ನಾನು ಕಲಾವಿದನಾಗಲು ಕಾರಣ…

ಹಿರಿಯ ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರ ಲೈಫ್ ಸ್ಟೋರಿ - ಭಾಗ 1ನಮ್ಮೂರಿಗೆ ಒಂದು ಕಂಪೆನಿ ಬಂತು. ನಮ್ಮ ಸೋದರ ಮಾವ ಗೋಪಾಲ ರಾವ್, ನಮ್ಮಣ್ಣ ಅನಂತ್ ಕುಮಾರ್, ನಮ್ಮಕ್ಕ ಹುಲ್ಲಿದೇವಿ ಇವರೆಲ್ಲರಿಗೂ ನಾಟಕ ನೋಡುವ ಚಟ ಇತ್ತು. ಆಗ ನಾನು ಸಣ್ಣ ಹುಡುಗ ನಾಟಕ ನೋಡಕ್ಕೆ ಅಂತ ನನ್ನೂ ಕರ್ಕೊಂಡು ಹೋಗ್ತಿದ್ರು. ಮಾರನೇ ದಿವ್ಸ ಆ ಕಲಾವಿದರೆಲ್ಲಾ ಊರಲ್ಲಿ ಓಡಾಡ್ಬೇಕಾದ್ರೆ “ತಗೊಳ್ರಿ” ಅಂತ ಪುಕ್ಕಟೆ ಟೀ, ಬೀಡಿ ಕಟ್ಟು ಕೊಡೋರು. ನಂಗೆ “ಅಲೆಲೆ ಒಬ್ಬ ಕಲಾವಿದ ಆದ್ರೆ ಪುಕ್ಕಟೆ ಟೀ ಕೊಡ್ತಾರೆ! ಮಾರ್ಯಾದಿ ಕೊಡ್ತಾರೆ! ಎಂತಹ ಒಂದು ವಿಶೇಷವಾದ ದಿನ ಇದು.


ಕಲಾವಿದರಿಗೆ ಎಷ್ಟು ಮರ್ಯಾದಿ ಕೊಡ್ತಾರೆ? ನಮ್ಮಪ್ಪ ಆಫೀಸ್‍ನಲ್ಲಿ ಕೂತ್ಕೊಂಡು ಸಂಬಳ ಎಲ್ಲಾ ತಗೊಂಡ್ರೂ “ಏನೋ”ಅಂತ ಮಾತಾಡಿಸ್ತಾರೆ. ರೈತರಿಗಂತೂ ಪಾಪ ಕೇಳೋರೇ ಇಲ್ಲ. ಯಾರು ಏನೇ ಮಾಡಿದ್ರೂ ಮರ್ಯಾದಿ ಇಲ್ಲ. ಕಲಾವಿದ ಇವನು ಶೇವಿಂಗ್ ಮಾಡಿರಲ್ಲ, ಮುಖವೇ ತೊಳ್ಕೊಂಡಿರಲ್ಲ, ಕಣ್ಣಲ್ಲಿ ಜುಗ್ಗು ಕಾಣಿಸ್ತಾ ಇರುತ್ತೆ ಕಲಾವಿದನಿಗೆ. ಆದ್ರೂ “ಏಯ್ ನಿನ್ನೆ ಸಕತ್ತಾಗಿ ಮಾಡ್ದೆ ಕಣೋ, ಆಮೇಲೆ ಕೊಡುವಿಯಂತೆ ಟೀ ದುಡ್ಡು ಬೇಡ ಹೋಗು”ಅನ್ನೋರು. ಆಗ “ಕಲಾವಿದನಿಗೆ ಬೇರೆ ಏನೋ ಮರ್ಯಾದಿ ಇದೆ. ನಾನು ಕಲಾವಿದ ಆಗ್ಬೇಕು”ಅಂತ ಅವತ್ತು ನಾನು ಡಿಸೈಡ್ ಮಾಡ್ಕೊಂಡೆ ಸರ್.ಮುಂದುವರೆಯುವುದು…

41 views