ನಾನು ಶಂಕರ್ ಅವರ ರಂಗಭೂಮಿಯ ಗೆಳೆಯ

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 125

(ಮಾಲ್ಗುಡಿ ಡೇಸ್‌ ನಟ ಹಾಗೂ ಶಂಕರ್ ಅವರ‌ ಸ್ನೆಹಿತ ಎಂ.ಸಿ ಆನಂದ ಅವರ ನೆನಪುಗಳು)ಎಂ.ಸಿ.ಆನಂದ್: ನನಿಗೆ ಶಂಕರ್ ಥಯೇಟರ್ ಮೂಲಕನೇ ಪರಿಚಯ ಆಗಿದ್ದು. ರಂಗ ಭೂಮಿಯಲ್ಲಿ ನಾನು ‘ಸಮುದಾಯ’ದ ಜೊತೆ ತೊಡಗಿಸ್ಕೊಂಡಿದ್ದೆ. ಮತ್ತೆ ಟಿ.ಎನ್ ನರಸಿಂಹನ್ ಅನ್ನುವ ಮೈಸೂರಿನ ಅಘಾದವಾದಂತಹ ಪ್ರತಿಭೆಯೊಬ್ಬರಿದ್ದರು. ಅವರು ನಾಟಕಗಳನ್ನು ಬರೆಯುವುದು ಹಾಗೂ ಡೈರಕ್ಷನ್ ಕೂಡ ಮಾಡುತ್ತಿದ್ದರು. ಬಹಳ ಒಳ್ಳೆಯ ಆಕ್ಟರ್ ಕೂಡ ಹೌದು ಅವರು. ಅವರ ಬಹಳಷ್ಟು ನಾಟಕಗಳಲ್ಲಿ, ಮುಖ್ಯವಾಗಿ ‘ಕತ್ತಲ ಹಾದಿ ದೂರ’ ಅನ್ನುವ ನೂರಾರು ಪ್ರದರ್ಷನಗಳನ್ನ ಕಂಡ ನಾಟಕ, ಅದರಲ್ಲಿ ಆಕ್ಟ್ ಮಾಡ್ತಿದ್ದೆ ನಾನು. ಆ ಸಮಯದಲ್ಲಿ ಟಿ.ಎನ್. ನರಸಿಂಹನ್ ಅವ್ರು ಕೆಲವು ನಾಟಕಗಳನ್ನು ಶಂಕರ್ ನಾಗ್ ಅವ್ರ ಟೀಮ್ ಆದ ‘ಸಂಕೇತ್’ಗೆ ಬರೆದಿದ್ದರು. ‘ನೋಡಿ ಸ್ವಾಮಿ ನಾವಿರೋದೆ ಹೀಗೆ’ಸಿನಿಮಾ ಆಗೋದಕ್ಕೆ ಮೊದಲು ನಾಟಕ ಆಗಿತ್ತು. ಅದು ಒಂದು ಮರಾಠಿ ನಾಟಕದ ರೂಪಾಂತರ. ಅದ್ರಲ್ಲಿ ಶಂಕರ್ ನಾಗ್ ಅವ್ರು ಬಹಳ ಲೈವ್ಲಿಯಾಗಿ ಸೂತ್ರಧಾರ ಹಾಗೂ ಇತರ ಪಾತ್ರಗಳನ್ನು ಕೂಡ ಮಾಡುತ್ತಿದ್ದರು. ಟಿ.ಎನ್ ನರಸಿಂಹನ್ ಅವ್ರು ಆ ನಾಟಕವನ್ನು ರೂಪಾಂತರ ಮಾಡಿ ಡೈರಕ್ಟ್ ಕೂಡ ಮಾಡಿದ್ದರು. ಅದಕ್ಕೆ ನಾನು ಬಹಳ ಸರಳವಾದ ರಂಗ ಸಜ್ಜಿಕೆ ಮಾಡಿ ಕೊಟ್ಟಿದ್ದೆ. ನಂತರ ಇನ್ನೊಂದು ಮರಾಠಿ ನಾಟಕ ‘ಸಂಧ್ಯಾ ಚಾಯ’ ಅನ್ನುವ ಬಹಳ ಪಾಪ್ಯುಲರ್ ಹಾಗೂ ಬಹಳ ಎಮೋಷ್ನಲ್ ಆಗಿದ್ದ ನಾಟಕ ಮಾಡಿದ್ದರು. ಅದ್ರಲ್ಲಿ ಶಂಕರ್ ನಾಗ್ ಹಾಗೂ ಆರುಂಧತಿ ಅವರು ಓಲ್ಡ್ ಕಪಲ್ ಕ್ಯಾರೆಕ್ಟರ್ ಮಾಡಿದ್ದರು. ಅದ್ರಲ್ಲಿ ಹೂ ಈಸ್ ಲಾಂಗಿಂಗ್ ಟು ಮೀಟ್ ಸಂಬಡಿ, ಎಸ್ಪೆಷಲ್ಲಿ ದೇರ್ ಚಿಲಡ್ರನ್ಸ್. ಒಬ್ಬ ಮಗ ಇಂಡಿಯನ್ ಏರ್ ಫೋರ್ಸಲ್ಲಿ ಕೆಲ್ಸ ಮಾಡ್ತಿರ್ತಾನೆ, ಅವ್ನಿಗೆ ಬರಕ್ಕಾಗಲ್ಲ. ಇನ್ನೊಬ್ಬ ಮಗ ಅಮೇರಿಕಾದಲ್ಲಿ ಮದುವೆ ಆಗಿ ಅಲ್ಲೇ ಸೆಟಲ್ ಆಗಿರ್ತಾನೆ. ಆ ರೋಲ್ ಅನ್ನು ನಾನು ಮಾಡಿದ್ದೆ. ಅವ್ನು ಬಹಳ ಆರೊಗೆನ್ಸ್ ಹಾಗೂ ತುಂಬಾ ಟ್ರಿಕ್ಕಿ ಮನುಷ್ಯ. ಅವ್ನು ಯಾವಾಗ್ಲೋ ಒಂದ್ಸಲ ಬಂದು, ಬಹಳ ಉಡಾಫೆಯಲ್ಲಿ ಮಾತಾಡಿ, ಟ್ರಿಕ್ಕಿಯಿಂದ ಮತ್ತೆ ವಾಪಸ್ ಹೋಗ್ತಾನೆ. ಚಿಕ್ಕದೊಂದು ಸೀನ್ ಇತ್ತು, ಅದು ನನಿಗೆ ಬಹಳ ಇಷ್ಟ ಆಗಿತ್ತು. ಮತ್ತೆ ಆ ನಾಟಕಕ್ಕೆ ನಾನು ರಂಗ ಸಜ್ಜಿಕೆ ಕೂಡ ಮಾಡಿದ್ದೆ. ಅದನ್ನ ಬಹಳ ಮೆಚ್ಕೊಂಡಿದ್ದರು ಶಂಕರ್ ನಾಗ್. ಈ ತರ ಥಿಯೇಟರ್ ಮೂಲಕನೇ ಅವರ ಒಡನಾಟ ಶುರುವಾಗಿದ್ದು. ನಾನು ಮಿನಿಸ್ಟರ್ ಆಫ್ ಡಿಫೆನ್ಸಲ್ಲಿ ಸೀನಿಯರ್ ಸೈಂಟಿಫಿಕ್ ಆಫೀಸರ್ ಆಗಿದ್ದೆ. ಆ ಸಂಧರ್ಭದಲ್ಲಿ ನನಿಗೆ ಡೆಲ್ಲಿಗೆ ಟ್ರಾನ್ಫರ್ ಆಗಿತ್ತು. ಆ ಸಮಯದಲ್ಲಿ ಮಾಲ್ಗುಡಿ ಡೇಸ್ ಬಗ್ಗೆ ದೊಡ್ಡ ಹಾಗೂ ಸಿಕ್ಕಾಪಟ್ಟೆ ಆಂಬೀಶಿಯಸ್ ಪ್ರಾಜೆಕ್ಟ್ ಅದರ ರೂಪರೇಶಗಳು ಹಾಗು ಯಾವ ರೀತಿಯಲ್ಲಿ ಅದನ್ನು ಮಾಡಬೇಕು ಅಂತ ಡಿಸ್ಕಷನ್ ಮಾಡಿದ್ವಿ. ನಾನು ಆಗ ನನ್ನ ಪ್ರೊಫೆಷನಲ್ಲೇ ಬ್ಯುಸಿ ಇದ್ದಿದ್ರಿಂದ ಅದರ ಯಾವ ಕೆಲಸಗಳಲ್ಲೂ ಇನ್ವಾಲ್ವ್ ಆಗ್ತಿರ್ಲಿಲ್ಲ. ಆದ್ರೂ ನನ್ನ ಒಳ್ಳೆಯ ಸ್ನೇಹಿತರಾಗಿರೋದ್ರಿಂದ ನನಗೆ ಟ್ರಾನ್ಸಫರ್ ಆಗಿರುವ ವಿಷಯವನ್ನು 1989 ರಲ್ಲಿ “ ಐ ವಿಲ್ ಬಿ ಲೀವಿಂಗ್ ಬೈ ಜೂನ್” ಅಂತ ಶಂಕರ್ ಗೆ ಹೇಳ್ದೆ. ಶಂಕರ್ ನಾಗ್ ಯಾವ ತರಹದ ಮನುಷ್ಯ ಅನ್ನೋದನ್ನ ಈ ವಿಷಯದಲ್ಲೇ ಅರ್ಥ ಮಾಡ್ಕೊಬಹುದು. ಅವ್ರು ರಂಗಭೂಮಿಯ ಸ್ನೇಹಿತರನ್ನು ಯಾವಾಗ್ಲೂ ನೆಗ್ಲೆಕ್ಟ್ ಮಾಡ್ತಿರ್ಲಿಲ್ಲ, ಹಾಗೂ ಇನ್ನೊಬ್ಬರ ನಟನೆಯ ಅಥವಾ ಇನ್ಯಾವುದೋ ಟ್ಯಾಲೆಂಟನ್ನು ಗುರುತಿಸುವ ಚಾಕಚಕ್ಯತೆ ಶಂಕರ್ ಗಿಂತ ಚೆನ್ನಾಗಿ ಬೇರೆ ಯಾರಿಗೂ ಇರ್ತಾ ಇರ್ಲಿಲ್ಲ. ಸೋ ನನ್ನನ್ನ ಒಂದು ಮೇಜರ್ ರೋಲಲ್ಲಿ ಕ್ಯಾಸ್ಟ್ ಮಾಡಿದ್ದಾರೆ, ಅದು ನನಿಗೆ ಗೊತ್ತಿರ್ಲಿಲ್ಲ. ಅದ್ರಲ್ಲಿ ಎಷ್ಟೊಂದು ಎಪಿಸೋಡ್ಗಳು ಹಾಗೂ ಎಷ್ಟೊಂದು ಪಾತ್ರಗಳಿವೆ. ಹಾಗಾಗಿ ಹೇಳುವ ಪುರುಸೊತ್ತು ಸಿಗದೇ ಇದ್ದಿರಬಹುದು. ನಾನು ಇದನ್ನ ಹೇಳಿದ ತಕ್ಷಣ : ಅದ್ಹೆಂಗೆ ಹೊರ್ಟೋಗಿ ಬಿಡ್ತೀಯ ನೀನು? ‘ಮಾಲ್ಗುಡಿ ಡೇಸ್’ಅಲ್ಲಿ ಒಂದು ಎಪಿಸೋಡಲ್ಲಿ ಆಕ್ಟ್ ಮಾಡ್ಲೇ ಬೇಕು ನೀನು” ಅಂದ್ರು. ಹಾಗಾಗಿ ‘ಪರ್ಫಾರ್ಮಿಂಗ್ ಚೈಲ್ಡ್’ಅನ್ನು ಎಪಿಸೋಡಲ್ಲಿ ನಾನು ಹಾಗೂ ಮಾಲತಿ ಅನ್ನು ಆರ್ಟಿಸ್ಟ್ ಮೇಜರ್ ರೋಲ್ನಲ್ಲಿ ಆಕ್ಟ್ ಮಾಡಿದ್ವಿ. ನಾನು ಮತ್ತೆ ಮಾಲತಿ ಅವ್ರು ‘ವಾಸಂತಿ’ ಅನ್ನುವ ನಾಟಕವನ್ನು ಆಗ ತಾನೆ ಮಾಡಿದ್ವಿ. ಅದನ್ನ ಶಂಕರ್ ನೋಡಿದ್ರು. ಹಾಗಾಗಿ ಮಾಲ್ಗುಡಿಯಲ್ಲಿ ನಮ್ಮಿಬ್ಬರನ್ನೂ ಕ್ಯಾಸ್ಟ್ ಮಾಡಿದ್ರು. ಶಂಕರ್ ಜೊತೆಯಲ್ಲಿ ನಾನು ಅದುವರೆಗೂ ಯಾವುದೇ ಶೂಟಿಂಗ್ ಅಥವಾ ಸಿನಿಮಾದಲ್ಲಿ ಪಾರ್ಟಿಸಿಪೇಟ್ ಮಾಡಿರ್ಲಿಲ್ಲ. ನಾಟಕದಲ್ಲಿ ಪಾರ್ಟಿಸಿಪೇಟ್ ಮಾಡಿದ್ದೆ, ಆ ಅನುಭವನೇ ಬೇರೆ. ಶಂಕರ್ ಈಸ್ ಒನ್ ಆಫ್ ದ ಮಾಸ್ಟರ್ ಇನ್ ಫಿಲ್ಮ್ ಮೇಕಿಂಗ್. ಯಾಕಂದ್ರೆ ಅದು ನಾಟಕಕ್ಕಿಂತ ಭಿನ್ನವಾದದ್ದು ಮತ್ತು ಏನೂ ಇಲ್ದೇ ಇರೋದನ್ನ ಕ್ರಿಯೇಟ್ ಮಾಡುವುದು. ಉದಾಹರಣೆಗೆ ವಿಧಾನ ಸೌಧ ವನ್ನು ಇಲ್ಲೇ ತೋರಿಸಬೇಕು ಅಂದ್ರೆ ತೋರಿಸುತ್ತಾರೆ ಅವರು. ಅಷ್ಟು ಕ್ರಿಯೇಟಿವ್ ಮನುಷ್ಯ ಅವ್ರು. ಯಾವುದೋ ಒಂದು ಕಾರನ್ನು ಇನ್ಯಾವುದಕ್ಕೋ ಮ್ಯಾಚ್ ಮಾಡಿ ಶೂಟ್ ಮಾಡಿರುತ್ತಾರೆ. ಅದರಂತೆ ಮ್ಯಾಚ್ ಕೂಡ ಮಾಡುವಷ್ಟು ಇಮ್ಯಾಜಿನೇಷನ್ ಅವ್ರಿಗೆ ಇತ್ತು. ಒಂದು ಮಿಡಲ್ ಕ್ಲಾಸ್ ಮನೆ, ಮುಂದೆ ಗಾರ್ಡನ್ ಆ ತರ ಅಟ್ಮಾಸ್ಫಿಯರ್, ಇಲ್ಲಿ ಯಡಿಯೂರು ಲೇಕ್ ಹಿಂಭಾಗದಲ್ಲಿ ಇತ್ತು. ಅದನ್ನೆಲ್ಲಾ ಅಲ್ಲೇ ಶೂಟ್ ಮಾಡಿದ್ರು. ಅದಾದ್ಮೇಲೆ ಎಷ್ಟು ಫಾಸ್ಟಾಗಿ ಪ್ಲಾನ್ ಮಾಡಿ ಅವ್ರು ಕೆಲ್ಸ ಮಾಡಿದ್ರೋ ಗೊತ್ತಿಲ್ಲ, ನನ್ನನ್ನ ಕಳುಹಿಸಿಕೊಡಬೇಕಾಗಿದ್ದರಿಂದ, ಮಾರನೇ ದಿನನೇ ಆಗುಂಬೆಯಲ್ಲಿ ಇಲ್ಲಿಗೆ ಮ್ಯಾಚ್ ಆಗುವಂತಹ ಲೊಕೇಷನ್ಗಳಲ್ಲಿ ಶೂಟ್ ಮಾಡಿ, ಕೂಡಲೇ ಡಬ್ಬಿಂಗ್ ಎಲ್ಲಾ ಮುಗಿಸಿ, ನಂತರ “ಆಯ್ತು. ನೀನು ಹೋಗಬಹುದು” ಅಂದ್ರು. ಅದಾಗಿ ಒಂದು ವರ್ಷದವರೆಗೂ ಸಿಕ್ಕಿರ್ಲಿಲ್ಲ ನಾವು. ಆಮೇಲೆ ನನ್ನ ಹೆಡ್ ಆಫೀಸಿಗೆ ಬಂದಿದ್ದೆ ನಾನು ಅವಾಗ ಅವ್ರು ಮನೆಯಲ್ಲೇ ಇರುವ ಸಮಯ ನೋಡಿ ಲ್ಯಾಂಡ್ ಲೈನಿಗೆ ಫೋನ್ ಮಾಡಿ ಮಾತಾಡ್ದೆ, ಆಗ “ ಮಾಲ್ಗುಡಿ ಡೇಸ್’ ನೋಡಿದ್ರಾ? ಅಂತ ಕೇಳಿದ್ರು. ಆಗ ನಾನು “ಡೆಲ್ಲಿಯಲ್ಲೇ ನೋಡಿದ್ದೀನಿ, ನಿಮ್ಮಿಂದಾಗಿ ನಾನು ಡೆಲ್ಲಿಗೆ ಹೋಗೋದಕ್ಕಿಂತ ಮುಂಚೆನೇ ಅಲ್ಲಿ ಫೇಮಸ್ ಆಗ್ಬಿಟ್ಟಿದ್ದೆ. ನನ್ನ ರೂಮಲ್ಲಿ ಜನ ಇಣಿಕಿ ನೋಡುವಷ್ಟು ಪಾಪ್ಯುಲರ್ ಮಾಡ್ಬಿಟ್ಟಿದ್ದೀರ ನನ್ನನ್ನ.”