ನಾನು ಮಾಡಿದ ಮೈಸೂರ್ ಪಾಕ್‌ನ ಫಜೀತಿ

ಮಿಮಿಕ್ರಿ ದಯಾನಂದ ಲೈಫ್ ಸ್ಟೋರಿ ಭಾಗ 71ಕೊಪ್ಪಳದಲ್ಲಿದ್ದಾಗ ಕೆಲವೊಮ್ಮೆ ನಾನೇ ಅಡುಗೆ ಮಾಡುತ್ತಿದ್ದೆ. ಮೈಸೂರು ಪಾಕ್‌ ಮಾಡಬೇಕೆಂದು ಒಮ್ಮೆ ಅನಿಸಿತು. ಕಡಲೇಹಿಟ್ಟೆಲ್ಲ ಹಾಕಿ ಚೆನ್ನಾಗಿ ಕಲಸಿದೆ. ಗಟ್ಟಿಯೇ ಆಗುತ್ತಿರಲಿಲ್ಲ. ಅದನ್ನು ಅಲ್ಲೇ ಬಿಟ್ಟು, ಖಾನಾವಳಿಗೆ ಹೋಗಿ ಊಟ ಮಾಡಿ ಬಂದು ನೋಡಿದ್ರೆ, ಸ್ಪೂನ್‌ ಪಾತ್ರೆವೊಳಗೆ ಗಟ್ಟಿಯಾಗಿ ಅಂಟಿಕೊಂಡು ಬಿಟ್ಟಿತ್ತು. ಹುಳಿ ತೆಗೆದುಕೊಂಡು ಹೊಡೆದು ತೆಗೆದೆ. ಆ ಸಮಯಕ್ಕೆ ಸರಿಯಾಗಿ ಮಹಿಳೆಯೊಬ್ಬರು ಭಿಕ್ಷೆ ಕೇಳಿಕೊಂಡು ಬಂದ್ರು. ಒಂದು ಪೀಸ್‌ ಅವರಿಗೂ ಕೊಟ್ಟೆ. ಅದಾದ ಮೇಲೆ ಅವರು ಮತ್ತೆಂದು ಭಿಕ್ಷೆ ಕೇಳಿಕೊಂಡು ಬಂದೇ ಇಲ್ಲ. ಅಷ್ಟೊಂದು ಅದ್ಭುತವಾಗಿ ಆಗ ಅಡುಗೆ ಮಾಡುತ್ತಿದ್ದೆ.
ಮುಂದುವರೆಯುವುದು...

19 views