೀಪ್‌ ಶ್ರೀನಿವಾಸ್‌ ಮತ್ತು ರಾಜ್‌ ಕುಮಾರ್‌ ಅವರ ಗೆಳೆತನ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 75


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)

ವಿಲನ್‌ ಪಾತ್ರಗಳು ಬಂತೆಂದರೆ ತೂಗುದೀಪ್‌ ಶ್ರೀನಿವಾಸ್‌ ಹೆಸರು ಹೇಳುತ್ತಿದ್ರು. ತೂಗುದೀಪ್‌ ಕಂಡರೆ ಅವರಿಗೆ ಬಹಳ ಇಷ್ಟ. ಪಾತ್ರ ಇಲ್ಲದೇ ಹೋದರೂ, ಸೃಷ್ಟಿ ಮಾಡಿ ಅನ್ನುತ್ತಿದ್ರು. ಸೆಟ್‌ನಲ್ಲಿ ಅಶ್ವತ್ಥ್‌, ಬಾಲಣ್ಣ, ತೂಗುದೀಪ್‌, ನರಸಿಂಹರಾಜು ಅವರ ಜೊತೆ ಮಾತನಾಡುವುದೆಂದರೆ ಅವರಿಗೆ ಬಹಳ ಖುಷಿ. ತೂಗುದೀಪ್‌ ಶ್ರೀನಿವಾಸ್‌ ಅವರು ರಾಜ್‌ಕುಮಾರ್‌ ಸಿನಿಮಾ ಬಿಟ್ಟರೆ, ಬೇರೆ ಸಿನಿಮಾಗಳಲ್ಲಿ ನಟಿಸಿದ್ದು ಬಹಳ ಕಡಿಮೆ.


ಅವರಿಗೂ ರಾಜ್‌ಕುಮಾರ್‌ ಅವರನ್ನು ಕಂಡರೆ ವಿನಯ, ಭಯ, ಭಕ್ತಿ. ರಾಜ್‌ಕುಮಾರ್‌ ಅವರ ಮಾತನ್ನು ಪರಿಪಾಲಿಸುತ್ತಿದ್ದರೇ ಹೊರತು, ಅವರ ಮಾತುಗಳನ್ನು ದಾಟಿ ಹೋಗುತ್ತಿರಲಿಲ್ಲ. ಅವರ ಶ್ರೀಮತಿಗೂ ಪಾರ್ವತಮ್ಮ, ರಾಜ್‌ಕುಮಾರ್‌ ಅಂದರೆ ಬಹಳ ಗೌರವ. ಅವರ ಮನೆಗೆ ಹೋದರೆ ಭಕ್ತಿಪೂರ್ವಕ ವಿಶ್ವಾಸವನ್ನು ತೋರಿಸುತ್ತಿದ್ರು. ‌ರಾಜ್‌ಕುಮಾರ್‌ ಅವರು ತೂಗುದೀಪ ಶ್ರೀನಿವಾಸ್‌ ಅವರಿಗೆ ಎಷ್ಟು ಸಹಾಯ ಮಾಡುತ್ತಿದ್ದಾರೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಶ್ರೀನಿವಾಸ್‌ ಅವರಿಗೆ ಮೈಹುಷಾರಿಲ್ಲ ಎಂದಾಗ, ಅವರನ್ನು ಅಗತ್ಯಗಳನ್ನು ರಾಜ್‌ಕುಮಾರ್‌, ಪಾರ್ವತಮ್ಮ ನೋಡಿಕೊಂಡಿದ್ರು.
ಮುಂದುವರೆಯುವುದು...

18 views