ಯಾಕಂದ್ರೆ ಮಾಲ್ಗುಡಿಯಲ್ಲಿ ತಾಂತ್ರಿಕ ತಜ್ಞರು ಹಾಗೂ ನಟರು ಬಹಳಷ್ಟು ಜನ ಕರ್ನಾಟಕದವ್ರೇ ಇದ್ರು. ಆದ್ರೂ ಕೂಡ ಅದು ಆಲ್ ಇಂಡಿಯಾ ಲೆವೆಲಲ್ಲಿ ಫೇಮಸ್ ಆದಷ್ಟು, ಬೇರೆ ಯಾವುದೂ ಫೇಮಸ್ ಆಗಿಲ್ಲ. ಜನ ಅದನ್ನೆಲ್ಲಾ ನೋಡಿ ನಾನು ಡೆಲ್ಲಿಗೆ ಹೋಗುವಷ್ಟರಲ್ಲಿ ನನ್ನನ್ನ ಗುರುತಿಸಕ್ಕೆ ಶುರು ಮಾಡಿದ್ರು. ನಾನು 1990 ನಲ್ಲಿ ಒಂದ್ಸಲ ಇಲ್ಲಿಗೆ ಬಂದಿದ್ದಾಗ, ಶಂಕರ್ ಅವ್ರಿಗೆ ಕಾಲ್ ಮಾಡಿ ಮಾತಾಡ್ದೆ ಆದ್ರೆ ಮೀಟ್ ಮಾಡಕ್ಕಾಗ್ಲಿಲ್ಲ “ನೆಕ್ಸಟೈಮ್ ನೀನು ಬರ್ತೀಯಲ್ಲ ಅವಾಗ ಸಿಗೊಣ ಕಣೊ, ಸಂಜೆ ಸ್ವಲ್ಪ ಹೊತ್ತು ಕಳಿಯೊಣ ಒಟ್ಟಿಗೆ” ಅಂತ ಹೇಳಿದ್ರು. ಆಮೇಲೆ ನಾನು ಡೆಲ್ಲಿಗೆ ವಾಪಸ್ ಹೋದೆ. ಅವತ್ತಿನ ದಿವ್ಸ ನನಿಗೆ ಎಲ್ಲಿಗೋ ಹೋಗ್ಬೇಕಾಗಿತ್ತು, ಅಲ್ಲಿಗೆ ಹೋಗಿ ಕ್ವಾಟ್ರಸ್ ಗೆ ವಾಪಸ್ ಹೋಗ್ಬೇಕಾದ್ರೆ ನನ್ನ ಮಗ ಮತ್ತೆ ನನ್ನ ಹೆಂಡತಿ ಇಬ್ರುನೂ “ಬೇಗ ಬಾ ಇಲ್ಲಿ ಏನೋ ಶಂಕರ್ ನಾಗ್ ನ್ಯೂಸ್ ಬರ್ತಾ ಇದೆ” ಅಂತ ಹೇಳಿದ್ರು. ಏನಪ್ಪಾ ಶಂಕರ್ ನಾಗ್ ನ್ಯೂಸ್ ಅಂತ ಹೋಗಿ ನೋಡ್ತೀನಿ, ಅಲ್ಲಿ ಅವ್ರು ಆಕ್ಸಿಡೆಂಟಲ್ಲಿ ಹೋಗ್ಬಿಟ್ಟಿದ್ದಾರೆ ಅಂತ ನ್ಯೂಸ್ ಬರ್ತಾ ಇತ್ತು. ಅದು ಬಹಳ ಅನ್ ಇಮ್ಯಾಜಿನೆಬಲ್ ಎಕ್ಸಪೀರಿಯನ್ಸ್, ಯಾರಿಗೂ ಏನೂ ಹೇಳ್ಕೊಳದೇ ಇರುವಂತಹ ಅನುಭವ ಅದು. ಅಲ್ಲಿಗೆ ಅವ್ರ ಜೊತೆಯ ಒಡನಾಟ ಮುಗೀತು. ಅವ್ರಿಂದ ದೊಡ್ಡವರಾಗ್ಲೀ ಚಿಕ್ಕವ್ರಾಗ್ಲೀ ಬಹಳ ಕಲ್ತಿದ್ದಾರೆ. ನಾನು ಶೂಟಿಂಗಲ್ಲೂ ಬಹಳಷ್ಟು