ನಮ್ಮನೆಯಲ್ಲಿ ಗಲಾಟೆ ಆಗಿ ಸಿನಿಮಾ ಸಹವಾಸಾನೇ ಬಿಟ್ಬಿಟ್ಟಿದ್ದೆ…

ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ಅವರ ಲೈಫ್ ಸ್ಟೋರಿ

ಭಾಗ – 12ಹಿರಿಯೂರು ಬೆಂಗಳೂರಿಗೆ ಹತ್ರ ಆಗೋಯ್ತಲ್ಲಾ? 3 ಹವರ್ಸ್‍ಗೆಲ್ಲಾ ಬೆಂಗ್ಳೂರಿಗೆ ಹೋಗ್ಬಿಡ್ತಾ ಇದ್ವಿ. ಹಿರಿಯೂರಲ್ಲಿ ಮತ್ತೆ ಸಿನಿಮಾ ಭೇಟೆ ಶುರುವಾಯ್ತು. ನಂಗೆ ಕೆಲ್ಸ ಕೊಡ್ಸಿದ್ರಲ್ಲಾ ಶಂಕರ್ ಶೆಟ್ಟಿ ಅವರು ಅವರ ಮಾತು ಎಲ್ಲಾ ಕಡೆ ಸ್ವಲ್ಪ ನಡಿತಾ ಇತ್ತು. ಹಾಗಾಗಿ ಮತ್ತೆ ಬೆಂಗಳೂರಿನ ಎನ್. ಆರ್ ರೋಡ್‍ಗೆ ಟ್ರಾನ್ಸ್ ಫರ್ ಮಾಡಿಸ್ಕೊಂಡೆ. ಅಲ್ಲಿ ಕೂಡ ವಾರಕ್ಕೆ ಒಂದು ಅಥವಾ ಎರಡು ದಿವ್ಸ ಕೆಲ್ಸ ಮಾಡ್ತಾ ಇದ್ದೆ ಅಷ್ಟೇ. ಸಿನಿಮಾದ ಕಡೆನೇ ಜಾಸ್ತಿ ಆಯ್ತು. ಏನೇ ಮಾಡಿದ್ರೂ ನಮಗೆ ಸರಿಯಾದ ಪಾತ್ರ ಸಿಗ್ಲಿಲ್ಲ. ನಂಗೆ ಹಾಗೂ ಜಗ್ಗೇಶ್‍ಗೂ ಬೇಜಾರು ಆಗೋಯ್ತು. ಜಗ್ಗೇಶ್ ಅವರಿಗೆ ಮನೆ ಕಡೆ ಪರಿಸ್ಥಿತಿ ಚನ್ನಾಗಿತ್ತು. ನಮಗೆ ಏನೂ ಇಲ್ಲ ಸಂಬಳ ಬಂದ್ರೆನೇ ಜೀವನ. ನಮಗೆ ಏನೂ ಆಸ್ತಿ ಪಾಸ್ತಿ ಏನೂ ಇರ್ಲಿಲ್ಲ. ನಮ್ಮಪ್ಪ ಏನೂ ಮಾಡ್ಲಿಲ್ಲ. ಹಾಗಾಗಿ ಮನೆಯಲ್ಲಿ ದಿನಾ ಗಲಾಟೆ “ಏನ್ರೀ ಸಂಬಳ ಇಲ್ಲ. ಹೆಣ್ಣು ಮಕ್ಕಳು ನಮಗೆ. ಏನು ಮಾಡ್ತಿದ್ದೀರ? ಯಾಕೆ ಹೋಗ್ತೀರ ಸಿನಿಮಾಕ್ಕೆ? ಬ್ಯಾಂಕ್‍ನಲ್ಲೇ ಕೆಲಸ ಮಾಡಿ” ಅಂತ ಹೇಳ್ತಿದ್ರು. ಆದ್ರೂ ನಮಗೆ ಬಿಡಕ್ಕಾಗ್ಲಿಲ್ಲ.


