
ನಾನು, ಶಾಸ್ತ್ರಿ ಹಾಡಿದ ಮೊದಲ ಲವ್ ಸಾಂಗ್
ಸುಮಾ - ಎಲ್. ಎನ್ಶಾಸ್ತ್ರಿ ಲೈಫ್ ಸ್ಟೋರಿ ಭಾಗ-7

ಟೇಕ್ ಮುಗಿಸಿ ಹೊರಗೆ ಬಂದ ಮೇಲೆ, ಮನೋಹರ್ ಅವರು ಶಾಸ್ತ್ರಿ ಅವರನ್ನು ಪರಿಚಯ ಮಾಡಿಸಿದರು. ಇವಳು ಇವತ್ತು ರಾತ್ರಿ ಊರಿಗೆ ಹೋಗುತ್ತೇನೆ ಎನ್ನುತ್ತಿದ್ದಾಳೆ. ಆದರೆ, ನೀನು ಹೋಗಬೇಡ. ನಿನಗೆ ಒಳ್ಳೆಯ ಭವಿಷ್ಯವಿದೆ ಎಂದರು. ಶಾಸ್ತ್ರಿ ಅವರ ಬಳಿ ನಾಳೆ ಹಂಸಲೇಖ ರೆಕಾರ್ಡಿಂಗ್ ಇದೆಯಲ್ವಾ ಅವರಿಗೆ ಈಕೆಯನ್ನು ಪರಿಚಯ ಮಾಡಿಕೊಡಿ ಎಂದು ಹೇಳಿದ್ರು. ಸರ್, ನಾನು ಹೇಗೆ ಪರಿಚಯ ಮಾಡಿಕೊಡಲಿ ಎಂದು ಇವರು ಕೇಳಿದ್ರು, ಅದಕ್ಕೆ ಮನೋಹರ್, ನಾನು ಹೇಳಿದೆ ಎಂದು ಹೇಳಿ ಎಂದರು. ನನಗೆ ಬಲವಂತ ಮಾಡಿ, ಟಿಕೆಟ್ ಕ್ಯಾನ್ಸಲ್ ಮಾಡಿ ಇಲ್ಲಿಯೇ ಉಳಿಸಿದ್ರು. ಮಾರನೇ ದಿವಸ ‘ಅಣ್ಣಯ್ಯ’ ಸಿನಿಮಾದ ಹಾಡು ಪ್ರಸಾದ್ ಸ್ಟುಡಿಯೊದಲ್ಲಿ ನಡೆಯುತ್ತಿತ್ತು. ಅಲ್ಲಿ ನನ್ನನ್ನು ಹಂಸಲೇಖ ಅವರನ್ನು ಪರಿಚಯ ಮಾಡಿಸಿದ್ರು. ಭಾವಗೀತೆಯೊಂದನ್ನು ಹಾಡಿದೆ. ಅವರಿಗೆ ಇಷ್ಟವಾಯ್ತು. ‘ಬೊಂಬೆ, ಬೊಂಬೆ’ ಹಾಡಿನ ಟ್ರ್ಯಾಕ್ ರೆಡಿ ಇತ್ತು. ಅದನ್ನೇ ಹಾಡಿಸಿದ್ರು. ನಾನು ಶಾಸ್ತ್ರಿ ಹಾಡಿದೆವು. ಮಿನಿ ಬಿ.ಆರ್.ಛಾಯಾ ಅವರ ರೀತಿ ಇದೆ ವಾಯ್ಸ್ ಎಂದು ಹೇಳಿದ್ರು. ಅಲ್ಲಿಂದ ನನ್ನ ವೃತ್ತಿ ಪಯಣ ಶುರುವಾಯ್ತು.
ಮುಂದುವರೆಯುವುದು...