ನಮ್ಮ ಮನೆಯಲ್ಲಿ ಇದೊಂದು ಆಚರಣೆ ಯಾವತ್ತೂ ಬಿಡಲ್ಲ

ಖ್ಯಾತ ಕಳನಟ ಸುಧೀರ್ ಲೈಫ್ ಸ್ಟೋರಿ ಭಾಗ 22

( ಪತ್ನಿ ಮಾಲತಿ ಸುಧೀರ್ ಅವರು ಕಂಡಂತೆ)ನಮ್ಮ ಮನೆಗೆ ಯಾರೇ ಕಲಾವಿದರು ಬರ್ಲಿ ಇವತ್ತಿಗೂ ಅಷ್ಟೆ. ಫಸ್ಟ್ ಕಾಫಿ ಕೊಡ್ಬೇಕು, ಊಟ ಹಾಕ್ಬೇಕು. ಇದು ನಮ್ಮ ಸುಧೀರ್ ಅವರು ನಂಗೆ ಕಲಿಸಿಕೊಟ್ಟ ಪಾಠ. ನಮ್ಮ ಮಕ್ಕಳೂ ಕೂಡ ಯಾರೇ ಕಲಾವಿದರು ಬಂದ್ರೂ ಚನ್ನಾಗಿ ಮಾತಾಡಿಸ್ತಿದ್ರು. ಇವತ್ತೂ ನೋಡಿ ತರುಣ್ ಆಫೀಸಿನಲ್ಲಿ ದಿನಾಲು ಅಡುಗೆ ಮಾಡಿಸ್ತಾನೆ. ಯಾರು ಬಂದು ಊಟ ಮಾಡಿದ್ರು ಅಂತೇನೂ ಅನ್ನೋದೇ ಇಲ್ಲ. ಯಾರೇ ಬರ್ಲಿ. ನಾವು ನಾಟಕದಲ್ಲೂ ಅಷ್ಟೇ ರಾಯರವಾರ ನಡೆಸ್ತೀವಿ. ಆದಿವ್ಸ ಒಂದು ಸ್ವೀಟ್, ಒಂದು ಅನ್ನ, ಒಂದು ಸಾರು, ಒಂದು ಪಲ್ಯ, ಒಂದು ಚಪಾತಿ, ಒಂದು ಹಪ್ಪಳ ಇಷ್ಟು. ನನ್ನ ನಾಟಕದ ಕಂಪೆನಿಯಲ್ಲಿ ಯಾರೇ ಬರ್ಲಿ ಊಟ ಹಾಕ್ತಿದ್ದೆ. ಈಗ ಕಂಪೆನಿ ಕ್ಲೋಸ್ ಆಗಿದ್ಯಲ್ಲಾ ಇನ್ನೂ ಶುರು ಆಗ್ಲಿಲ್ಲ. ತರುಣ್ ಕೂಡ ಹಾಗೇ ನಡೆಸ್ತಾನೆ. ನಮ್ಮ ಆಫೀಸ್‍ಗೆ ಗುರುವಾರ ಯಾರೇ ಹೋದ್ರೂ ಒಳ್ಳೆ ಸ್ವೀಟ್, ಒಳ್ಳೆ ಪೂಜೆ ಎಲ್ಲಾ ಸಿಗುತ್ತೆ. ಬೇರೆ ದಿವ್ಸ ಯಾರಾದ್ರೂ ಬಂದ್ರುನೂ ಹೊಟ್ಟೆ ತುಂಬಾ ಊಟ ಹಾಕಿ ಕಳಿಸ್ತಾನೆ ಅವರ ಆಫೀಸಲ್ಲಿ.ಮುಂದುವರೆಯುವುದು…

25 views