ಥೀಯೇಟರ್ನಲ್ಲಿ ಸಿನಿಮಾ ನೋಡಲು ದಯಾನಂದ ಮಾಡುತ್ತಿದ್ದ ಐಡಿಯಾಗಳು

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 7ನಾನು ನಾಟಕಗಳಲ್ಲಿಯೂ ಅಭಿನಯಿಸುತ್ತಿದ್ದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಮಯದಲ್ಲಿಯೇ ನಾಟಕ ಪ್ರದರ್ಶನವಿತ್ತು. ಮೂರು ಪರೀಕ್ಷೆ ಬರೆಯಲು ಆಗುತ್ತಿರಲಿಲ್ಲ. ನಾಟಕ ಮಾಡಲು ಆಗುವುದಿಲ್ಲ ಅಲ್ವಾ ಎಂಬ ಯೋಚನೆಯೇ ನನಗೆ ಬಂದಿಲ್ಲ. ಅದರ ಬದಲಾಗಿ, ನಾಟಕ ಇದೆಯಲ್ಲಾ ಪರೀಕ್ಷೆ ಬರೆಯಲು ಆಗುವುದಿಲ್ಲಾ ಎಂಬ ಯೋಚನೆ ಮಾಡಿದ್ದೆ. ಪರೀಕ್ಷೆಗೆ ಹೋಗೇ ಇಲ್ಲ ನಾನು. ನಾಟಕಕ್ಕೆ ಬಣ್ಣ ಹಚ್ಚಲು ಹೋದೆ. ವಿಷಯ ಗೊತ್ತಾದಾಗ ಮನೆಯಲ್ಲಿ ಹೊಡೆದ್ರು, ಬೈದ್ರು. ಯಾವುದಕ್ಕೂ ತಲೆಯನ್ನೇ ಕೆಡಿಸಿಕೊಳ್ಳುತ್ತಿರಲ್ಲ ನಾನು.


ಶಾಲೆಗೆ ಚಕ್ಕರ್‌ ಹೊಡೆದು ಸಿನಿಮಾಗಳಿಗೆ ಹೋಗುತ್ತಿದ್ದೆ. ಒಂದೇ ಸಿನಿಮಾಕ್ಕೆ ಮೂರು ಟಿಕೆಟ್‌ ತೆಗೆದುಕೊಳ್ಳುತ್ತಿದ್ದೆ. 2 ಗಂಟೆ ನಿರಂತರವಾಗಿ ಸಿನಿಮಾ ನೋಡಲು ಹೋದ್ರೆ ಮನೆಯಲ್ಲಿ ಗೊತ್ತಾಗುತ್ತದೆಯೆಂದು, ಒಂದು ಸಿನಿಮಾವನ್ನೇ ಅರ್ಧ ಗಂಟೆ ನೋಡಿ ಬಂದು, ಮಧ್ಯಾಹ್ನ ಇನ್ನೊಂದು ಶೋ ಹೋಗುತ್ತಿದ್ದೆ. ಮತ್ತೆ ಅರ್ಧ ಸಿನಿಮಾ ಮುಗಿಸಿ, ಸಂಜೆ ಮೇಲೆ ಮತ್ತೊಂದು ಶೋಗೆ ಹೋಗಿ ಉಳಿದ ಸಿನಿಮಾ ನೋಡುತ್ತಿದ್ದೆ. ಅಷ್ಟು ತುಂಟ ನಾನು. ಎಷ್ಟೇ ಬೈದರು ಸಿನಿಮಾ ನೋಡುವುದನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಇವನು ಸಿನಿಮಾಕ್ಕೆ ಹೋಗುವುದಿಲ್ಲ ಡೈಲಾಗ್‌ ಹೇಗೆ ಹೇಳುತ್ತಾನೆ ಎಂದು ಮನೆಯವರಿಗೆ ಆಶ್ಚರ್ಯವಾಗುತ್ತಿತ್ತು. ಥಿಯೇಟರ್‌ ಹೊರಗೆ ನಿಂತು ಕೇಳಿಸಿಕೊಂಡೆ ಅಂತೆಲ್ಲಾ ಸುಳ್ಳು ಹೇಳುತ್ತಿದ್ದೆ.ಮುಂದುವರೆಯುವುದು...

13 views