
ನೀಗ್ರೋ ಜಾನಿ ನನಗೆ ಹೊಡೆದು ಆಮೇಲೆ ಕ್ಷಮೆ ಕೇಳಿದ್ದ
ಮಿಮಿಕ್ರಿ ದಯಾನಂದ ಲೈಫ್ ಸ್ಟೋರಿ ಭಾಗ 15

ನನಗೆ ಜೀವನ ಸಾರ್ಥಕ ಎನ್ನುವಂತಹ ಭಾವನೆ ಬಂತು. ಒಂದು ಲಕ್ಷ ಸಿಕ್ಕಿ ಬಿಟ್ಟರೆ ಕೆಲಸ ಬಿಟ್ಟು, 70 ಸಾವಿರ ಭದ್ರತಾ ಠೇವಣಿ ಇಟ್ಕೊಂಡು, ಬೋಗ್ಯಕ್ಕೆ ಮನೆ ತೆಗೆದುಕೊಂಡು ರಾಜ್ಕುಮಾರ್, ಎಸ್ಪಿಬಿ ಅವರ ಕ್ಯಾಸೆಟ್ಗಳನ್ನು ಕೇಳುತ್ತ ಮನೆಯಲ್ಲಿಯೇ ಕುಳಿತುಬಿಡೋಣ ಎನಿಸಿಬಿಡ್ತು. ರಾಜ್ಕುಮಾರ್ ಅವರೇ ಹೊಗಳಿದ ಮೇಲೆ ಜೀವನದಲ್ಲಿ ಇನ್ನೇನು ಬೇಡ ಎನ್ನುವಂತಾಯ್ತು.
ನಾನು ಬಹಳ ಮೆರೆಯುತ್ತೇನೆ ಎಂಬ ಭಾವನೆಯಿಂದ ಚಿತ್ರೀಕರಣದಲ್ಲಿ ಲಾಠಿ ಜಾರ್ಜ್ ವೇಳೆ ನೀಗ್ರೋ ಜಾನಿ ನೋವಾಗುವಂತೆ ನನಗೆ ಹೊಡೆದಿದ್ದ. ಆದರೆ, ಈ ಮಿಮಿಕ್ರಿ ಮಾಡಿದ ಮೇಲೆ ನೀನು ಇಷ್ಟು ದೊಡ್ಡ ಕಲಾವಿದ ಎಂಬುದು ಗೊತ್ತಿರಲಿಲ್ಲ. ಕ್ಷಮಿಸು ಎಂದು ನನ್ನನ್ನು ತಬ್ಬಿಕೊಂಡಿದ್ದ.
ಖುಷಿಯಿಂದ ಬಂದ್ರೆ ಕ್ಯಾಸ್ಟ್ಯೂಮ್ ಅವನು ನನ್ನ ಉಡುಪನ್ನು ಇನ್ನೊಂದು ಕಡೆ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ತೆಗೆದುಕೊಂಡು ಹೋಗಿಬಿಟ್ಟಿದ್ದ. ಶೂಟಿಂಗ್ಗೆ ಬಳಸುತ್ತಿದ್ದ ಬುಲೆಟ್ ಗಾಡಿಯನ್ನೇ ತೆಗೆದುಕೊಂಡು ರಾಮನಗರದ ಬಳಿ ಹೊರಟೆ. ಪೊಲೀಸ್ ಯೂನಿಫಾರಂನಲ್ಲೇ ಇದ್ದೆ. ರಸ್ತೆಯಲ್ಲಿ ಎಲ್ಲ ನಮಸ್ಕಾರ ಹಾಕುತ್ತಿದ್ರು, ನಾನು ನಮಸ್ಕಾರ ಹಾಕಿಕೊಂಡೆ ಹೋಗುತ್ತಿದ್ದೆ. ರಾಮನಗರದ ಚಿತ್ರೀಕರಣದ ಸ್ಥಳದಲ್ಲಿ ಗಾಡಿ ನಿಲ್ಲಿಸುತ್ತಿದ್ದಂತೆ ರಾಜ್ಕುಮಾರ್ ಅವರು, ನಂಬುತ್ತಾರೆ ಬಿಡಿ. ಯಾರು ನಿಮ್ಮನ್ನು ಪೊಲೀಸ್ ಅಲ್ಲ ಎನ್ನುವುದಿಲ್ಲ. ಅಷ್ಟು ಚೆನ್ನಾಗಿದೆ ನಿಮ್ಮ ಪರ್ಸ್ನಾಲಿಟಿ ಎಂದ್ರು. ಅಣ್ಣಾ ಎಂದು ಕೈಮುಗಿದೆ. ನಂತರದಲ್ಲಿ ರಾಜ್ಕುಮಾರ್ ಸಿನಿಮಾಗಳಲ್ಲಿ ನಿರಂತರವಾಗಿ ಕರೆಯುತ್ತಿದ್ರು. ಆನಂದ್ ಸಿನಿಮಾದಲ್ಲಿಯೂ ನಾನು ಇನ್ಸ್ಪೆಕ್ಟರ್ ಪಾತ್ರ ಮಾಡಿದ್ದೇನೆ. ರಾಘವೇಂದ್ರ ರಾಜ್ಕುಮಾರ್ ಅವರ ಮೊದಲ ಸಿನಿಮಾದಲ್ಲಿಯೂ ನಟಿಸಿದ್ದೇನೆ.
ಮುಂದುವರೆಯುವುದು...