ನಾನು ಕೆಲಸ ಬಿಟ್ಟಾಗ ನನ್ನ ತಾಯಿ ಗಾಬರಿಯಾಗಿದ್ದರು

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 135

(ಶಂಕರ್ ನಾಗ್ ಅವರ‌ ಒಡನಾಡಿ‌ ಬಿ.ಸುರೇಶ ಅವರ ನೆನಪುಗಳು)
ಸುಮಾರು 1987 ನೇ ಇಸವಿಯಲ್ಲಿ ನಾನು ಕೆಲಸ ಬಿಟ್ಟಾಗ ಮೊದಲಿಗೆ ನನ್ನ ತಾಯಿ ಗಾಬರಿಯಾಗಿ ಬಿಟ್ಟಿದ್ದರು. ಅವ್ರು ಆಗ ಶಂಕರ್ ಗೆ ”ನೋಡೋ ಶಂಕರ ಕೆಲ್ಸ ಬಿಟ್ಬಿಟ್ಟ ಕಣೋ ನನ್ನ ಮಗ”ಅಂತ ಹೇಳಿದ್ರು. ಅವ್ರು ನನಿಗೆ ಫೋನ್ ಮಾಡಿ “ಯಾಕೋ ಕೆಲ್ಸ ಬಿಟ್ಬಿಟ್ಟೆ”ಅಂತ ಕೇಳಿದ್ರು. ನಾನು “ ಇಲ್ಲ ನಾನು ಪೂರ್ಣಾವಧಿ ರಂಗಭೂಮಿ ಮಾಡ್ಬೇಕೂ ಅಂತ ಇದ್ದೀನಿ, ಅಂದೆ. ನನ್ನ ಕನಸು ಬೇರೇನೋ ಇತ್ತು, ರಂಗ ಮುಖೇನ ಶಿಕ್ಷಣ ಅಂತ, ಈ ಪಿ.ಯು.ಸಿ. ಕಾಲೇಜ್ ಟೆಕ್ಸ್ಟ್ ಬುಕ್ಕಲ್ಲಿ ಇರೋ ನಾಟಕಗಳನ್ನ ಅಲ್ಲೇ ಮಾಡೋದು ಅಂತ. ಒಂದು ವರ್ಷ ಟ್ರೈ ಮಾಡ್ದೆ. ಇಟ್ ವಾಸ್ ನಾಟ್ ಸಕ್ಸಸ್ ಫುಲ್, ತುಂಬಾ ಹಣ ಕಳ್ಕೊಂಡ್ವಿ. ಆ ಮೇಲೆ ಶಂಕರ್ ರಾಮಕೃಷ್ಣ ಹೆಗಡೆಯವರಿಗೆ ಹೇಳಿ, ಅವರ ವ್ಯಾನನ್ನು ನಮಿಗೆ ಕೊಡ್ಸಿ ಟ್ರಾನಸಪೋರ್ಟ್ ದುಡ್ಡು ಕಡಿಮೆ ಆಗುವ‌ ಹಾಗೆ ಮಾಡಿದ್ರು ಶಂಕರ್ ಅವರು. ಹಾಗಾಗಿ ಎರಡನೇ ವರ್ಷ ಲಾಭ ಮಾಡಿದ್ವಿ.


ಆದ್ರೆ ಈ ಪ್ರೋಸೆಸ್ಸಲ್ಲಿ ನಾನು ಕೆಲ್ಸ ಬಿಟ್ಟಿದ್ರಿಂದ ಸಿನಿಮಾಕ್ಕೆ ಬರುವ ಹಾಗಾಯ್ತು. ಆ ವರೆಗೂ ನಾನು ಬರೆದಿದ್ದಂತಹ ಅಥವಾ ಏನೇನು ಮಾಡಿದ್ನೋ ಅಲ್ಲಿ ನನ್ನ ಹೆಸರು ಹಾಕದೆ,ಹಿಂದೆ ಎಲ್ಲೋ ಇದ್ದೆ. 1988ರಲ್ಲಿ ನನ್ನ ಹೆಸರು ಹಾಕಿಕೊಂಡು ಮಾಡಿದ ಮೊದಲನೇ ಸಿನಿಮಾ ‘ಮಿಥಲೆಯ ಸೀತೆಯರುʼ. ಅದಕ್ಕೆ ಸ್ಕ್ರಿಪ್ಟ್ ಹಾಗೂ ಡೈಲಾಗ್ ಬರ್ದಿದ್ದೆ. ಅದ್ರಲ್ಲಿ ಒಂದು ಪಾತ್ರದಲ್ಲಾದರೂ ಶಂಕರ್ ಇರ್ಲೇಬೇಕು ಅನ್ನುವ ನನ್ನ ಒತ್ತಡಕ್ಕೆ ಅವ್ರು ದುಡ್ಡು ತಗೊಳದೆ ಒಂದು ಇನ್ಸಪೆಕ್ಟರನ ಪಾತ್ರ ಮಾಡಿದ್ರು ಅದ್ರಲ್ಲಿ. ಆಗ ಹಿಂದೆ ಏನು ತಮಾಷೆ ಮಾಡ್ತಿದ್ರೂ ಹಾಗೆ “ಸುರೇಶನ ಸಿನಿಮಾ, ಸುರೇಶನ ಬೈಕೇ ಆಗ್ಬೇಕು”ಅಂತ ನನ್ನ ಬೈಕನ್ನೇ ಬಳಸ್ಕೊಂಡು ಅವ್ರು ಇನ್ಸಪೆಕ್ಟರನ ಪಾತ್ರ ಮಾಡಿದ್ರು.


ಅದಾಗಿ ನಾನು ಪೂರ್ಣಾವಧಿ ಸಿನಿಮಾ ನಾಟಕ ಅಂತ ಬಂದ ಕಾಲದಲ್ಲೇ ನಾನು 1990 ರಲ್ಲಿ ಒಂದು ಸ್ಕ್ರಿಪ್ಟ್ ಮಾಡ್ದೆ. ಆಗ ಶಂಕರ್ ‘ಸಿ.ಬಿ.ಐ.ಶಂಕರ್ ಅಥವಾ ಎಸ್.ಪಿ.ಸಾಂಗ್ಲಿಯಾನ ಯಾವುದೋ ಸಿನಿಮಾದ ಶೂಟಿಂಗಲ್ಲಿದ್ದ ಟೈಮಲ್ಲಿ ಹೋಗಿ ಅವ್ರಿಗೆ ಕತೆ ಹೇಳ್ದೆ. ಅವ್ರು ತುಂಬಾ ಮೆಚ್ಕೊಂಡ್ರು “ತುಂಬಾ ಚೆನ್ನಾಗಿದೆ ಕತೆ, ಯಾವಾಗ ಮಾಡ್ತೀಯ ಸಿನಿಮಾ? ನಾನು ಇದ್ರಲ್ಲಿ ಆಕ್ಟ್ ಮಾಡ್ತೀನಿ”ಅಂತೆಲ್ಲಾ ಹೆಳಿದ್ರು. ನಾನು “ಇಲ್ಲ ಪ್ರೊಡ್ಯೂಸರ್ ಸಿಕ್ಕಿಲ್ಲ ಸ್ಕ್ರಿಪ್ಟ್ ಬರ್ದಿದ್ದೀನಿ” ಅಂತ ಹೇಳ್ದೆ. “ ಥೂ ಬಡ್ಡಿ ಮಗನೆ, ಆಯ್ತು ನಾನು ವ್ಯವಸ್ಥೆ ಮಾಡ್ತೀನಿ ‘ಜೋಕುಮಾರ ಸ್ವಾಮಿ’ಮಾಡ್ತಾ ಇದ್ದೀವಿ ಅದಾದ್ಮೇಲೆ ನಮ್ಮ ಪ್ರೊಡಕ್ಷನಲ್ಲಿ ನಿನ್ದೇ ಸಿನಿಮಾ, ನೀನೇ ಡೈರೆಕ್ಟರ್” ಅಂತ ಹೇಳಿದ್ರು. ಆದ್ರೆ ‘ಜೋಕುಮಾರ ಸ್ವಾಮಿʼ ಯಲ್ಲಿ ಅವ್ರೇ ತೀರ್ಕೊಂಡು ಬಿಟ್ರು 1990 ರಲ್ಲಿ.ಮುಂದುವರೆಯುವುದು…

70 views