ನಿಜವಾದ ಮೇಸ್ಟ್ರು ಹೇಗಿರ್ತಾರೆ ಎಂದು ದಯಾನಂದ ಅವರು ಹೇಳ್ತಾರೆ...

Updated: Sep 17, 2021

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 36
ಒಮ್ಮೆ ಮೇಸ್ಟ್ರು ಬಳಿ ಒಬ್ಬ ಹುಡುಗ ಹೋಗಿ ಸರ್‌, ನಾನು ಮೆಸ್ಟ್ರಾದೆ ಎಂದು ಹೇಳಿದನಂತೆ. ಯಾಕೋ ಡಾಕ್ಟರ್‌, ಲಾಯರ್‌ ಆಗಬಾರದಿತ್ತ ಎಂದು ಕೇಳಿದ್ರಂತೆ. ನಿಮಗೆ ನನ್ನ ನೆನಪಿಲ್ಲ ಅಲ್ವಾ ಎಂದನಂತೆ. ಹೌದು ನೆನಪಿಲ್ಲ ಎಂದು ಅವರು ಹೇಳಿದ್ರಂತೆ. ನಾನು ನೆನಪಿಸುತ್ತೇನೆ. ಒಬ್ಬ ಹುಡುಗನ ಕೈಲಿ ಒಂದು ಉಂಗುರ ಇತ್ತು. ಅದನ್ನು ನಾನು ಕದ್ದೆ. ಅವನು ಅವರ ಮನೆಯವರನ್ನು ಕರೆದುಕೊಂಡು ಬಂದ. ಆಗ ನೀವು ಮನೆಯವರಿಗೆ ನೀವುಗಳು ಹುಡುಕುವ ಹಾಗಿಲ್ಲ. ನಾನೇ ಹುಡುಕಿ ಕೊಡ್ತೇನೆ ಎಂದ್ರಿ. ಎಲ್ಲ ಹುಡುಗರಿಗೂ ಕಣ್ಣು ಮುಚ್ಚಲು ಹೇಳಿ. ಎಲ್ಲರ ಜೇಬಿಗೆ ಕೈ ಹಾಕಿದ್ರಿ. ಆಗ ನನ್ನ ಜೇಬಿನಲ್ಲಿ ನಿಮಗೆ ಉಂಗುರ ಸಿಕ್ತು. ಆದರೆ, ನೀವು ನನ್ನ ಹೆಸರು ಹೇಳಲಿಲ್ಲ. ಬದಲಿಗೆ ನಿಮಗೆ ಉಂಗುರ ಸಿಕ್ತಲ್ಲ ಹೋಗಿ. ಯಾರು ಎಂಬುದು ಬೇಡ ಎಂದ್ರಿ. ನನಗೆ ಹೊಡೆಯಲಿಲ್ಲ. ಬಡಿಯಲಿಲ್ಲ. ಯಾಕೆ ಸರ್‌. ನನಗೆ ನೀವು ಹೊಡೆಯಬಹುದಿತ್ತಲ್ವಾ ಎಂದನಂತೆ. ಇಲ್ಲಪ್ಪ, ಯಾವ ಹುಡುಗ ಎಂಬುದು ನನಗೆ ಗೊತ್ತಾಗಬಾರದೆಂದು ನಾನೂ ಕಣ್ಣು ಮುಚ್ಚಿಕೊಂಡಿದ್ದೆ. ಇದು ನಿಜವಾದ ಮೇಸ್ಟ್ರು. ಅವರು ಮಕ್ಕಳ ನಡುವೆ ತಾರತಮ್ಯವನ್ನೇ ತೋರಿಸುವುದಿಲ್ಲ. ಮೇಸ್ಟ್ರು ಮತ್ತು ವಿದ್ಯಾರ್ಥಿಗಳ ನಡುವೆ ಬಹಳ ಒಳ್ಳೆಯ ಸಂಬಂಧ ಇರುತ್ತದೆ.ಮುಂದುವರಿಯುವುದು...

21 views