
ನಾನು ಮಿಮಿಕ್ರಿಯಲ್ಲಿ ಸಾಕಷ್ಟು ಹಾಡಿಗೆ ಲೇವಡಿ ಮಾಡಿದ್ದೇನೆ
ಮಿಮಿಕ್ರಿ ದಯಾನಂದ ಲೈಫ್ ಸ್ಟೋರಿ ಭಾಗ 35

ನಾನು ಮಿಮಿಕ್ರಿಯಲ್ಲಿ ಸಾಕಷ್ಟು ಮಂದಿಗೆ ಲೇವಾಡಿ ಮಾಡಿದ್ದೇನೆ. ಯಾರಿಗಾದ್ರೂ, ಗಾಯ ಮಾಡಿದರೆ, ಅದಕ್ಕೆ ತಕ್ಷಣವೇ ಮುಲಾಮು ಹಚ್ಚಬೇಕು ಎಂದು ಸಿದ್ಧಾಂತ ನನ್ನದು. ಒಮ್ಮೆ ಜೋಕ್ ಮಾಡ್ತಾ, ಉಪೇಂದ್ರ ಬಗ್ಗೆ ಮಾತನಾಡಿದೆ. ಪ್ರೀತ್ಸೆ, ಪ್ರೀತ್ಸೆ, ಕಣ್ಣು ಮುಚ್ಚಿ ನನ್ನ ಪ್ರೀತ್ಸೆ. ಕಣ್ಣು ಮುಚ್ಚಿಯೇ ಪ್ರೀತಿಸಬೇಕು. ಕಣ್ಣು ಬಿಟ್ರೆ ನೋಡಲು ಆಗುವುದಿಲ್ಲ ಎಂದು ಹೇಳಿಬಿಟ್ಟೆ. ತಕ್ಷಣವೇ ನೋಡಕ್ಕೇ ಆಗುವುದಿಲ್ಲ ಅಷ್ಟು ಪವರ್ಫುಲ್ ಆಗಿದೆ ಕಣ್ಣು. ಕಣ್ಣು ತೆಗೆದ್ರೆ ಸುಟ್ಟು ಹೋಗಿ ಬಿಡ್ತೀಯಾ ನೀನು ಎಂದು ಸಂಭಾಳಿಸಿದೆ.
ಹಂಸಲೇಖ ಅವರ ಯಾರ್ ಇಟ್ಟರೀ ಚುಕ್ಕಿ... ಪೆನ್ಸಿಲ್ ಇತ್ತು ಇಟ್ಟ ಎಂದೆ. ಯಾಕ್ ಇಟ್ಟರ್ ಈ ಚುಕ್ಕಿ... ಮೇಕಪ್ ಮ್ಯಾನ್ ಪೆನ್ಸಿಲ್ ಇತ್ತು ಇಟ್ಟ ಎಂದೆ. ಆದರೆ, ಯಾವ ಹಂಸಲೇಖ ಬರೆದರೋ ಇದನ್ನು ಅದಕ್ಕೊಂದು ಅರ್ಥ ಇದೆ. ಈ ಭೂಮಿಯೇ ಬಣ್ಣದ ಬುಗುರಿ. ಆ ಶಿವನೇ ಚಾಟಿ ಕಣೋ ಹಾಡನ್ನು ಹಂಸಲೇಖ ಹತ್ತು ವರ್ಷದ ಹಿಂದೆ ಬರೆದು ಇಟ್ಟಿರಲಿಲ್ಲ. ಎಸ್ಪಿಬಿ ಪಾರ್ಕಿಂಗ್ನಲ್ಲಿ ನಿಂತಿದ್ದಾಗ, ಬರೆದ ಹಾಡದು. ಅಷ್ಟು ಬ್ಯುಸಿ ಅವರು. ಇವರೆಲ್ಲ ಕನ್ನಡ ಪುತ್ರರು. ಇವರು ಹುಟ್ಟಿರುವ ಈ ಸಂದರ್ಭದಲ್ಲಿ ನಾವು ಬದುಕಿದ್ದೇವೆ ಎಂಬುದಕ್ಕೆ ಖುಷಿ ಪಡಬೇಕು.
ಬಹಳಷ್ಟು ಜನ ಹಂಸಲೇಖ ಬೇಜಾರು ಮಾಡಿಕೊಳ್ಳುತ್ತಾರೆ ಎಂದ್ರು. ಒಬ್ಬ ಪೇಪರ್ನಲ್ಲಿ ಆರ್ಟಿಕಲ್ ಬರೆದು, ಕೆಲವು ತಪ್ಪುಗಳನ್ನು ಮಾಡಿದ್ದೇನೆ ಇದರಲ್ಲಿ. ಯಾಕಂದ್ರೆ ಕೆಲವರು ಅದನ್ನೇ ಹುಡುಕುತ್ತಾರೆ ಎಂದು ಕೆಳಗೆ ಬರೆದನಂತೆ. ಕೆಲವರಿಗೆ ತಪ್ಪುಗಳನ್ನು ಹುಡುಕುವ ಆಸೆ. ಆದರೆ ಅವರ ಬಗ್ಗೆ ನನಗೆ ಬೇಸರವಿಲ್ಲ. ಅವರು ಕ್ರಿಯೇಟಿವ್. ಅದನ್ನು ತಪ್ಪು ಎಂದು ಹೇಳಬಾರದು. ಅಂಥವರು ಇರುವುದರಿಂದಲೇ ನಾವು ಬೆಳೆದಿರುವುದು. ತಪ್ಪೆಲ್ಲಿದೆ ಎಂಬುದನ್ನು ಕಂಡುಹಿಡಿಯಲು ಮೇಸ್ಟ್ರು ಬೇಕು. ಅವರಿದ್ದರೇನೇ ನಾವು ಮುಂದೆ ಬರುವುದು.
ಮುಂದುವರೆಯುವುದು...