ದಯಾನಂದ ಅವರ ಕಷ್ಟದ ದಿನದಲ್ಲಿ ಸಹಾಯ ಮಾಡಿದ ಹಿರಿಯ ಜೀವ

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 53ನಿರ್ದೇಶಕ ಭಾರ್ಗವ್‌ ಅವರು ವಜ್ರಮುಷ್ಠಿ ಸಿನಿಮಾದಲ್ಲಿ ಲಾಯರ್‌ ಪಾತ್ರದಲ್ಲಿ ನಟಿಸುತ್ತೀರಾ ಎಂದು ಫೋನ್‌ ಮಾಡಿ ಕೇಳಿದ್ರು. ಆಯ್ತು ಸರ್ ಎಂದೆ. ಕಾರು ಬರುತ್ತೆ ಬನ್ನಿ ಎಂದು ಹೇಳಿದ್ರು. ಹೋದ್ರೆ ಶಾಟ್‌ ರೆಡಿಯಾಗಿತ್ತು. ಶಕ್ತಿಪ್ರಸಾದ್‌, ತೂಗುದೀಪ್‌ ಶ್ರೀನಿವಾಸ್‌, ಸುಂದರ್‌ ಕೃಷ್ಣ ಅರಸ್‌, ದಿರೇಂದ್ರ ಗೋಪಾಲ್‌, ಶಂಕರ್‌ನಾಗ್‌, ಆರತಿ ಎಲ್ಲ ಇದ್ರು. ನಾನು ಯುವರ್‌ ಆನರ್‌ ಎಂದು ಮಾತನಾಡಬೇಕು. ದೊಡ್ಡ ಡೈಲಾಗ್‌ ಇತ್ತು. ದಯಾನಂದ್‌ ಮಾಡ್ತಾರೆ ಬಿಡ್ರಿ ಎಂದು ಭಾರ್ಗವ್‌ ನಂಬಿಕೆಯಿಂದ ಹೇಳಿದ್ರು.


ವಜ್ರಮುಷ್ಠಿ ಸಿನಿಮಾದಲ್ಲಿಯೂ ಮಾಡಿದೆ. ಅದರಲ್ಲಿ ಲಾಯರ್‌ ನಾನು. ಭಾರ್ಗವ್‌ ಅದರ ನಿರ್ದೇಶಕರು. ಭಾರ್ಗವ್‌ ಅವರು ನನ್ನ ಕಷ್ಟದ ದಿನಗಳಲ್ಲಿ ಅವಕಾಶ ಕೊಟ್ಟವರು. ಜಾತಿ, ಧರ್ಮ ಏನು ನೋಡುತ್ತಿರಲಿಲ್ಲ. ಪ್ರತಿಭೆ ಇದ್ರೆ ಸಾಕಿತ್ತು. ಅವಕಾಶ ಕೊಡುತ್ತಿದ್ರು. ಎಲ್ಲರನ್ನು ಒಂದೇ ರೀತಿ ಮಾತನಾಡಿಸುತ್ತಿದ್ರು. ಅವರು ಯಾರಿಗೂ ಸರೆಂಡರ್‌ ಆಗುತ್ತಿರಲಿಲ್ಲ. ಅವರನ್ನು ನೋಡಿ ಬಹಳ ಕಲಿಯುವುದಿದೆ. ಅವರ ಗರಡಿಯಲ್ಲಿ ಬಹಳಷ್ಟು ಜನ ಬೆಳೆದು ದೊಡ್ಡವರಾಗಿದ್ದಾರೆ.ಮುಂದುವರಿಯುವುದು...

23 views