ಸಲ ನೋಡಿದ್ದೀನಿ, ಆಗುಂಬೆಯಲ್ಲಿ ಎತ್ತರ ತಗ್ಗುಗಳು ಇರುವ ಜಾಗದಲ್ಲಿ ಲೊಕೇಶನ್ ಶಿಫ್ಟ್ ಆಗುವಾಗ ನಡೀರೋ ಅಂತ ಹೇಳ್ಕೊಂಡು ರಿಫ್ಲೆಕ್ಟರ್, ಲೈಟ್ ಗಳನ್ನೆಲ್ಲಾ ಶಂಕರ್ ಹೊತ್ಕೊಂಡು ಹೊಗ್ತಿದ್ರು. ಕೆಲ್ಸ ಮಾಡಿ ಸುಸ್ತಾದಾಗ “ಒಂದು ಐದು ನಿಮಿಷ ಕಣೋ” ಅಂತ ಹೇಳಿ ಅಲ್ಲೇ ಫೋಟ್ ಪಾತ್ ಮೇಲೆನೇ ಮಲ್ಕೊಂಡುಬಿಡ್ತಿದ್ರು. ಫಾರ್ಚ್ಯುನೇಟ್ಲೀ ಅಲ್ಲಿ ಯಾರೂ ಗುರುತು ಹಿಡಿತಾ ಇರ್ಲಿಲ್ಲ, ಗುರುತು ಹಿಡ್ದರೂ ಕೂಡ, “ ಯಾವಾಗ್ಲೂ ಇಲ್ಲೇ ಇರ್ತಾರೆ ಅಂತ ಅನ್ಕೊತಿದ್ರು ಅಷ್ಟೇ. ಈ ಒಂದು ಗುಣ ನನಿಗೆ ಬಹಳ ಆಶ್ಚರ್ಯ ಆಗ್ಬಿಡೋದು! ಹೌ ಹೀ ಯೂಸ್ಡ್ ಟು ಮೇಂಟೇನ್ ದಿಸ್ ಕೈಂಡ್ ಆಫ್ ಪರ್ಸನಾಲಿಟಿ ಅಂತ. ಬೆಸ್ಟ್ ಎಕ್ಸಪೀರಿಯನ್ಸ್ ಅವ್ರ ಇಮ್ಯಾಜಿನೇಷನ್. ಹೀ ಹ್ಯಾಡ್ ಸಚ್ ಅ ಕ್ರಿಯೇಟಿವ್ ಪ್ರಾಜೆಕ್ಟ್ಸ್ ವಿತ್ ಹಿಮ್. ನಂದಿ ಹಿಲ್ಸಲ್ಲಿ ರೋಪ್ ವೇ ಮಾಡ್ಬೇಕು ಅಂತ ಬೇರೆ ಯಾರಾದ್ರೂ ಇಮ್ಯಾಜಿನ್ ಮಾಡಿದ್ರಾ? ಆತರದ ಒಂದು ಪರ್ಸನಾಲಿಟಿ ಶಂಕರ್. ಹೀ ಕುಡ್ ಡು ಎನಿಥಿಂಗ್, ಬಿಟ್ಟಿದ್ರೆ ಮಾಡೇ ಬಿಡ್ತಿದ್ರು ಅವ್ರು. ಮೆಟ್ರೋ ಟ್ರೈನ್ ಪ್ರಪೋಸಲ್ ಅನ್ನ ಅವಾಗ್ಲೇ ಕೊಟ್ಟಿದ್ರು ಶಂಕರ್. ಬೆಂಗಳೂರಿಗೆ ಅಂತದ್ದೆಲ್ಲಾ ಬೇಕಾಗಿಲ್ಲ ಅಂತ ಆ ಐಡಿಯಾನ ಕೆಳಗೆ ಹಾಕಿದ್ರು. ಅವಾಗ ಅವ್ರ ಕನಸುಗಳನ್ನ ಎಲ್ಲಾ ನಮ್ಮ ಜೊತೆ ಶೇರ್ ಮಾಡ್ತಾ ಇದ್ರು. ಅವ್ರ ನಾಟಕದ ಹಾಗೂ ಸಿನಿಮಾದ ಪ್ರಾಜೆಕ್ಟ್ ಗಳು ಮಾತ್ರ ಅಲ್ಲ, ಅವ್ರ ಬೇರೆ ಸೋಶಿಯಲ್ ಪ್ರಾಜೆಕ್ಟ್ ಗಳು. ಒಬ್ಬ ಇಂಜಿನಿಯರ್ ಪಾಯಿಂಟ್ ಆಫ್ ವ್ಯೂ ಇಂದ ಹೇಗೆ ಇಮ್ಯಾಜಿನ್ ಮಾಡ್ತಿದ್ರೋ ನಮಿಗೆ ಆಶ್ಚರ್ಯ ಆಗ್ತಿತ್ತು! ಯಾಕಂದ್ರೆ ನಾನು ಒಬ್ಬ ಇಂಜಿನಿಯರ್, ಅವ್ರಿಗೆ ಇಂಜಿನಿಯರಿಂಗ್ ಕ್ವಾಲಿಫಿಕೇಶನ್ ಇಲ್ಲ. ಬಟ್ ಹೀ ಯೂಸ್ಡ್ ಟು ಥಿಂಕ್. ಅಷ್ಟು ಮುಂದಾಲೋಚನೆ ಇತ್ತು ಅವ್ರಿಗೆ. ಆ ತರದ ಒಂದು ಪರ್ಸನಾಲಿಟಿ. ಅವ್ರ ಜೊತೆಯಲ್ಲಿ ಕೆಲ್ಸ ಮಾಡಿದ್ದು ಮತ್ತು ಅದರ ನೆನಪುಗಳೇ ನಮಿಗೆ ಆಸ್ತಿ ಅಂತ ಅನ್ಕೊಂಡಿದ್ದೀನಿ. ಥಿಯೇಟರ್ನಲ್ಲಂತೂ ನಮ್ಮ ಎಕ್ಸಪೀರಿಯನ್ಸ್ ಬೇರೆನೇ. ಯಾಕಂದ್ರೆ ಸಿನಿಮಾ ಸೀರಿಯಲ್ ಗಳಲ್ಲಿ ಓಂದು ನಾಲ್ಕು ದಿನದ ಶೂಟಿಂಗ್ ಇದ್ರೆ, ಅವ್ರು ಎಲ್ಲಾ ಟೆಕ್ನೀಶಿಯನ್ಸ್ ಹಾಗೂ ಆರ್ಟಿಸ್ಟ್ ಗಳ ಜೊತೆ ಕಮ್ಯೂನಿಕೇಟ್ ಮಾಡ್ತಾ ಇರ್ತಾರಾದ್ರಿಂದ, ನಮ್ಮ ಜೊತೆ ಮಾತಾಡಲು ಸಿಗುವ ಸಮಯ ಬಹಳ ಕಡಿಮೆ ಇರುತ್ತದೆ. ಆದ್ರೆ ಥಿಯೇಟರಲ್ಲಿ ಏನಾಗುತ್ತೆ, ರಿಹರ್ಸಲ್ ಟೈಮಲ್ಲೂ ಹಾಗೂ ಕಾಫಿ,ಟೀ ಕುಡಿತಾ ಮಾತಾಡೊದು ಹಾಗೆ ಬಹಳ ಸಮಯ ಜೊತೆಯಲ್ಲಿ ಫ್ರೀಯಾಗಿ ಕಳಿತೀವಿ. ಮಾಲ್ಗುಡಿ ಡೇಸ್ ಅವ್ರ ಮಾಸ್ಟರ್ ಪೀಸ್ ಪ್ರಾಜೆಕ್ಟ್ ಅಂತ ಅನ್ಕೊಂಡಿದ್ದೀವಿ ನಾವು. ಯಾಕಂದ್ರೆ ಅದು ಅಷ್ಟೊಂದು ಫೇಮಸ್ ಆಗಿದೆ, ಮತ್ತೆ ದೆಟ್ ಸ್ಪ್ರೆಡ್ ಆಲ್ ಓವರ್ ದ ವಲ್ಡ್. ಅದನ್ನ ದೂರ್ದರ್ಷನ್ ಗಾಗಿ ಮಾಡಿದ್ರೂ ಕೂಡ ಅದರ ವ್ಯಾಪ್ತಿ ವಿದೇಶಗಳಲ್ಲಿ ಕೂಡ ಹಬ್ಬಿತ್ತು. ಎರಡು ಮೂರು ದೇಶಗಳ ಕಾಂಟಾಕ್ಟ್ ಹಾಗೂ ಸಾಕಷ್ಟು ಫೈನಾನ್ಸ್ ಇದ್ದಿದ್ರಿಂದ, ಮತ್ತೆ ಅದನ್ನ ಅವ್ರು ಶೂಟ್ ಮಾಡಿರುವ ಕ್ವಾಲಿಟಿ, ಅಂದ್ರೆ ಫಿಲ್ಮ್ ಕ್ಯಾಮರಾದಲ್ಲಿ ಶೂಟ್ ಮಾಡಿರೋದು. ಅವಾಗ ಯಾರೂ ಮಾಡ್ತರ್ಲಿಲ್ಲ. ಒಂದು ಕ್ಯಾಮರಾ ಇಟ್ಕೊಂಡು, ಎಲ್ರೂ ಅದರ ಮುಂದೆ ಬಂದು ಆಕ್ಟ್ ಮಾಡಿ ಹೋಗ್ತಿದ್ರು. ಕ್ಯಾಮರಾ ಕಟ್ ಮಾಡ್ತನೇ ಇರ್ತಿರ್ಲಿಲ್ಲ. ಅಂತಹ ಸಮಯದಲ್ಲಿ ಮೂರು ನಾಲ್ಕು ಕ್ಯಾಮರಾ ಇಟ್ಕೊಂಡು ಶೂಟ್ ಮಾಡ್ತಿದ್ರು ಶಂಕರ್. ಅವಾಗ ಮಿಚ್ಚಲ್ ಕ್ಯಾಮರಾದಲ್ಲಿ ಶೂಟ್ ಮಾಡ್ತಾ ಇದ್ದದ್ದು. ಮಿಚ್ಚಲ್ ಕ್ಯಾಮರಾ ಅಂದ್ರೆ ಕ್ಯಾಮರಾದಲ್ಲೇ ಡಿಸಾಲ್ವ್ ಮಾಡ್ಬೇಕು ಅಥವಾ ವೈಪ್ ಮಾಡ್ಬೇಕು ಮತ್ತೆ ಆಪ್ಟಿಕಲ್ ವರ್ಕ್ ಗಳಿಗೆಲ್ಲಾ ಯೂಸ್ ಮಾಡ್ತಾ ಇದ್ರು. ಶೂಟ್ ಮಾಡಿದ್ರೆ ವಾಯ್ಸ್ ಅನ್ನ ಡಬ್ ಮಾಡದೆ ಒರಿಜಿನಲ್ ವಾಯ್ಸನ್ನೇ ಯೂಸ್ ಮಾಡ್ಕೊಬಹುದಾಗಿತ್ತು. ಅಂತಹ ಮಿಚ್ಚಲ್ ಕ್ಯಾಮರಾನ ಉಪಯೋಗಿಸ್ತಾ ಇದ್ರು ಶಂಕರ್. ಅದ್ರಲ್ಲಿ ಕಟಿಂಗ್ ಪಾಯಿಂಟ್ ಬಂದಾಗ “ನೋಡಮ್ಮಾ ಇದು ಈ ಸೀನಲ್ಲಿ ಲಾಸ್ಟ್ ಶಾಟ್, ಮುಂದಿನ ಸೀನಲ್ಲಿ ಇದ್ರ ಡಿಸಾಲ್ವ್ ಬರುತ್ತೆ. ಇಲ್ಲಿ ತಪ್ಪು ಮಾಡುವ ಹಾಗೆನೇ ಇಲ್ಲ” ಅಂತ ಹೇಳ್ತಿದ್ರು. ಯಾಕಂದ್ರೆ ಮಿಕ್ಕಿದ ಟೈಮಲ್ಲಿ ಅದೇನಾದ್ರೂ ಕಟ್ ಮಾಡಿ, ಜಾಯಿಂಟ್ ಮಾಡ್ಬಹುದು. ಆದ್ರೆ ಇದು ಡಿಸಾಲ್ವ್ ಆಗುತ್ತೆ. ಅಕಸ್ಮಾತ್ ಇದೇನಾದ್ರೂ ಫೇಲ್ ಆದ್ರೆ, ಆ ಸೀನಿನ ಲಾಸ್ಟ್ ಶಾಟ್ ಹಾಗೂ ಮುಂದಿನ ಸೀನಿನ ಫಸ್ಟ್ ಶಾಟ್ ಎರಡೂ ಮತ್ತೆ ಶೂಟ್ ಮಾಡ್ಬೇಕಾಗಿ ಬರುತ್ತೆ. ಒಂದು ಇಲ್ಲೆಲ್ಲೋ ಶೂಟ್ ಮಾಡಿರ್ತೀವಿ ಇನ್ನೊಂದು ಆಗುಂಬೆಯಲ್ಲೆಲ್ಲೋ ಶೂಟ್ ಮಾಡಿರ್ತೀವಿ. ಆದ್ರೆ ಹೀ ಯೂಸ್ಡ್ ಟು ಸ್ಟ್ರಿಕ್ಟ್ ಆಂಡ್ ಹೀ ಯೂಸ್ಡ್ ಟು ಟೇಕ್ ದೆಟ್ ರಿಸ್ಕ್. ಆಕ್ಟರ್ಸ್ ಗಳನ್ನೂ ಕೂಡ ಅಷ್ಟು ಅಲರ್ಟಾಗಿ ಇಡ್ತಿದ್ರು ಶಂಕರ್.


ಮುಂದುವರೆಯುವುದು…

22 views