ಧೀರೇಂದ್ರ ಗೋಪಾಲರಿಂದ ನನ್ನ ಸಿನಿಮಾದ ಕನಸು ಈಡೇರತು

ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ಅವರ ಲೈಫ್ ಸ್ಟೋರಿ

ಭಾಗ - 7ಯಾವತ್ತೋ ಒಂದು ಟೈಮ್ ಬೆಂಗ್ಳೂರಿಗೆ ಯಾವುದೋ ಕೆಲ್ಸಕ್ಕೋಸ್ಕರ ಬಂದೆ ನಾನು. ಅವಾಗ ಜ್ಷಾಪಕ ಆಯ್ತು ಧೀರೇಂದ್ರ ಗೋಪಾಲ್ ಅವರು ಭೇಟಿಯಾಗಕ್ಕೆ ಹೇಳಿದ್ರಲ್ಲಾ ನಂಗೆ ಅಂತ. ಗಾಂಧೀ ನಗರದಲ್ಲಿ ಜನಾರ್ಧನ ಲಾಡ್ಜಲ್ಲಿ ರೂಮಲ್ಲಿ ಇದ್ರು ಅವರು. ಅಲ್ಲಿಗೆ ಹೋಗಿ ಭೇಟಿಯಾದೆ. ಅವಾಗ ಸಾಹಸ ಸಿಂಹ ಶೂಟಿಂಗ್ ನಡಿತಾ ಇತ್ತು. ಅವರೂ ಪಾರ್ಟ್ ಮಾಡ್ತಾ ಇದ್ರು ಅದರಲ್ಲಿ. ಇವರು, ವಿಷ್ಣುವರ್ಧನ್, ವರ್ಜಮುನಿ ಹಾಗೂ ಕುಣಿಗಲ್ ನಾಗಭೂಷಣ್ ಎಲ್ಲಾ ಇದ್ರು. ಸರಿ ನನ್ನ ಕರ್ಕೊಂಡೋಗಿ ಡೈರಕ್ಟರ್‍ಗೆ ಪರಿಚಯ ಮಾಡ್ಸಿದ್ರು. ಆಮೇಲೆ ಕುಣಿಗಲ್ ನಾಗಭೂಷಣ್ ಸಾಹಿತ್ಯ ಬರಿತಾರಲ್ಲಾ ಅವರಿಗೆ ಪರಿಚಯ ಮಾಡ್ಸಿದ್ರು. ಅವಾಗ ಊರಿಗೆ ಉಪಕಾರಿ ಅನ್ನೋ ಚಿತ್ರದ ಚಿತ್ರಕಥೆ ನಡಿತಾ ಇತ್ತು.


ಅವಾಗ ನಂಗೆ ಅವರು ಒಂದು ಪಾತ್ರ ಕೊಟ್ರು. ಏನು ಪಾತ್ರ ಅಂದ್ರೆ ವರ್ಜಮುನಿಯ ನಾಲ್ಕು ಜನ ಬಾಡಿಗಾರ್ಡಲ್ಲಿ ನಾನೂ ಒಬ್ಬ. ಅವಾಗ ಬಹಳ ದಪ್ಪ ಇದ್ದೆ. ಶೂಟಿಂಗ್ ಶ್ರೀಗಂಗೆಯಲ್ಲಿ ಶುರುವಾಯ್ತು. ಅಲ್ಲೇ ಹಾಲ್ಟ್ ಆಗಿದ್ವಿ. ಅಲ್ಲಿ ಒಂದು ದೊಡ್ಡ ಮನೆ ಮಾಡಿದ್ರು. ಮೇಯ್ನ್ ಆರ್ಟಿಸ್ಟ್‍ಗಳಿಗೆ ಮಾತ್ರ ಅಪ್ ಆಂಡ್ ಡೌನ್. ನಮಗೆಲ್ಲಾ ಅಲ್ಲೇ ಮನೆಯಲ್ಲೇ ಹಾಲ್ಟ್ ಮಾಡ್ಸಿದ್ರು.ಮುಂದುವರೆಯುವುದು…

18 views