ನನ್ನ ಗಂಡ ಕರ್ನಾಟಕದಲ್ಲಿ ಮಾತ್ರ ಹುಟ್ಟಬಾರದು

ಸುಮಾ - ಎಲ್. ಎನ್‌ ಶಾಸ್ತ್ರಿ ಲೈಫ್ ಸ್ಟೋರಿ ಭಾಗ-23ಗಂಡನ ಮೂಲಕ ಜೀವನವನ್ನು ನಾನು ತುಂಬಾ ನೋಡಿಬಿಟ್ಟೆ. ಕಲಾವಿದರಿಗೆ ಕನ್ನಡದಲ್ಲಿ ಬೆಲೆಯೇ ಇಲ್ಲ. ಕನ್ನಡದ ಮೂಲದಿಂದ ಬಂದಿದ್ದಾನೆ ಎಂದಾದರೆ ಅವರಿಗೆ ಬೆಲೆಯೇ ಕೊಡುವುದಿಲ್ಲ. ‘ಮೇಲೊಬ್ಬ ಮಾಯಾವಿ’ ಅವರು ಹಾಡಿದ ಕೊನೆಯ ಸಿನಿಮಾ. ಕಾಯಿಲೆಯಿದ್ದಾಗ ಹೊಟ್ಟೆಯಲ್ಲಿ ನೀರು ತುಂಬಿಕೊಂಡು ಹಾಡಿದ ಹಾಡದು. ಅವರು ಮತ್ತೆ ಹುಟ್ಟುತ್ತಾರೆ ಎಂಬ ಭರವಸೆ ನನಗಿದೆ. ಕಲಾವಿದನಾಗಿ, ಗಾಯಕನಾಗಿಯೇ ಅವರು ಮತ್ತೊಮ್ಮೆ ಹುಟ್ಟುತ್ತಾರೆ. ಆದರೆ, ಕನ್ನಡ ನಾಡಿನಲ್ಲಿ ಅವರು ಹುಟ್ಟುವುದು ಬೇಡ ಎಂದೇ ನಾನು ಪ್ರಾರ್ಥನೆ ಮಾಡುತ್ತೇನೆ ಎಂದು ಈ ಸಿನಿಮಾದ ಆಡಿಯೊ ರಿಲೀಸ್‌ ಸಮಯದಲ್ಲಿ ನಾನು ಹೇಳಿದ್ದೆ.


ಅವರು ಹುಟ್ಟಿದರೆ ಉತ್ತರ ಭಾರತದಲ್ಲಿ ಹುಟ್ಟಲ್ಲಿ. ಅಲ್ಲಿ ಕಲಾವಿದರಿಗೆ ತುಂಬಾ ಬೆಲೆಯನ್ನು ಕೊಡುತ್ತಾರೆ. ತಮಿಳು, ತೆಲುಗಿನಲ್ಲಿಯೂ ಕಲಾವಿದರಿಗೆ ಬೆಲೆ ಇದೆ. ಕನ್ನಡ ನಾಡಿನಲ್ಲಿ ಮಾತ್ರ ಹುಟ್ಟುವುದೇ ಬೇಡ ಎನ್ನುವಷ್ಟು ರೋಸಿ ಹೋಗಿದೆ ನಮಗೆ. ಚಿತ್ರರಂಗದ ರಾಜಕೀಯದಿಂದಾಗಿ ಅಷ್ಟು ನೋವು ಅನುಭವಿಸಿದ್ದೇವೆ. ಬೇರೆ ಭಾಷೆಯಲ್ಲಿ ಇಷ್ಟು ರಾಜಕೀಯ ಇರುವುದಿಲ್ಲ. ನಮ್ಮವರನ್ನೇ ನಮ್ಮವರು ಇಷ್ಟ ಪಡುವುದಿಲ್ಲ.ಮುಂದುವರೆಯುವುದು...

20 views