ದರ್ಶನ್‌,ಯಶ್‌,ಸುದೀಪ್‌ ಇವರೆಲ್ಲಾ ನಾವು ಪಾರ್ಟು ಮಾಡ್ಬೇಕಾದ್ರೆ ಹೀರೋ ಕನಸು ಕಾಣ್ತಾ ಇದ್ದವರು

ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ಅವರ ಲೈಫ್ ಸ್ಟೋರಿ

ಭಾಗ – 20ಎಲ್ಲರ ಜೊತೆಯಲ್ಲೂ ಆಕ್ಟ್ ಮಾಡ್ಬಿಟ್ಟೆ ಸಾರ್. ಈಗಿನ ದರ್ಶನ್, ಯಶ್, ಸುದೀಪ್ ಇವರೆಲ್ಲಾ ನಾವು ಪಾರ್ಟ್ ಮಾಡ್ಬೇಕಾದ್ರೆ ಹೀರೋ ಆಗ್ಬೇಕು ಅಂತ ಇದ್ದವರು. ದರ್ಶನ್ ನಾನು ಆಕ್ಟ್ ಮಾಡಿದ್ದ ಎಲ್ಲರ ಮನೆ ದೋಸೆ ತೂತ ಸಿನಿಮಾದಲ್ಲಿ ವಿಲನ್ ಆಗಿದ್ದ. ಹೀರೋ ಆಗುವ ಹುಮ್ಮಸ್ಸು ಇತ್ತು. ಯಂಗ್ ಪರ್ಸನ್ ಅಲ್ವಾ? ಆಗ ನಾನು ದರ್ಶನ್‍ಗೆ ಹೇಳ್ತಾ ಇದ್ದೆ. ಅವನು ಪಾಪ ಎಲ್ಲೋ ಒಂದು ಕಡೆ ಕೋತ್ಕೋಬಿಡೋನು. “ಯಾಕೋ ಕೂತ್ಕೋತೀಯಾ? ಯಂಗ್ ನೀವು. ಇನ್ನೂ ವಯಸ್ಸಿದೆ ನಿಮಗೆ. ಇವತ್ತಲ್ಲಾ ನಾಳೆ ಒಳ್ಳೆ ಕ್ಯಾರೆಕ್ಟರ್ ಸಿಗುತ್ತೆ. ಹೀರೋ ಆಗ್ತೀಯ ಬಿಡು” ಅಂತ.


ಸುದೀಪ್‍ಗೂ ಅದೇ ಮಾತು ಹೇಳಿದ್ದೆ. ಸುದೀಪ್ ಫಸ್ಟ್ ಪಿಚ್ಚರ್ ತಾಯವ್ವದಲ್ಲಿ ನಾನು ಮಾಡಿದ್ದೆ. ಅವಾಗ ನಾವು ಸ್ವಲ್ಪ ಜಾಸ್ತಿ ಜೊತೆಯಲ್ಲಿದ್ವಿ.


ರಾಜ್ ಕುಮಾರ್ ಇಂದ ಹಿಡಿದು ಆಗಿನ ನಟರು ಯಾರಿದ್ದಾರೆ ಎಲ್ಲರ ಜೊತೆಯಲ್ಲೂ ಆಕ್ಟ್ ಮಾಡ್ಬಿಟ್ಟೆ ಸಾರ್. ಈಗಿರುವ ಹೊಸಬರ ಜೊತೆಯಲ್ಲೂ ಪಾರ್ಟ್ ಮಾಡಿದ್ದೀನಿ. ಆಮೇಲೆ ಎಲ್ಲಾ ಕಾಮಿಡಿ ಕ್ಯಾರೆಕ್ಟರ್‍ಗಳು ಜಾಸ್ತಿ ಆಗ್ಬಿಟ್ವು. ಉಮಾಶ್ರೀ, ರೇಖಾದಾಸ್ ಎಲ್ಲರ ಜೊತೆಯಲ್ಲೂ ಪಾರ್ಟ್ ಮಾಡ್ಬಿಟ್ಟೆ ಸಾರ್. ಎಲ್ಲಾ ಹೀರೋಯಿನ್‍ಗಳ ಜೊತೆಯಲ್ಲೂ ಕೂಡ. ನಾವು ತೆರೆ ಮೇಲೆ ಭಾರತಿ ಹಾಗೂ ಜಯಂತಿ ಅವರನ್ನ ನೋಡಿದ ತಕ್ಷಣ “ಅಯ್ಯಯ್ಯೋ ಏನಪ್ಪಾ ಇವರು” ಅಂತ ಅನ್ಕೊತಾ ಇದ್ವಿ. ನಾನು ಚಿತ್ರರಂಗಕ್ಕೆ ಬಂದು ಅವರ ಜೊತೆ ಪಾರ್ಟ್ ಮಾಡ್ದಾಗ “ಏನಿದು? ಇದು ಸಾಧ್ಯ ಆಯ್ತಾ?” ಅನಿಸ್ತಿತ್ತು. ರಾಜ್ ಕುಮಾರ್ ಕಂಡ್ರೆ ನಂಗೆ ಎಷ್ಟು ಅಭಿಮಾನ?


ಪರಮ್: ನೀವೇ ಥಿಯೇಟರಲ್ಲಿ ಬಿಡ್ತಾ ಇದ್ರಿ?


ಬ್ಯಾಂಕ್ ಜನಾರ್ಧನ್: ನಾನೇ ಬಿಡ್ತಾ ಇದ್ದೆ. ಪಬ್ಲಿಕ್ ಜೊತೆ ಹೋಗ್ತಾ ಇದ್ದೆ. ಅಂತಹ ಮಹಾತ್ಮನ ಜೊತೆಯಲ್ಲಿ ನಿತ್ಕೊಂಡು ಪಾರ್ಟ್ ಮಾಡ್ಬೇಕಾದ್ರೆ ನಮ್ಮ ಯೋಗ ಏನಪ್ಪಾ ಅಂತ ಬಹಳ ಆಶ್ಚರ್ಯ ಆಗೋಯ್ತು. ಜಯಂತಿ, ಭಾರತಿ ಎಲ್ಲರ ಜೊತೆಯಲ್ಲೂ ಪಾರ್ಟ್ ಮಾಡ್ಬಿಟ್ಟೆ. ನಾನು ಯಾರನ್ನ ತೆರೆ ಮೇಲೆ ನೋಡಿ ಖುಷಿ ಪಡ್ತಾ ಇದ್ನೋ ಅವರ ಪಕ್ಕದಲ್ಲೇ ನಿತ್ಕೊಂಡು ಪಾರ್ಟ್ ಮಾಡ್ತಾ ಇದ್ದೀನಿ ಅಂದ್ರೆ ಬಹಳ ಖುಷಿಯಾಗೋಯ್ತು ನಂಗೆ.ಮುಂದುವರೆಯುವುದು…

139 views