ದೊರೆಯವರ ಸಾವಿಗೆ ಅವರ ಜೀವನದಲ್ಲಿ ನಡೆದ ಆ ದುರಂತವೇ ಕಾರಣವಾಯಿತು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 52


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ದೊರೆಯವರ ಜೀವನದಲ್ಲೊಂದು ದುರಂತ ನಡೆಯಿತು. ಅವರಿಗೆ ಒಬ್ಬ ಮಗ ಮತ್ತು ಮಗಳು. ಮಗನನ್ನು ತುಂಬಾ ಪ್ರೀತಿಸುತ್ತಿದ್ರು. ಅವನು ನಮ್ಮ ಜೊತೆಗೆ ತರಬೇತಿ ಪಡೆಯುತ್ತಿದ್ದ. ಕ್ಯಾಮೆರಾಮೆನ್‌ ಮತ್ತು ಎಡಿಟಿಂಗ್‌ ಕೆಲಸವನ್ನೂ ಮಾಡುತ್ತಿದ್ದ. ಅಪ್ಪ, ಮಕ್ಕಳಿಗೆ ಅವಿನಾಭಾವ ಸಂಬಂಧ ಇತ್ತು. ಅವನಿಗೆ ಅವಳಿ– ಜವಳಿ ಮಕ್ಕಳಿದ್ರು. ಒಂದು ದಿವಸ ಇದಕ್ಕಿದ್ದಂತೆ ಎದೆನೋವು ಎಂದ. ಹೆಂಡತಿ ತಕ್ಷಣ ಡಾಕ್ಟರ್‌ ಹತ್ತಿರ ಕರೆದುಕೊಂಡು ಹೋಗಿದ್ದರು. ವೈದ್ಯರು, ಅಲ್ಲಿಯೇ ಮಂಚದಲ್ಲಿ ಮಲಗು. ಬಿ.ಪಿ ಚೆಕ್‌ ಮಾಡುತ್ತೇನೆ ಎಂದು ಎಕ್ವಿಪ್‌ಮೆಂಟ್‌ ತೆಗೆದುಕೊಂಡು ಹತ್ತಿರಕ್ಕೆ ಹೋಗುವುದರೊಳಗೆ ಆತ ತೀರಿ ಹೋಗಿಬಿಟ್ಟಿದ್ದ. ಅದೇ ಕೊರಗಿನಲ್ಲಿಯೇ ಅವರು 2000 ಇಸವಿಯಲ್ಲಿ ಹೋಗಿ ಬಿಟ್ಟರು. ತಾಯಿಯ ಗೋಳು ಹೇಳಲು ಸಾಧ್ಯವಿರಲಿಲ್ಲ.
ಮುಂದುವರೆಯುವುದು...

30 views