ನಾನು ಮೈಮೇಲೆ ಚಿನ್ನ ಹಾಕಿಕೊಳ್ಳುವ ಉದ್ದೇಶ ಇದು

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 45
ನಾವು ಕರಿಬೇವಿನ ಸೊಪ್ಪು ಇದ್ದಂತೆ. ರಾಜ್ಯಪ್ರಶಸ್ತಿ ಸಮಾರಂಭದಲ್ಲಿ ಮಿಮಿಕ್ರಿ ಮಾಡಿಸುತ್ತಾರೆ. ಸನ್ಮಾನ ಮಾಡುತ್ತಾರೆ. ಆದರೆ ಇಲ್ಲಿಯವರೆಗೂ ಸರ್ಕಾರದಿಂದ ಒಂದು ಪೈಸೆ ಬಂದಿಲ್ಲ. ಜನ ನನ್ನನ್ನು ಗುರುತಿಸುತ್ತಾರೆ. ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ. ನನಗೆ ಯಾವುದರಲ್ಲಿಯೂ ಕೊರತೆಯಿಲ್ಲ. ಪ್ರಶಸ್ತಿ ಬೇಕು ಎಂಬ ಬಯಕೆ ನನಗಿಲ್ಲ. ಆದರೆ, ಆ ಪ್ರಶಸ್ತಿ ಇನ್ನೊಬ್ಬ ಕಲಾವಿದನ ಸಾಧನೆಗೆ ಸ್ಫೂರ್ತಿಯಾಗುತ್ತದೆ. ಬಡ ಕಲಾವಿದ ಎಂದು ಹೇಳಬಾರದೆಂದೇ ಸಾಕಷ್ಟು ಚಿನ್ನ ಹಾಕಿಕೊಳ್ಳುತ್ತೇನೆ. ಬಹಳಷ್ಟು ಬಡ ಕಲಾವಿದರಿದ್ದಾರೆ. ನನಗೆ ಪ್ರಶಸ್ತಿ ಕೊಡಿ ಎಂದು ಕೇಳುವುದಿಲ್ಲ. ಅವರನ್ನು ಹುಡುಕಿ ಪ್ರಶಸ್ತಿ ಕೊಡಬೇಕು. ಕಲಾವಿದ ಚಿಗುರುತ್ತಿರುತ್ತಾನೆ. ಅವನನ್ನು ಹಾಳು ಮಾಡುವ ಹಕ್ಕು ಯಾರಿಗೂ ಇಲ್ಲ. ಇದರಲ್ಲಿ ಸರ್ಕಾರದ ತಪ್ಪಿಲ್ಲ. ಮಧ್ಯವರ್ತಿಗಳಿಂದಾಗಿ ಪ್ರತಿಭೆ ಇದ್ದರೂ, ಕೆಲವರಿಗೆ ಪ್ರಶಸ್ತಿ ಸಿಗುತ್ತಿಲ್ಲ.ಮುಂದುವರೆಯುವುದು...

16 views