ಈತರ ಗಲಾಟೆಯಲ್ಲಿ ನಾನು ಒಂದು ಡಿಸಿಶನ್‍ಗೆ ಬಂದ್ಬಿಟ್ಟೆ. “ಇನ್ನು ಪಿಚ್ಚರ್ ಮಾಡೋದು ಬೇಡ. ಬ್ಯಾಂಕಲ್ಲಿ ಪ್ರಮೋಶನ್ ತಗೊಂಡು ಯಾವುದಾದ್ರೂ ಬ್ಯಾಂಕಲ್ಲಿ ಮ್ಯಾನೇಜರ್ ಆಗಿ ಜೀವನ ಮಾಡೋಣ. ಸಾಕೀ ಸಿನಿಮಾ ಜೀವನ” ಅಂತ ಡಿಸೈಡ್ ಮಾಡ್ಬಿಟ್ಟೆ. ನಂತರ ಆರು ತಿಂಗಳು ಯಾರೇ ಕರೆದ್ರೂ ಸಿನಿಮಾಕ್ಕೆ ಹೋಗ್ಲಿಲ್ಲ.


ಪರಮ್: ಬಟ್ ಕರಿತಿದ್ರು?


ಬ್ಯಾಂಕ್ ಜನಾರ್ಧನ್: ಕರಿತಿದ್ರು. ಮಾಮೂಲಿ ಸಬ್ ಇನ್ಸ್‍ಪೆಕ್ಟರ್, ಪೋಲೀಸ್ ಇದಕ್ಕೆಲ್ಲಾ ಕರಿತಾ ಇದ್ರು. ಅವರಿಗೆಲ್ಲಾ ನಾನು ಏನಾದ್ರೂ ನೆವ ಹೇಳಿ ಆರು ತಿಂಗಳು ಯಾವ ಸಿನಿಮಾದಲ್ಲೂ ಪಾರ್ಟ್ ಮಾಡ್ಲಿಲ್ಲ. ಬ್ಯಾಂಕಿಗೆ ಕರಕ್ಟಾಗಿ ಹೋದೆ. ನಂತರ ಪ್ರಮೋಶನ್ ಕೊಟ್ಬಿಟ್ರು. ಅಲ್ಲಿಂದ ಬೆಂಗಳೂರಿಂದ ಕನಕಪುರಕ್ಕೆ ಟ್ರಾನ್ಸ್ ಫರ್ ಮಾಡಿದ್ರು. ಆಫರ್ ಕೊಡ್ತೀನಿ ಅಂದ್ರು. ನಾನು ಹೋಗಲ್ಲ ಅಂದೆ. ಕನಕಪುರದಲ್ಲೂ ಕರಕ್ಟ್ ಆಗಿ ಕೆಲ್ಸ ಮಾಡ್ದೆ. ಯಾಕಂದ್ರೆ ಪಿಚ್ಚರ್ ಮಾಡೋದೇ ಬಿಟ್ಬಿಟ್ಟಿದ್ದೆ. ಮತ್ತೆ ಈ ಓಡಾಟ ಸ್ವಲ್ಪ ಜಾಸ್ತಿ ಆಯ್ತು. ಬೆಳಗ್ಗೆ ಏಳು ಗಂಟೆಗೆ ಏಳ್ಬೇಕು. ಹತ್ತು ಗಂಟೆ ಒಳಗೆ ಬ್ಯಾಂಕ್‍ಗೆ ಹೋಗ್ಬೇಕು. ಬಸ್ ಹಿಡ್ದು ಹೋಗ್ಬೇಕು. ಬಹಳ ಕಷ್ಟ ಆಯ್ತು. ಹಾಗಾಗಿ ಮತ್ತೆ ಯಾರ್ಯಾರದ್ದೋ ಕೈಕಾಲು ಹಿಡ್ದು ಮತ್ತೆ ಬೆಂಗಳೂರಿಗೇ ಟ್ರಾನ್ಸ್ ಫರ್ ತಗೊಂಡೆ. ಮತ್ತೆ ಎನ್. ಆರ್ ರೋಡ್‍ಗೆ, ಅದೇ ಬ್ರಾಂಚ್‍ಗೇ ಬಂದೆ.ಮುಂದುವರೆಯುವುದು…

74 views