ನಮ್ಮ ಟೆಕ್ನಿಷಿಯನ್ಸ್‌ ಬಗ್ಗೆ ಬೇರೆ ಇಂಡಸ್ರ್ಟಿಯವರು ಆಡುವ ಮಾತುಗಳೇನು?

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 54
ಕನ್ನಡ ಇಂಡಸ್ಟ್ರಿ ಸಾಗರವಿದ್ದಂತೆ. ಬೇರೆ ಇಂಡಸ್ಟ್ರಿಯವರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ಕನ್ನಡ ಇಂಡಸ್ಟ್ರಿಯವರು ಟೆಕ್ನಿಷಿಯನ್ಸ್‌ಗೆ ಎಷ್ಟು ಗೌರವ ಕೊಡ್ತಾರೆ ಸರ್‌ ಎಂದು ಅವರು ಹೊಗಳುತ್ತಾರೆ. ನಮ್ಮ ಮನೆಯವರ ಬಗ್ಗೆ ನಮಗೆ ಗೊತ್ತಿಲ್ವಲ್ಲಾ? ಬೇರೆಯವರು ನಮ್ಮ ಮನೆಯವರ ಬಗ್ಗೆ ಹೇಳುವವರೆಗೂ, ಅಲ್ಲಿಯ ಬೆಲೆ ನಮಗೆ ಗೊತ್ತಾಗಲಿಲ್ವಲ್ಲಾ ಎಂದು ಹಲವು ಬಾರಿ ನನಗೆ ಅನಿಸಿದೆ. ನಿಮ್ಮ ಟೆಕ್ನಿಷಿಯನ್ಸ್‌ ಬಿಡಿ ಗ್ರೇಟ್‌ ಎಂದೂ ಬೇರೆ ಭಾಷೆಯವರು ಹೇಳ್ತಾರೆ. ನಾನು ಟಿವಿಯಲ್ಲೊಮ್ಮೆ ಕ್ಯಾಮೆರಾಮೆನ್‌, ಲೈಟ್‌ ಮೆನ್‌ಗಳ ಬಗ್ಗೆಯೇ ಎಪಿಸೋಡ್ ಮಾಡಿದ್ದೆ. ಲೈಟ್‌ ಮೆನ್‌ಗಳು ನಮನ್ನೆಲ್ಲ ಬೆಳಕಲ್ಲಿ ತೋರಿಸುತ್ತಾರೆ. ಒಂದು ಪಟ್ಟಿ ಮೇಲೆ ಆರೇಳು ಗಂಟೆ ಅವರು ನಿಂತಿರುತ್ತಾರೆ. ಆದರೆ, ಅವರು ಬಡತನದಲ್ಲಿದ್ದು, ಮನೆಯ ಲೈಟ್‌ ಬಿಲ್‌ ಕಟ್ಟಲು ದುಡ್ಡಿಲ್ಲದ ಸ್ಥಿತಿಯಲ್ಲಿರುತ್ತಾರೆ. ಅವರಿಗೆ ನಾವು ಹಣ ಕೊಡಬೇಕು. ಆದರೆ, ಅವರಿಗೆ ಕೊಡುವ ದುಡ್ಡು ಬಹಳ ಕಡಿಮೆ. ಕೆಲಸದ ಕ್ರೇಜ್‌ ನಡುವೆ ಊಟ, ತಿಂಡಿಯನ್ನೂ ತಿನ್ನಲು ಮರೆತುಬಿಟ್ಟಿರುತ್ತಾರೆ.ಮುಂದುವರೆಯುವುದು...

15 views