ನಾಟಕದಲ್ಲಿ ಶಂಕರ್‌ನಾಗ ಡೈರೆಕ್ಟರ್‌ ನಾನು ಟಿಕೆಟ್‌ ಕೌಂಟರ್

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 76

( ಶಂಕರ್‌ನಾಗ್‌ ಕುರಿತಂತೆ ನಟ ಅವಿನಾಶ ಅವರ ನೆನಪುಗಳು)ಸ್ಪಂದನ ಗ್ರೂಪ್ ರಿಹರ್ಸಲ್ಎಲ್ಲಾ ಯಾವಾಗ್ಲೂ ‘ಫೋರ್ಟ್’ ಹೈ ಸ್ಕೂಲ್ ಚಾಮರಾಜಪೇಟೆಯಲ್ಲಿ ನಡಿತಾಇತ್ತು. ಅವಾಗ್ಲೆ ನಾವು ಫಸ್ಟ್ ಶಂಕರ್ ನಾಗ್ ನ ನೋಡಿದ್ದು. ಅವ್ರನ್ನ ನೋಡಿದ ಕೂಡಲೇ ಬಹಳ ಇಷ್ಟ ಆಗ್ಬಿಟ್ರು. ಯಾಕಂದ್ರೆ ತುಂಬಾ ಪ್ರೊಫೆಷ್ನಲ್, ಹೆಚ್ಚು ಬೇಡ್ದೆ ಇರೋ ಮಾತುಗಳು ಇಲ್ಲ, ಮೊದಲನೇ ದಿನ ರಿಹರ್ಸಲ್ ಅಲ್ಲೇ ಹೀಗೀಗೆ ಇರ್ಬೇಕು ಅಂತ ಹೇಳಿ ಶುರು ಮಾಡಿದ್ರು. ಅವಾಗ ನನಿಗೆ ಅನಿಸಿತ್ತು ಈ ಮನುಷ್ಯ ಬೇರೆ ತರದವ್ರು ಅಂತ. ಅಷ್ಟೊತ್ತಿಗಾಗ್ಲೇ ಹೀ ವಾಸ್ ಅ ಬಿಗ್ ಸ್ಟಾರ್. ಅವಾಗಾಗ್ಲೇ ದೊಡ್ಡ ದೊಡ್ಡ ಸಿನಿಮಾ ಮಾಡ್ಬಿಟ್ಟಿದ್ರು. ನಮಿಗೆಲ್ಲಾ ತುಂಬಾ ಫ್ಯಾಸಿನೇಷನ್, ಹೆಚ್ಚಾಗಿ ಅನಂತ್ ನಾಗ್ ಡೈಲಿ ರಿಹರ್ಸಲ್ ಗೆ ಬರ್ತಿದ್ರಲ್ವ, ಅವ್ರನ್ನ ನೋಡೊದೇ ನಮಿಗೆ ದೊಡ್ಡ ಖುಷಿ ಅವಾಗ. ಆ ನಾಟಕದಲ್ಲಿ ನಾವು ಬ್ಯಾಕ್ ಸ್ಟೇಜ್ ಮಾಡ್ತಿದ್ವಿ, ಆಕ್ಟಿಂಗ್ ಇರ್ಲಿಲ್ಲ. ಅವಾಗ ನನಿಗೆ ಪರಿಚಯ ಶುರುವಾಯ್ತು.ಮುಂದುವರೆಯುವುದು…

17 views