ನನ್ನ ಗಂಡ ನನಗೇ ಅವಕಾಶ ಕೊಡುತ್ತಿರಲಿಲ್ಲ

ಸುಮಾ - ಎಲ್. ಎನ್‌ಶಾಸ್ತ್ರಿ ಲೈಫ್ ಸ್ಟೋರಿ ಭಾಗ-9
ನಮ್ಮ ಮದುವೆಯ ನಂತರದ ಜೀವನ ಪ್ರಾರಂಭವಾಯಿತು. ‘ಕನಸಲೂ ನೀನೇ ಮನಸಲೂ ನೀನೇ‘ ಸಿನಿಮಾದ ಮೂಲಕ ಶಾಸ್ತ್ರಿ ಸಂಗೀತ ನಿರ್ದೇಶಕರಾಗಿ ಭಡ್ತಿ ಪಡೆದರು. ಹಾಗೆಂದು ನನಗೆ ಶಿಫಾರಸ್ಸು ಇರಲಿಲ್ಲ. ನನ್ನ ಯೋಗ್ಯತೆಗೆ ತಕ್ಕಂತೆ ಅವಕಾಶ ಗಿಟ್ಟಿಸಿಕೊಳ್ಳಬೇಕಿತ್ತು. ಬೇರೆ ಗಾಯಕರಿಗೆ ಅವಕಾಶ ಕೊಡುತ್ತಿದ್ದರು. ನಾನು ಕೇಳಿದ್ರೆ, ನನ್ನ ಹೆಂಡತಿಗೆ ನಾನೇ ಅವಕಾಶ ಕೊಡಲು ಆಗುತ್ತಾ? ಅದು ಚೆನ್ನಾಗಿರುವುದಿಲ್ಲ. ನಿನ್ನ ಪ್ರತಿಭೆ ಗೊತ್ತು ತಾನೇ ಬೇಕಿದ್ರೆ ಬರುತ್ತಾರೆ. ನಿನಗೆ ಪ್ರತಿಭೆ ಇದೆ ಎಂದಾದರೆ, ಅವಕಾಶ ಸಿಕ್ಕೇ ಸಿಗುತ್ತದೆ ಎನ್ನುತ್ತಿದ್ದರು.


ತುಂಬಾ ಜನರಿಗೆ ಕೆಲಸ ಕೊಡಬೇಕೆಂಬ ಆಸೆ ಅವರಲ್ಲಿ ವಿಪರೀತವಾಗಿ ಇತ್ತು. ತಾನೇ ಒಂದು ತಂಡವನ್ನು ಕಟ್ಟಿಕೊಳ್ಳಬೇಕೆಂಬ ಹಂಬಲದಿಂದಲೇ ಮೆಲೋಡಿ ಎಂಬ ಸಿನಿಮಾ ಮಾಡಿದ್ರು. ಒಂದು ಸಿನಿಮಾ ಹಿಟ್‌ಆದ್ರೆ ಸಾಕು ನಾನು ನನ್ನ ತಂಡವನ್ನು ಅಭಿವೃದ್ಧಿ ಪಡಿಸುತ್ತೇನೆ ಎಂಬ ಕನಸು ಕಂಡಿದ್ದರು. ಆದರೆ ಅದು ಯಶಸ್ಸಾಗಲಿಲ್ಲ.


ಅವರು ಅದ್ಭುತವಾದ ಗಾಯಕ ಮತ್ತು ಸಂಗೀತ ನಿರ್ದೇಶಕ. ಅವರ ಕಂಪೋಸಿಂಗ್‌ಕೇಳಲು ತುಂಬಾ ಸುಲಭ ಇರುತ್ತಿತ್ತು. ಆದರೆ, ಹಾಡುವಾಗಲೇ ಅದು ಎಷ್ಟು, ಕಷ್ಟ ಮತ್ತು ಸೂಕ್ಷ್ಮವಾಗಿದೆ ಎಂಬುದು ಗೊತ್ತಾಗುತ್ತಿತ್ತು. ರಾಜೇಶ್‌ಕೃಷ್ಣ ಯಾವಾಗಲೂ ಅದನ್ನೇ ಹೇಳುತ್ತಿದ್ದ.ಮುಂದುವರೆಯುವುದು...

54 views