ನನಗೆ ನಾಟಕದಲ್ಲಿ ಅವಕಾಶ ಕೊಟ್ಟಿದ್ದು ಮಿನುಗುತಾರೆ ಕಲ್ಪನಾ

Updated: Dec 18, 2021

ಖ್ಯಾತ ಖಳನಟ ಸುಧೀರ್ ಲೈಫ್ ಸ್ಟೋರಿ ಭಾಗ 2

(ಪತ್ನಿ ಮಾಲತಿ ಸುಧೀರ್ ಅವರು ಕಂಡಂತೆ)ಆ ಸಮಯದಲ್ಲಿ ಮಿನುಗುತಾರೆ ಕಲ್ಪನಾ ಅವರ ‘ಮಿನುಗುತಾರೆ ಮಿತ್ರ ಮಂಡಳಿ’ಗ್ರೂಪ್ ಹುಬ್ಳಿಗೆ ಬಂತು. “ಕಲ್ಪನಾ ಅಂದ್ರೆ ಅಳುವ ನಾಟಕನೇ ಇರುತ್ತೆ ಅಂತ ಜನಗಳಿಗೆ ಒಂದು ಭಾವನೆ ಇರುತ್ತೆ. ಹಾಗಾಗಿ ಒಂದು ಡ್ಯಾನ್ಸ್ ಇದ್ರೆ ಒಂದು ಮಸಾಲೆ ಇದ್ದಂಗೆ ಇರುತ್ತೆ. ಹಾಗಾಗಿ ಒಂದು ಡ್ಯಾನ್ಸರ್ ಬೇಕು”ಅಂತ ಕಲ್ಪನಾ ಅವರು ಡಿಸ್ಕಷನ್ ಮಾಡ್ತಿರೋವಾಗ ಈಶಂಕರಣ್ಣನ ಕಿವಿಗೆ ಬಿತ್ತು “ನೋಡ್ರಿ ಒಂದು ಹದಿನಾರು ವರ್ಷದ ಹುಡುಗಿ ಇದ್ದಾಳೆ. ತುಂಬಾ ಚನ್ನಾಗಿ ಡ್ಯಾನ್ಸ್ ಮಾಡ್ತಾಳೆ. ಅವಳಿಗೆ ವಿಧ್ಯೆ ಗೊತ್ತಿಲ್ಲ ಏನೂ ಗೊತ್ತಿಲ್ಲ. ಅವಳಿಗೆ ಆಕಲೆ ದೈವ ದತ್ತವಾಗಿ ಬಂದಿದೆ”ಅಂತ ಹೇಳಿದ್ರು.


ತಕ್ಷಣನೇ ಕಲ್ಪನಾಜೀ ಅವರು ನಮ್ಮ ಮನೆ ಹುಡುಕ್ಕೊಂಡು ಬಂದ್ರು. ಕಾರು ತುಂಬಾ ಜನ ಬಂದು ಬಿಟ್ಟಿದ್ರು, ನಾನು ಯಾರದ್ದೋ ಮನೆ ಅಡ್ರಸ್ ಕೇಳ್ತಿದ್ದಾರೆ ಅಂತ ಅನ್ಕೊಂಡಿದ್ದೆ. “ಯಾರು ಬೇಕು ನಿಮ್ಗೆ?” ಅಂತ ಕೇಳಿದ್ರೆ. ಕಲ್ಪನಾಜೀ ಅವರು ಮುಂದೆ ಕೂತ್ಕೊಂಡು “ನೀನೇ ಬೇಕು”ಅಂತ ಹೇಳಿದ್ರು. ನನ್ನ ಯಾಕೆ ಕೇಳ್ತಿದ್ದಾರೆ ಅಂತ ನಂಗೆ ತುಂಬಾ ಭಯ ಆಯ್ತು. ಕಾರಲ್ಲಿ ಎಮ್.ಎನ್. ಲಕ್ಷ್ಮೀ ದೇವಿ ಅವರು ಕೂತಿದ್ರು. ಮಸುರೀ ಕೃಷ್ಣಮೂರ್ತಿ ಅವರಿದ್ರು, ರಾಮಚಂದ್ರ ಶಾಸ್ತ್ರೀಗಳಿದ್ರು, ಸುಂದರ ಕೃಷ್ಣ ಅರಸ್ ಇದ್ರು, ಕಲ್ಪನಾಜೀ ಅವರಿದ್ರು. ಐದು ಜನ ಕಾರ್ ತಗೊಂಡು ಬಂದಿದ್ರು. “ಆ ಹುಡುಗಿನ ನೋಡ್ಬೇಕು” ಅಂತ. ಸರಿ ನೋಡಿ “ನೀನು ವುಡ್‍ಲ್ಯಾಂಡ್ಸ್ ಹೋಟ್ಲಿಗೆ ಬಾರಮ್ಮಾ” ಅಂತ ಕರೆದ್ರು.ಮುಂದುವರೆಯುವುದು…

20 views