ನಾನು ವಿಭನ್ನವಾಗಿ ಯೋಚಿಸಲು ಶಂಕರ್‌ ನಾಗ್‌ ಅವರ ಒಡನಾಟ ಕಾರಣ

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 132

(ಶಂಕರ್ ನಾಗ್ ಅವರ‌ ಒಡನಾಡಿ‌ ಬಿ.ಸುರೇಶ ಅವರ ನೆನಪುಗಳು)ನಮ್ಮ ಹತ್ರ ಹತ್ತು ರೋಪಾಯಿ ಇದ್ರೆ, ರವೀಂದ್ರ ಕಲಾಕ್ಷೇತ್ರದ ಎದುರುಗಡೆ ಇರುವ ಡಬ್ಬ ಅಂಗಡಿಗೆ ಹೋಗಿ, ಅಲ್ಲಿ ಎಂಟು ರೂಪಾಯಿ ಕೊಟ್ಟು ತ್ರಿವೇಣಿ ಕೊಂಡುಕೊಳ್ಳುವುದು. ತ್ರಿವೇಣಿ ಅಂದ್ರೆ ಕೆಳಗೆ ಮೊಸರನ್ನ, ಮಧ್ಯ ಚಿತ್ರನ್ನ, ಮೇಲೆ ಪುಳಿವಗರೆ, ಮೂರು ಐಟಮ್ ಗಳನ್ನ ಒಟ್ಟಿಗೆ ಒಂದೇ ಪೊಟ್ಟಣದಲ್ಲಿ ಕಡ್ಲೆಪುರಿ ಕಟ್ಟಿದ ಹಾಗೆ ಕಟ್ಟಿ ಕೊಡ್ತಿದ್ರು. ಹಾಗೆ ಬದುಕುತ್ತಿದ್ದವರಿಗೆ ಧಿಡೀರ್ ಆಗಿ ಒಂದು ಪ್ರೊಫೆಶನಲ್ ಜಗತ್ತಿಗೆ ಬಂದ ಹಾಗೆ ಆಯ್ತು. ನಮ್ಮನ್ನ ನಾವಾಗಿಯೇ ಕಾಣುವಂತಹ ವ್ಯಕ್ತಿಯ ಜೊತೆಯಲ್ಲಿ ಕೆಲ್ಸ ಮಾಡುವ ಹಾಗಾಯಿತು. ಅಲ್ಲಿ ವರೆಗೆ ನಾನು ರಂಗಭೂಮಿಯಲ್ಲಿ ಮಾಡಿದ್ದ ಕೆಲಸಗಳಿಗಿಂತ ಭಿನ್ನವಾಗಿ ಕೆಲಸ ಮಾಡೊದು ಸಾಧ್ಯವಾಯಿತು.


ಆಮೇಲೆ ‘ಜನುಮಜನುಮದ ಅನುಬಂಧ’ ಎನ್ನುವ ಸಿನಿಮಾ ಮಾಡಿದ್ರು. ಅದ್ರಲ್ಲಿ ನನ್ನ ಕೆಲಸಗಳೇನೂ ಇರ್ಲಿಲ್ಲ. ಯಾಕಂದ್ರೆ ಆಗ ನಾನು ಎಲ್ಲೋ ವಿದೇಶದಲ್ಲಿ ಇದ್ದೆ. ಆಮೇಲೆ ಮಾಲ್ಗುಡಿ ಡೇಸ್ ಮಾಡುವಾಗ ಸ್ಕ್ರಿಪ್ಟ್ ಕೆಲಸಗಳನ್ನ ಮಾಡುವಾಗ ಕೂಡ ನಾನು ಜೊತೆಯಲ್ಲಿದ್ದೆ. ಮತ್ತೆ ಅವ್ರು ಮಾತಾಡೋದನ್ನ ನಾನು ಕನ್ನಡದಲ್ಲೇ ಬರಿತಾ ಇದ್ದೆ, ನನಿಗೆ ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳು ಬರ್ತಿರ್ಲಿಲ್ಲ. ನಾನು ಬರ್ದಿದ್ದನ್ನ ಅರುಂಧತಿ ಹಾಗೂ ಪಿಂಟಿ ಯವರು ಹಿಂದಿಗೆ ಟ್ರಾನ್ಸಲೇಟ್ ಮಾಡ್ತಾ ಇದ್ರು. ಮತ್ತೆ ಇಡೀ ಸಿನಿಮಾ ತಯಾರಾಗುವ ಕ್ರಮ ತುಂಬಾ ಬೆರಗುಗೊಳಿಸುವ ಕ್ರಮ. ಜಗದೀಶ ಮಲ್ನಾಡ್, ಎಲ್ಲರೂ ತುಂಬಾ ಅಪರೂಪದ ಗೆಳೆಯರು. ಕಾಶಿ ನಮ್ಮ ಜೊತೆಯಲ್ಲಿಲ್ಲ ಇವತ್ತು, ತುಂಬಾ ಬುದ್ದಿವಂತ ಅವ್ನು. ಅಂತಹ ಬುದ್ದಿವಂತರ ನಡುವೆ ನಾವಿದ್ದಿದ್ರಿಂದ ನಮಿಗೆ ಸ್ವಲ್ಪ ಮಟ್ಟಿಗೆ ತಿಳುವಳಿಕೆ ಬರೊದಕ್ಕೆ ಕಾರಣವಾಯಿತು. ಅದಾದ್ಮೇಲೆ ಶೂಟಿಂಗ್ ಶುರುವಾಯ್ತು.ಮುಂದುವರೆಯುವುದು…

20 views