ನಾನು ಸಿನಿಮಾಟೊಗ್ರಾಫರ್‌ ಆಗಿದ್ದು ಮಾಲ್ಗುಡಿ ಇಂದ …

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 116

(ಮಾಲ್ಗುಡಿ ಡೇಸ್‌ ಕ್ಯಾಮರಾ ಅಸಿಸ್ಟೆಂಟ್‌ ನಾಗರಾಜ ಆದವಾನಿ ಅವರ ನೆನಪುಗಳು)ಬೇಸಿಕಲ್ಲಿ ನಾನು ಸಿನಿಮಾಟೋಗ್ರಫರ್ ಆಗಿದ್ದಕ್ಕೆ ಕಾರಣ ‘ಮಾಲ್ಗುಡಿ ಡೇಸ್’ ಅಂತನೇ ಹೇಳ್ಬಹುದು. ನಾನು ಮೊದಲು ಸಾಕಷ್ಟು ಸಿನಿಮಾಗಳಲ್ಲಿ ಸ್ಟಿಲ್ ಫೊಟೊಗ್ರಫರ್ ಆಗಿ ಕೆಲ್ಸ ಮಾಡ್ತಿದ್ದೆ. ಆ ಸಮಯದಲ್ಲಿ ‘ಮಾಲ್ಗುಡಿ ಡೇಸ್ ಸಿನಿಮಾಟೋಗ್ರಫರ್ ‘ಎಸ್. ರಾಮಚಂದ್ರ ಅವ್ರು,1988 ರಲ್ಲಿ ನನಿಗೆ ಸಹಾಯಕ ಛಾಯಾಗ್ರಾಹಕನಾಗಿ ಕೆಲಸ ಮಾಡೋದಕ್ಕೆ ಅವಕಾಶ ಕೊಟ್ರು, ಮಾಲ್ಗುಡಿ ಡೇಸಲ್ಲಿ. ನಾನು ಮೊದಲು ಸಹಾಯಕ ಛಾಯಾಗ್ರಾಹಕನಾಗಿ ಕೆಲ್ಸ ಮಾಡಿದ್ದು ಮಾಲ್ಗುಡಿ ಡೇಸ್ ಅಂತನೇ ಹೇಳ್ಬಹುದು.


ಪರಮ್: ಅಂದ್ರೆ ನೀವು, ಸ್ಟಿಲ್ ಫೊಟೋಗ್ರಫಿಯಿಂದ ವಿಷ್ಯಲ್ ಫಾರ್ಮಾಟಿಗೆ ಬಂದಿದ್ದೇ ಮಾಲ್ಗುಡಿ ಡೇಸ್ ಇಂದ’


ನಾಗರಾಜ್: ಮಾಲ್ಗುಡಿ ಡೇಸ್ ಇಂದನೇ ನಾನು ಸಿನಿಮಾ ಕ್ಯಾಮರಾ ಮ್ಯಾನ್ ಆಗಿರೋದು. ಸೋ ಮಾಲ್ಗುಡಿ ಡೇಸ್ ಬಗ್ಗೆ ಹೇಳ್ಬೇಕು ಅಂದ್ರೆ, ನನಿಗೆ ಅದು ಹೊಸದು ಅವಾಗ. ಅದ್ರಲ್ಲಿ ನಾನು ಸಾಕಷ್ಟು ಕಲ್ತಿದ್ದೀನಿ.ಮುಂದುವರೆಯುವುದು…

14 views