ದೆಹಲಿ ಕನ್ನಡಿಗರಿಗೆ ಅಣ್ಣಾವ್ರ ಕೊಡುಗೆ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 104


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ದೆಹಲಿಯಲ್ಲಿ ಕನ್ನಡ ಸಂಘವಿದೆ. ನಾನು ಅದರಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ ಕನ್ನಡ ಭವನವಿಲ್ಲ. ಯಾವುದೋ ಮೂಲೆಯಲ್ಲಿ ಜಾಗ ಕೊಟ್ಟಿದ್ದಾರೆ. ನಾವು ಅಲ್ಲಿದ್ದೇವೆ. ಅಲ್ಲಿ ನಿಮ್ಮ ಮ್ಯೂಸಿಕಲ್‌ ನೈಟ್ಸ್‌ ಮಾಡಿದರೆ ಅನುಕೂಲವಾಗುತ್ತದೆ’ ಎಂದು ಪೇಜಾವರ ಸ್ವಾಮಿಗಳು ಹೇಳಿದರು. ನಾವು ಮ್ಯೂಸಿಕಲ್‌ ನೈಟ್ಸ್‌ ನಡೆಸಿದೆವು. ಅಲ್ಲಿನ ಕನ್ನಡಿಗರು ಕೈಲಾದಷ್ಟು ಡೊನೇಷನ್‌ ಕೊಟ್ಟರು. 60.70 ಲಕ್ಷ ಹಣ ಸಂಗ್ರಹವಾಯಿತು. ಅದನ್ನು ಕನ್ನಡ ಭವನ ನಿರ್ಮಾಣಕ್ಕೆ ಕೊಟ್ಟೆವು.ಮುಂದುವರೆಯುವುದು...

11 views