ದೇವರು ಕೊಟ್ಟ ಈ ಮನೆಯ ಬಾಡಿಗೆ ಎಷ್ಟು ಗೊತ್ತ?

ಮಿಮಿಕ್ರಿ ದಯಾನಂದ್‌ ಲೈಫ್‌ ಸ್ಟೋರಿ ಭಾಗ 40ಜೀವನದಲ್ಲಿ ಸಾಕಷ್ಟು ತೊಂದರೆಗಳು ಬಂದವು. ನಂತರದಲ್ಲಿ ಬಂದ ತೊಂದರೆಗಳನ್ನು ಒಳ್ಳೆಯದಾಗಿಯೇ ತೆಗೆದುಕೊಂಡೆ. ದೇವರಿಗೆ ಎಲ್ಲ ಭಾಷೆ ಬರುವುದಿಲ್ಲ. ಅವರದೇ ಒಂದು ಭಾಷೆ ಇದೆ ಎನ್ನುತ್ತಾರೆ. ನಾವು ಏನು ಹೇಳಿದ್ರು ದೇವರು ತಥಾಸ್ತು ಎನ್ನುತ್ತಿರುತ್ತಾನಂತೆ. ನಾವು ಯಾವಾಗಲೂ ನೆಗೆಟಿವ್ ಆಗಿ ಯೋಚನೆ ಮಾಡಿದ್ರೆ ದೇವರು ಅಸ್ತು ಏನುತ್ತಾರೆ. ಬೇಡ ಎಂದರೂ ಆಗ ಗ್ರಹಚಾರ ಒಕ್ಕರಿಸಿಕೊಳ್ಳುತ್ತದೆ. ಅದಕ್ಕೆ ಯಾವಾಗಲೂ ಎಲ್ಲರಿಗೂ ಒಳ್ಳೆಯದಾಗಲಿ, ನನಗೂ ಒಳ್ಳೆಯದಾಗಲಿ ಎಂದುಕೊಳ್ಳಬೇಕು. ಆಗ ಅವನು ತಥಾಸ್ತು ಎನ್ನುತ್ತಾನೆ. ನಾವು ಚೆನ್ನಾಗಿರುತ್ತೇವೆ. ಯಾವಾಗ್ಲೂ ಯಾರಿಗೂ ಕೆಟ್ಟದ್ದನ್ನು ಬಯಸಬಾರದು.


ಒಂದು ಮನೆ ಬಾಡಿಗೆಗೆ ಕೊಡುವಾಗ ಇಷ್ಟು ದಿನ ಬಾಡಿಗೆ, ಅಡ್ವಾನ್ಸ್‌ ಎನ್ನುತ್ತಾರೆ. ದೇವರು ನಮಗೆ ಸುಂದರವಾದ ಪ್ರಪಂಚ ಕೊಟ್ಟಿದ್ದಾನೆ. ಒಳ್ಳೆಯ ಗಾಳಿ, ಬೆಳಕು, ನೀರು, ಹಣ್ಣು, ತರಕಾರಿ ಎಲ್ಲ ಕೊಟ್ಟಿದ್ದಾರೆ. ಆದರೆ, ಒಂದು ರೂಪಾಯಿ ಬಾಡಿಗೆ ಕೇಳುವುದಿಲ್ಲ. ಇರುವವರೆಗೆ ಇವೆಲ್ಲವನ್ನು ಕ್ಲೀನಾಗಿ ಇಟ್ಟುಕೊಳ್ಳಲು ಅಷ್ಟೇ ಆತ ಹೇಳುವುದು. ಅದಕ್ಕೆ ಪ್ರಪಂಚವನ್ನು ನಾವು ಸುಂದರವಾಗಿ ಇಟ್ಟುಕೊಳ್ಳಬೇಕು.ಮುಂದುವರೆಯುವುದು...

5 views