ನಾಟಕದಲ್ಲಿ ಅಣ್ಣಾವ್ರು ಮಾಡುತ್ತಿದ್ದ ಪಾತ್ರ?

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 93


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
1958ರಲ್ಲಿ ಲೆಗ್‌ ಹಾರ್ಮೋನಿಯಂ ತೆಗೆದುಕೊಂಡಿದ್ದು. ಅಣ್ಣಾವ್ರು ಅದನ್ನು ಜತನದಿಂದ ಕಾಪಾಡಿಕೊಂಡಿದ್ದರು. ಅದಕ್ಕೆ ಗವಸು ಹಾಕಿಟ್ಟಿದ್ದರು. ಮನಸ್ಸಿಗೆ ಬೇಜಾರಾದಾಗ, ಬಿಡುವಾಗಿದ್ದ ಸಂದರ್ಭದಲ್ಲಿ ಹಾರ್ಮೋನಿಯಂ ಬಾರಿಸುತ್ತಿದ್ದರು. ಅವರು ನಾಟಕಗಳಲ್ಲಿ ರಾಮನ ಪಾತ್ರ ಮಾಡುತ್ತಿದ್ದರು. ರಾಮನ ಪಾತ್ರ ಮಾಡುವವರು 36 ಹಾಡುಗಳನ್ನು ಹಾಡಬೇಕು. ಹನುಮಂತನ ಪಾತ್ರ ಮಾಡುವವನು 50 ಹಾಡುಗಳನ್ನು ಹಾಡಬೇಕು. ಒಂದೊಂದು ಹಾಡು 10 ನಿಮಿಷ ಇರುತ್ತದೆ. ಕರ್ನಾಟಕ ನಾಟಕ ಸಭಾದಲ್ಲಿ ನಾವು ರಾಮಾಯಣ ನಾಟಕ ಮಾಡುತ್ತಿದ್ದೆವು. ಆಗ ರಾಮಾಯಣ ನಾಟಕದಲ್ಲಿ ನಾನು ಲಕ್ಷ್ಮಣ ಪಾತ್ರ ಅಥವಾ ಕೈಕೇಯಿ ಪಾತ್ರ ಮಾಡುತ್ತಿದ್ದೆ. ದಶರಥನ ಪಾತ್ರವನ್ನು ಜಿ.ವಿ.ಅಯ್ಯರ್‌ ಮಾಡುತ್ತಿದ್ರು. ಅವರು ಹಾಡುವಾಗ ಬಾಯಿಂದ ಜೊಲ್ಲು ಸುರಿಯುತ್ತಿತ್ತು. ಕೊನೆಗೆ ಅದು ಗಡ್ಡದಿಂದ ಇಳಿಯುತ್ತಿತ್ತು.


ನಾನು ಬೆಳೆದು ಬಂದ ಸಂಸ್ಕಾರ, ಸಂಸ್ಕೃತಿಗೆ ಹೊಂದಿಕೆಯಾಗದ ಕಾರಣ ಅಲ್ಲಿ ನಾಟಕ ಬಿಟ್ಟು, ಪುನಃ ಓದಲು ಶುರು ಮಾಡಿದೆ. ಕರ್ನಾಟಕ ನಾಟಕ ಸಭಾದಲ್ಲಿ ರಾಮನ ಪಾತ್ರವನ್ನು ರಾಮರಾಯರು ಮಾಡುತ್ತಿದ್ರು. ಬೇಡರ ಕಣ್ಣಪ್ಪ ನಾಟಕದಲ್ಲಿ ಕಣ್ಣಪ್ಪ ಮಾಡುತ್ತಿದ್ರು.ಅದ್ಭುತ ನಟನೆ ಅವರದು. ಇವೆಲ್ಲ ನಮ್ಮ ನಾಟಕದ ಅನುಭವಗಳು.ಮುಂದುವರೆಯುವುದು…

20 views