ನಮ್ಮೊಲುಮೆಗೆ - ಜಯತೀರ್ಥ ಅವರ ಕವನ

Updated: Jan 28, 2021ಎದೆಗೋಡೆಯ ಮೇಲೆ ಲಗತ್ತಿಸಿದ,

ನಿನ್ನಯ ಭಾವಚಿತ್ರದಲ್ಲಿ ಮುಗುಳ್ನಗೆಯು,

-ಮೌನವಾಗಿಯೇ ದಂಗೆಯೆದ್ದಿಹುದು.

ನಾನೊಬ್ಬ ಧ್ಯಾನಸ್ಥನಂತೆ ವರ್ತಿಸಿದರೂ,-

ಭವಿಷ್ಯವೆಲ್ಲ ಇಂದು ನಾನಿನ್ನಿನಿಯೆಂಬ ವರ್ತಮಾನ ಭೋದಿಸುತ್ತಿದೆ.

ನಾ ನಿನ್ನ ನೆನೆದಿರದ, ಆರಾಧಿಸದ ಕ್ಷಣಗಳಿಲ್ಲ,

ಆದರೂ ನಿನ್ನ ಪಾಲಿಗೆ ನಿಷ್ಪ್ರಯೋಜಕ.,ಕಾರಣ...!?

ಪ್ರೇಮ-ಕಾಮನೆಗಳನೆಲ್ಲ ಮುಗ್ಧತೆಯಿಂದಲೇ ಕಾಗದದ ಮೆಲೆ ಕಾರುತ್ತೇನೆ,

ಆದರೇ, ಹಾಸಿಗೆಯ ಎಂಜಲಲಿ ಭಾವಗಳನು ಮಿಯಿಸಲಾರೆ.

ಇದು ನನ್ನ ವಾದವಲ್ಲ, ಪ್ರೀತಿಗೆ ಹೊಸ ಅರ್ಥದ ಮುನ್ನುಡಿ.

ತಿರಿಸಲಾಗದಷ್ಟು, ಹತಾಶೆಗಳೆಲ್ಲ ನಿನ್ನಯ ಕಂಗಳ ಸುತ್ತ ಹೆಪ್ಪುಗಟ್ಟಿವೆ,

ಕಂಬನಿ ಮುಡಿದರೂ ನೆಮ್ಮದಿ ಮೂಡಲಿಕ್ಕಿಲ್ಲ!,...

ಹಾಡಿದರೂ ಕೋಪ ಕರಗಲಿಕ್ಕಿಲ್ಲ!,...

ಹೀಗಾಗಿ....ನನ್ನ ಸಲಹೆ, ನಿನ್ನ ನೂತನ ಪ್ರಯತ್ನ"ಕವನ".
ತೀರ್ಥನ ಕಾಲಮ್

334 views