ತುಂಬಾ ಕೆಲ್ಸ ಮಾಡ್ದೋರು ಜಾಸ್ತಿ ವರ್ಷ ಬದುಕಲ್ಲ ಸಾರ್

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 28

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)


ಪರಮ್: ಮೋಸ್ಟ್ಲೀ ಆ ಕಾರಣಕ್ಕೆ ಅವರು 83 ಸಿನಿಮಾ, ಅಷ್ಟು ಕಡಿಮೆ ವಯಸ್ಸಲ್ಲಿ ಮಾಡಕ್ಕೆ ಸಾಧ್ಯ ಆಯ್ತು ಅನ್ಸುತ್ತೆ?


ರಮೇಶ್ ಭಟ್: ತುಂಬಾ ಕೆಲಸ ಮಾಡ್ದೋರು ಯಾರೂ ಜಾಸ್ತಿ ವರ್ಷ ಬದುಕಿಲ್ಲ ಸಾರ್. ವಿವೇಕಾನಂದರು ಎಷ್ಟು ವರ್ಷ ಬದುಕಿದ್ರು? ಶಂಕರಾಚಾರ್ಯ ಎಷ್ಟು ವರ್ಷ ಬದುಕಿದ್ರು? ಸೀ ಮಿಂಚಿನ ಓಟ, ಆಕ್ಸಿಡೆಂಟ್ ಎಲ್ಲಾ ಈ ಟೈಮಲ್ಲಿ ಬರುವಂತದ್ದು. 21 ವರ್ಷ ಮುಂಚೆ ಯೋಚ್ನೆ ಮಾಡಿ ಮಾಡ್ದೋರು ಅವ್ರು.


ಅನಿಸಿದ್ದನ್ನ ಆ ತಕ್ಷಣಕ್ಕೆ ಮಾಡ್ಬಿಡ್ಬೇಕು ಅವ್ರಿಗೆ. ಬರೀ ಆಕ್ಷನ್ ನೋ ರಿಯಾಕ್ಷನ್. ಆ ತರ ನೇಚರ್. ಈಗ ಮಾಲ್ಗುಡಿ ಡೇಸಲ್ಲಿ, ಸ್ವಾಮಿ ಕ್ಲಾಸಲ್ಲಿ ಪಾಠ ಮಾಡುವಾಗ ಟ್ರೈನ್ ಪಾಸ್ ಆಗುತ್ತೆ. ಅವ್ನಿಗೆ ಟ್ರೈನ್ ನೋಡುವ ಹುಚ್ಚು. ಬೆಂಚ್ ಮೇಲೆ ನಿತ್ಕೊಂಡು ಕಿಟಕಿಯಲ್ಲಿ ಟ್ರೈನ್ ಹೋಗ್ತಿರೋದನ್ನ ನೋಡ್ತಾನೆ. ಆಗುಂಬೆಗೆ ಟ್ರೈನ್ ಏನೂ ಬರಲ್ಲ. “ಏನು ಮಾಡ್ಬೇಕು ನಾವು?” “ಅದು ತೋರ್ಸಕ್ಕಾಗಲ್ಲ, ಬರಿ ಸೌಂಡ್ ಹಾಕೊಣ” ಅಂತ ಯಾರೋ ಐಡಿಯಾ ಕೊಡ್ತಾರೆ. “ಇದು ಸ್ಟೇಜ್ ಅಲ್ಲಪ್ಪಾ, ಸಿನಿಮಾ ಮಾಡ್ತಿರೋದು ನಾವು.” ಅಂತ ಹೇಳ್ಬಿಟ್ಟು, “ಅರಸಾಳು ಎಷ್ಟು ದೂರ ಇಲ್ಲಿಂದ? ಅಲ್ಲಿ ಎಷ್ಟೊತ್ತಿಗೆ ಟ್ರೈನ್ ಬರುತ್ತೆ?” ಅಂತ ಅದೆಲ್ಲಾ ಥಿಯರಿ ತರ್ಸಿ ಬಿಟ್ರು. “ಅರಸಾಳುಗೆ ಹೋಗೊಣ” ಅಂತಾಯ್ತು. “ಸರಿ ಯಾವಾಗ ಹೋಗೋಣ?” ಅಂದ್ರೆ, “ನಾಳೆ ಗಿರೀಶ್ ಅವ್ರಿಲ್ಲ. ಸ್ವಾಮಿ ಮೇಲೆನೇ ಕಾನ್ಸಂಟ್ರೇಟ್ ಮಾಡ್ಬೇಕು, ಹೋಗ್ಬಂದ್ಬಿಡೋಣ.” ಅಂತಾರೆ. “ಸರಿ ಎಷ್ಟೊತ್ತಿಗೆ ಹೊರಡೋದು? ಅಂದ್ರೆ, “ನಾಲ್ಕು ಗಂಟೆಗೆ ಹೊರಡ್ಬೇಕು ಎಲ್ಲ”. “ಇವ್ನ ಒಬ್ಬನ್ನ ಕರ್ಕೊಂಡು ಹೋದ್ರೆ, ಕಿಟಕಿ ಏನು ಮಾಡೊದು?” “ಸರಿ, ಸ್ಕೂಲ್ ಕಿಟಕಿ ಕಿತ್ಕೊಂಡು ಬಂದ್ಬಿಡಿ. ತಿರ್ಗ ನಾಳೆ ಶೂಟಿಂಗ್ ಮುಗಿದ ಮೇಲೆ, ಮೇಸ್ತ್ರಿನ ಕರೆಸಿ ಫಿಕ್ಸ್ ಮಾಡ್ಸೋಣ ಹೇಗಿದ್ರೂ ರಜೆ ಇದ್ಯಲ್ಲ ಸ್ಕೂಲಿಗೆ” ಅಂತ. ಇಟ್ಟಿಗೆ ಇದ್ಯಲ್ಲ ಅದನ್ನ ನಾಲ್ಕು ಕಡೆ ಹೊಡ್ದು ತಗೊಂಡು ಬಂದ್ಬಿಡಿ”. ಅಂದ್ರು.ಮುಂದುವರೆಯುವುದು…

13 views