
ನಟ ಅಶ್ವಥ್ಥ ಅವರು ಕೊಡುತ್ತಿದ್ದ ಚೀಟಿಯಲ್ಲಿ ಏನಿರುತ್ತಿತ್ತು
ದೊರೆ-ಭಗವಾನ್ ಲೈಫ್ ಸ್ಟೋರಿ - ಭಾಗ 72
(ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ)

ಆನಂದ್ ರಾವ್ ಸರ್ಕಲ್ನಲ್ಲಿ ಚಂದ್ರಿಕಾ ಹೋಟೆಲ್ ಎಂದಿದೆ. ಶೂಟಿಂಗ್ ಇದ್ದಾಗ ಅಲ್ಲಿ ಬಂದು ಉಳಿದುಕೊಳ್ಳುತ್ತಿದ್ದ. 17 ನೇ ತಾರೀಕಿನಿಂದ ಶೂಟಿಂಗ್ ಪ್ರಾರಂಭ ಎಂದು ಹೇಳಿದ್ರೆ, 16ನೇ ತಾರೀಕಿಗೆ ಸಂಜೆ ಬಂದು ಬಂದಿದ್ದೇನೆ ಎಂದು ಫೋನ್ ಮಾಡಿ ಹೇಳುತ್ತಿದ್ದ. ಶೂಟಿಂಗ್ ಸ್ಥಳಕ್ಕೆ ಬಂದ ನಂತರ ಕೈಗೊಂದು ಚೀಟಿ ಕೊಡುತ್ತಿದ್ದ. ಮೈಸೂರಿನ ನಮ್ಮ ಮನೆಯಿಂದ ಜಟಕಾ ಗಾಡಿಯಲ್ಲಿ ರೈಲ್ವೆ ನಿಲ್ದಾಣಕ್ಕೆ ಬಂದ ಬಾಡಿಗೆ 1. ಅಲ್ಲಿಂದ ಬೆಂಗಳೂರಿಗೆ ಬಂದ ರೈಲ್ವೆ ಚಾರ್ಜ್ 11. ಬೆಂಗಳೂರು ಸ್ಟೇಷನ್ನಿಂದ ಹೋಟೆಲ್ಗೆ ಬಂದ ಆಟೊ ಚಾರ್ಜ್ 3. ಕಾಫಿ ಕುಡಿದಿದ್ದು ನಿನ್ನ ಲೆಕ್ಕದಲ್ಲಿದೆ. ಇದನ್ನು ನೀನು ದಯವಿಟ್ಟು ಕೊಡುವುದು.
ನನ್ನ ಸ್ನೇಹಿತನು ಬಂದಿದ್ದ ಒಟ್ಟಿಗೆ ತಿಂಡಿ– ಕಾಫಿ ಮಾಡಿದ್ದೇವೆ. ಅವನು ತಿಂದ ತಿನಿಸಿನ ಬೆಲೆ 1.5 ಕೊಟ್ಟಿದ್ದೇನೆ. ಮತ್ತೆ ಅವರು ಬಿಲ್ನಲ್ಲಿ ಸೇರಿಸಿದರೆ ನೀನು ಕೊಡಬೇಡ ಎಂದು ಆ ಚೀಟಿಯಲ್ಲಿ ಬರೆದಿರುತ್ತಿತ್ತು. ತಾನು ತಿಂದಿದ್ದು ನನ್ನ ಲೆಕ್ಕ, ಅವನ ಸ್ನೇಹಿತರು ತಿಂದಿದ್ದನ್ನು ಅವನ ಲೆಕ್ಕಕ್ಕೆ ಹಾಕಿಕೊಳ್ಳುತ್ತಿದ್ದ. ಇದು ಅಶ್ವತ್ಥ್ನ ಲೆಕ್ಕಾಚಾರದ ವಿಷಯ. ಅವರು ಸಿನಿಮಾ ಬರುವುದಕ್ಕೆ ಮುಂಚೆ ಮೈಸೂರಿನ ಫುಡ್ ಡಿಪಾರ್ಟ್ಮೆಂಟ್ನಲ್ಲಿ ಕ್ಲರ್ಕ್ ಆಗಿದ್ರು. ಹಾಗಾಗಿ ಲೆಕ್ಕವನ್ನು ಬರೆದು ಅಭ್ಯಾಸವಾಗಿ, ಸಿನಿಮಾ ಕ್ಷೇತ್ರದಲ್ಲಿಯೂ ಅದೇ ಅಭ್ಯಾಸವನ್ನು ರೂಢಿಸಿಕೊಂಡಿದ್ದರು. ಅಭ್ಯಾಸ ಬಲ ಸಾಧಾರಣಕ್ಕೆ ತಪ್ಪುವುದಿಲ್ಲ. ಅದ್ಭುತವಾದ ಶಿಸ್ತನ್ನು ಅವರು ರೂಢಿಸಿಕೊಂಡಿದ್ದರು.
ಮುಂದುವರೆಯುವುದು...