ನಮ್ಮಲ್ಲಿ ಮ್ಯೂಸೀಶಿಯನ್ಸ್ ಕೊರತೆ ಇದ್ದಾಗ ಶಂಕರ್‌ ಮಾಡಿದ ಕೆಲಸ ಏನು?

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 30

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ಈಗ ಸಂಕೇತ್ ಸ್ಟುಡಿಯೋ ಸ್ಟಾರ್ಟ್ ಮಾಡ್ದಾಗ ಮ್ಯೂಸೀಶಿಯನ್ಸ್, ಯಾರೂ ಇಲ್ಲ ಇಲ್ಲಿ. ಗಿಟಾರ್ ಬೇಕಾದ್ರೆ, ವಾಯಲಿನ್ ಬೇಕಾದ್ರೆ ಮದ್ರಾಸ್ ಇಂದ ಬರ್ಬೇಕು. ನಾವು ಸ್ಟುಡಿಯೋ ಮಾಡಾಯ್ತು ಮ್ಯೂಸೀಶಿಯನ್ಸ್ ಯಾರೂ ಇಲ್ಲ. ಪ್ರತೀ ಸಾರಿ ಮದ್ರಾಸಿಂದ ಕರೆಸ ಬೇಕು. ಅದು ತುಂಬಾ ಖರ್ಚು ಪ್ರೊಡ್ಯೂಸರಿಗೆ. ನೋ ಬಡಿ ವಾಂಟ್ಸ್ ಟು ರೆಕಾರ್ಡ್ ಹಿಯರ್. ಸರಿ ಆ ಟೈಮಲ್ಲಿ “ಏನು ಮಾಡೋದು?” ನಾವು ಏನು ಮಾಡಿದ್ವಿ, ಇಲ್ಲಿ ಯಾರು ವಯಾಲಿನ್ ನುಡಿಸ್ತಾರೆ? ಮ್ಯೂಸಿಕ್ ಕ್ಲಾಸ್ ಎಲ್ಲೆಲ್ಲಿದೆ? ಅಲ್ಲೆಲ್ಲ ಹೋಗೋದು. “ಬನ್ನಿ ನುಡಿಸಿ” ಅಂತ. ದೇ ಯೂಸ್ ಟು ಫೀಲ್ ಇನ್ಸಲ್ಟ್. ಒಂದು ಫುಲ್ ಸಾಂಗ್ ಗೆ ಕಛೇರಿಯಲ್ಲಿ ನುಡಿಸ ಬೇಕು. ಸಿನಿಮಾದಲ್ಲಿ ಏನಾಗುತ್ತೆ? ನಾಲ್ಕು ಬಾರ್ ಮಾತ್ರ ವಯಾಲಿನ್ ಬರುತ್ತೆ. ಅವ್ರು ವಿಧ್ವಾನ್ ಗಳ ಕೈ ಕೆಳಗೆ ಕಲಿತವರು. “ಇಲ್ಲಿ ಯಾರ್ಯಾರ ಜೊತೆ ಹೇಗೆ ನುಡಿಸೋದು?” ಅಂತ ಇನ್ಸಲ್ಟ್ ಅವ್ರಿಗೆ.


ಈ ಫೀಲಿಂಗ್ ಹೋಗ್ಸಕ್ಕೆ ಅವ್ರಿಗೆ ಒಂದು ಕಾಲ್ ಶೀಟ್ ಗೆ ಇಷ್ಟು ಪೇಮೆಂಟ್, ಎರಡು ಕಾಲ್ ಶೀಟ್ ಗೆ ಇಷ್ಟು ಪೇಮೆಂಟ್ ಸಿಕ್ಕುತ್ತೆ. ಅವ್ರು ಬರೀ ರಾಮನವಮಿಗೆ ಕಛೇರಿ ನುಡಿಸಿದವರು. ಒಂದು ಗೌರವಕ್ಕೋಸ್ಕರ ಅದನ್ನ ಕಲಿತವರು. ದೇವರ ಮುಂದೆ ಹಾಡೋದಕ್ಕೆ ಕಲಿತವರು. ಆ ಮೇಲೆ ಅವ್ರನ್ನ ಸ್ಲೋ ಆಗಿ ಕಮರ್ಷಿಯಲ್ ಮಾಡ್ಸಿದ್ವಿ. ಅಂದ್ರೆ, ಆ ಲೈನಲ್ಲೇ ಇದ್ದವರಿಗೆ ಅದರ ಮೇಲೆ ಪೂಜ್ಯ ಭಾವನೆ ಇರುತ್ತೆ. ‌

ಮುಂದುವರೆಯುವುದು…

13 views