ದೆಹಲಿಯ ಕರೋಲ್‌ ಬಾಗ್‌ನಲ್ಲಿ ಅಣ್ಣಾವ್ರ ಶಾಪಿಂಗ್ ಕಥೆ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 113


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ರಾಜ್‌ಕುಮಾರ್‌ ಅವರಿಗೆ ಕರೋಲ್‌ ಬಾಗ್‌ ಶಾಪಿಂಗ್ ಬನ್ನಿ ಎಂದು ಕರೆದರೆ ಯಾರು ತಿರುಗುತ್ತಾರೆ ನೀವು ಹೋಗಿ ಭಗವಾನ್‌ ಅನ್ನುತ್ತಿದ್ರು. ಒಂದು ದಿನ ಒತ್ತಾಯ ಮಾಡಿ ಕರೆದುಕೊಂಡು ಹೋದೆ. ಒಳ್ಳೊಳ್ಳೆ ಸೂಟ್‌, ಶರ್ಟ್‌ ಬಟ್ಟೆಗಳು, ವೈಟ್‌ ಸಿಲ್ಕ್‌ ಸಿಗುತ್ತದೆ ತೆಗೆದುಕೊಳ್ಳಿ ಅಂದ್ರೆ, ಬೆಲೆ ಕೇಳಿ ಬೇಡ ಭಗವಾನ್‌, ನನಗೆ ಮಾಬಳ್ಳಿ ಸಿಲ್ಕ್‌ ಸಾಕು ಅನ್ನುತ್ತಿದ್ದರು.


ನಾನು, ಪಾರ್ವತಮ್ಮ ಬಲವಂತ ಮಾಡಿದ್ರೆ, ಕೊನೆಗೆ ಕರ್ಚಿಫ್‌ ತೆಗೆದುಕೊಳ್ಳುತ್ತಿದ್ದರು. ಬಿಳಿ ಖರ್ಚಿಫ್‌ ಅವರಿಗೆ ತುಂಬಾ ಇಷ್ಟ. ಅಲ್ಪತೃಪ್ತಿ ಅವರದು. ಪಾರ್ವತಮ್ಮ ಅವರು ಅಷ್ಟೆನೇ ಸೀರೆ ಬೇಕು ಎಂದು ಕೇಳುತ್ತಿರಲಿಲ್ಲ. ನಮ್ಮೂರಲ್ಲಿಯೇ ಸೀರೆ ಸಿಗುತ್ತದೆ ಇಲ್ಲಿ ಏಕೆ ಬೇಕು ಅನ್ನುತ್ತಿದ್ದರು. ಮಕ್ಕಳಿಗೆ, ಮನೆಗೆ ಅಷ್ಟೆನೇ ತೆಗೆದುಕೊಳ್ಳುತ್ತಿದ್ದರು.ಮುಂದುವರೆಯುವುದು...

15 views