ನಟಿ ರಕ್ಷಿತಾ ಅವರ ಅಪ್ಪ ಗೌರಿಶಂಕರ್ ಅವರ ಲವ್‌ಸ್ಟೋರಿ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 54


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ಹೊಸ ಬೆಳಕು ಚಿತ್ರದ ಶೂಟಿಂಗ್‌ ದೆಹಲಿಯಲ್ಲಿ ಮಾಡುತ್ತಿದೆವು. ಶೂಟಿಂಗ್‌ ಮುಗಿಸಿ ರೂಂಗೆ ಹೋಗಿದ್ವಿ. ರಾತ್ರಿ 11 ಗಂಟೆಯಾದ್ರೂ ಗೌರಿಶಂಕರ್‌ ಬಂದಿರಲಿಲ್ಲ. ಎಲ್ಲಿ ಹೋಗಿದ್ದಾನೆ ಎಂದು ಹುಡುಕಲು ಪ್ರಾರಂಭಿಸಿದೆವು. ನೋಡಿದ್ರೆ, ಮಮತಾ ರಾವ್‌ ಕೂಡ ಕಾಣೆಯಾಗಿ ಬಿಟ್ಟಿದ್ರು. ನಂತರ ಗೊತ್ತಾಯ್ತು ಇಬ್ರೂ ಸುತ್ತಾಡಲು ಹೋಗಿದ್ದಾರೆಂದು. ನಾವು ಉಳಿದಕೊಂಡ ಹೋಟೆಲ್‌ ಸಮೀಪ ಪಾರ್ಕ್‌ ಇತ್ತು ಅಲ್ಲಿ ಹೋಗಿ ಇವರಿಬ್ರು ಕೂತಿದ್ರು. ನಮ್ಮ ಹುಡುಗರು ಇವರನ್ನು ಪತ್ತೆ ಮಾಡಿ, ಬೆಳಿಗ್ಗೆ ಶೂಟಿಂಗ್‌ ಇದೆ, ರಾತ್ರಿ 11 ಆಗಿದೆ ಬನ್ನಿ ಎಂದು ಎಳೆದುಕೊಂಡು ಬಂದಿದ್ರು. ನಾನು ಗೌರಿಗೆ ಏನಪ್ಪ ಇದು ಎಂದು ಕೇಳಿದೆ. ಅದಕ್ಕವನು ಮದುವೆ ಮಾಡಿಕೊಳ್ಳೋಣ ಎಂದಿದ್ದೆವೆ ಸರ್‌ ಎಂದು ಹೇಳಿದ್ದ. ಮನೆಯವರ ವಿರೋಧದ ನಡುವೆಯೂ ಗೌರಿಶಂಕರ್‌ ಮದುವೆ ಮಾಡಿಕೊಂಡ.ಮುಂದುವರೆಯುವುದು...

36 views