ದೆಹಲಿಯಲ್ಲಿ‌ರುವ ಅಣ್ಣಾವ್ರ ಇಷ್ಟದ ಹೋಟೆಲ್

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 112


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ದೆಹಲಿಯ ಕರೋಲ್‌ ಬಾಗ್‌ನಲ್ಲಿ ಕೈಲಾಷ್‌ ಹೋಟೆಲ್‌ ಎಂದಿದೆ. 2 ಸ್ಟಾರ್‌ ಹೋಟೆಲ್‌ ಅದು. ರಾಜ್‌ಕುಮಾರ್‌ ಮತ್ತು ಪಾರ್ವತಮ್ಮ ಅವರಿಗೆ ಅಲ್ಲಿ ಉಳಿದುಕೊಳ್ಳುವುದೆಂದರೆ ತುಂಬಾ ಇಷ್ಟವಿತ್ತು. ಕರೋಲ್‌ ಬಾಗ್‌ನಲ್ಲಿ ಅಂಗಡಿಗಳಿದ್ದು, ಬಹಳ ಕಡಿಮೆ ಬೆಲೆಗೆ ಸಿಗುತ್ತದೆ. ಹಾಗಾಗಿ ಪಾರ್ವತಮ್ಮ ಅವರಿಗೆ ಅಲ್ಲಿ ಉಳಿದುಕೊಳ್ಳುವುದೆಂದರೆ ಇಷ್ಟ.


ಮದ್ರಾಸ್‌ನಲ್ಲಿ ನೆಲಹಾಸಿಗೆ 15 ಸಾವಿರ ಇದ್ದರೆ ಅಲ್ಲಿ 3 ಸಾವಿರಕ್ಕೆ ಸಿಗುತ್ತಿತ್ತು. ನಾಲ್ಕೈದು ತೆಗೆದುಕೊಳ್ಳುತ್ತಿದ್ದರು. ಕ್ಯಾಮೆರಾ ಯೂನಿಟ್‌ ಜೊತೆಗೆ ರೈಲಿನಲ್ಲಿ ಹಾಕಿ ಅದನ್ನು ಸಾಗಿಸುತ್ತಿದ್ದೆವು. ಶೂಟಿಂಗ್‌ ಮುಗಿದ ಮೇಲೆ ನನಗೆ ಪಾರ್ವತಮ್ಮ ಅವರ ಜೊತೆಗೆ ಕರೋಲ್‌ ಬಾಗ್‌ ತಿರುಗುವುದೇ ಕೆಲಸ. ಅವರಿಗೆ ಶಾಪಿಂಗ್‌ ಮಾಡುವುದೆಂದರೆ ಇಷ್ಟ. ಅವರಿಗಾಗಿ, ಗಂಡನಿಗಾಗಿ ಬಟ್ಟೆ ತೆಗೆದುಕೊಳ್ಳುತ್ತಿರಲಿಲ್ಲ. ಮನೆಯಲ್ಲಿ ಹದಿನಾರು ಮಕ್ಕಳಿದ್ದರು. ತಮ್ಮ, ಅಣ್ಣ, ತಂಗಿ ಹೀಗೆ ಎಲ್ಲ ಮಕ್ಕಳಿಗೂ ಬಟ್ಟೆ ತೆಗೆದುಕೊಳ್ಳುತ್ತಿದ್ದರು. ಮಕ್ಕಳ ಬಟ್ಟೆನೇ ಮೂರು ಪೆಟ್ಟಿಗೆ ಆಗುತ್ತಿತ್ತು. ಅಂಗಡಿಯವರ ಬಳಿ ಬೆಲೆ ಕೇಳು ಭಗವಾನ್‌, ಮಾತಾಡು ಭಗವಾನ್‌ ಎಂದು ಹೇಳುತ್ತಿದ್ರು.ಮುಂದುವರೆಯುವುದು...

14 views