ನಾಟಕದಲ್ಲಿ ಸಿನಿಮಾ ಹಾಡಿಗೆ ಡಾನ್ಸ್‌ ಮಾಡ್ತಿದ್ದೆ

ಖ್ಯಾತ ಖಳನಟ ಸುಧೀರ್ ಲೈಫ್ ಸ್ಟೋರಿ ಭಾಗ 3

(ಪತ್ನಿ ಮಾಲತಿ ಸುಧೀರ್ ಅವರು ಕಂಡಂತೆ)ನಾನು ಮಾರನೇ ದಿವ್ಸ ಹೋದೆ. ತಕ್ಷಣ ನಂಗೆ “ಡ್ಯಾನ್ಸ್ ಮಾಡು” ಅಂತ ಹೇಳಿದ್ರು. ನಂಗೆ ನಾಚಿಕೆ ಆಯ್ತು. “ಯಾವ ಹಾಡಿಗೆ ಡ್ಯಾನ್ಸ್ ಮಾಡ್ಬೇಕು?” ಅಂತ ಕೇಳಿದ್ರೆ, ಅವಾಗ ಮಧ್ಯಾಹ್ನ ಒಂದು ಗಂಟೆಗೆ ಧಾರವಾಡ ಸ್ಟೇಷನಲ್ಲಿ ಕನ್ನಡ ಹಾಡಗಳು ಬರ್ತಿತ್ತು. ಅವರು ಟಿವಿ ಹಾಕುವಾಗ ಕರಕ್ಟಾಗಿ “ಏರಿ ಮೇಲೆ ಏರಿ ಮೇಲೆ ಕೆಳಗೆ ಹಾರಿ ಹಕ್ಕಿ ಬಂದು ಕೂಂತೈತಲ್ಲೋ”ಹಾಡು ಬಂತು. “ಇದಕ್ಕೇ ಡ್ಯಾನ್ಸ್ ಮಾಡು” ಅಂದ್ರು. ನಾನು ಆಹಾಡಿಗೆ ಏನು ಕುಣಿದ್ನೋ ಏನೋ ನಂಗೆ ಇವತ್ತಿನ ವರೆಗೂ ಗೊತ್ತಿಲ್ಲ. ಕಲ್ಪನಾಜೀಗೆ ತುಂಬಾ ಇಷ್ಟ ಆಯ್ತು. “ಎಷ್ಟು ಚನ್ನಾಗಿ ಡ್ಯಾನ್ಸ್ ಮಾಡಿದ್ಳು ಇವಳು”ಅಂತ ಹೇಳಿ ಮಾರನೇ ದಿವ್ಸ ಅವರ ಟ್ರೂಪ್‍ಗೆ ನನ್ನ ಹಾಕೊಂಡ್ರು.ಮುಂದುವರೆಯುವುದು…

13 views