ನಿಮಗೆ ಮಾಲ್ಗುಡಿ ಡೇಸ್‌ ಶೂಟಿಂಗ್‌ ಸ್ಕೆಡ್ಯೂಲ್ ಗೊತ್ತಾ?

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 56

(ಮಾಲ್ಗುಡಿ ಡೇಸ್ ಕಾಸ್ಟ್ಯೂಮ್ ಮುಖ್ಯಸ್ಥೆ, ಸುಂದರಶ್ರೀ ಅವರ ನೆನಪುಗಳು)
ಪರಮ್: ಒಟ್ಟು ಎಷ್ಟು ವರ್ಷ ಶೂಟ್ ಮಾಡಿದ್ರಿ? ಕಂಟಿನ್ಯೂಸ್ ಆಗಿ ಮಾಡಿದ್ರಾ?


ಸುಂದರಶ್ರೀ: ಹೇಳಿದ್ನಲ್ಲಾ 1986 ಫೆಬ್ರವರಿಯಲ್ಲಿ ಶೂಟಿಂಗ್ ಶುರು ಮಾಡಿದ್ವಿ. 1989 ವರೆಗೂ ಶೂಟ್ ಮಾಡಿದ್ವಿ. ಕಂಟಿನ್ಯೂಸ್ ಆಗಿ ಮಾಡ್ಲಿಲ್ಲ. 1986 ಫೆಬ್ರವರಿಯಲ್ಲಿ ಶೂಟ್ ಮಾಡಿ, ಜೂನ್ನಲ್ಲಿ ‘ಮಿಸ್ಸಿಂಗ್ ಮೇಲ್’ ಮತ್ತೆ ಮೂರು ಎಪಿಸೋಡ್ ಮಾಡಿದ್ವಿ. ಮತ್ತೆ ಅರ್ಧ ಬೆಂಗ್ಳೂರಲ್ಲಿ ಅರ್ಧ ಆಗುಂಬೆಯಲ್ಲಿ ಮಿಕ್ಸ್ ಆಂಡ್ ಮ್ಯಾಚ್ ಮಾಡಿ ಮಾಡ್ತಿದ್ವಿ. ಅಯ್ಯೋ ನಿಜವಾಗ್ಲೂ, ಥ್ಯಾಂಕ್ಸ್ ಟು ‘ಜಾನ್ ದೇವರಾಜ್‌ʼ. ಇನ್ನೊಂದು ಇನ್ಸಿಡೆಂಟ್, ಇಲ್ಲಿ ಯಡಿಯೂರು ಕೆರೆ ಹತ್ರ ಒಂದು ಕಾಟೇಜ್ ಅಲ್ಲಿ ಜೈಲ್ ಸೀನ್ ಆಗ್ಬೇಕಿತ್ತು. ಹೆಂಗೆ ಮಾಡಿರ್ಬೋದು?


ಶಂಕರ್ ಹೇಳಿದ್ರು “ಒಂದು ಜೈಲ್ ದು ಫ್ರೇಮ್ ಮಾಡ್ಕೋ, ಹಿಂದ್ಗಡೆ ಖೈದಿಗಳ ಮತ್ತು ಪೊಲೀಸ್ ಬಟ್ಟೆಗಳನ್ನ ಹಾಕ್ಕೊಂಡು ಜನ ಓಡಾಡ್ತಿರ್ಲಿ. ಹಾಗೆ ಮಾಡಿ, ಜೈಲ್ ಫ್ರೇಮ್ ಇಟ್ಕೊಂಡು ಶೂಟ್ ಮಾಡಿದಾರೆ. ನಿಮಗೆ ಅದು ಚೀಟ್ ಮಾಡಿದ್ದೀವಿ, ಅಂತ ಗೊತ್ತೇ ಆಗಲ್ಲ. ಯಾಕಂದ್ರೆ, ಸೆಟ್ ಆಗ್ಲಿ, ಪ್ರಾಪರ್ಟೀಸ್ ಆಗ್ಲಿ, ಕಾಸಟ್ಯೂಮ್ ಆಗ್ಲಿ, ಮೇಕಪ್ ಆಗ್ಲಿ ಪ್ರತಿಯೊಂದು ಪರ್ಫೆಕ್ಟಾಗಿರ್ತಿತ್ತು.


ಮತ್ತೆ ಕ್ಯಾಮರಾ ಮ್ಯಾನ್ ರಾಮು ಸರ್ ರಿಯಲ್ಲಿ ಹಿ ಈಸ್ ಗ್ರೇಟ್. ‘ಮಿಠಾಯಿವಾಲʼದ್ದು ಒಂದು ಇನ್ಸಿಡೆಂಟ್ ಹೇಳ್ತೀನಿ. ಇಲ್ಲೇ ಬೆಂಗಳೂರಲ್ಲಿ ಆಗಿದ್ದು. ಆಲೆ ಮನೆ ಅಂತಿತ್ತು. ಈಗ ಅಲ್ಲಿ ಅಪಾರ್ಟಮೆಂಟ್ ಏನೋ ಆಗಿದೆ. ಅಲ್ಲಿ ಹೆಂಗಿತ್ತು? ಅಂದ್ರೆ, ಮುಂದೆ ಗೇಟ್, ಗೇಟ್ ತೆಗೆದ ತಕ್ಷಣ, ಒಂದು ಅಡಿ ಗ್ಯಾಪ್ ಅಲ್ಲೇ ಮೇನ್ ಎಂಟ್ರೆನ್ಸ್ ಗೇಟ್. ಸೈಡಲ್ಲಿ ಹೋದ್ರೆ ಇನ್ನೊಂದು ಎಂಟ್ರೆನ್ಸ್ ಗೇಟ್. ಅನಂತ್ ನಾಗ್ ಫ್ಲಾಷ್ ಬ್ಯಾಕ್ ಸೀನಲ್ಲಿ ಎಂಟ್ರಿ ಆಗ್ತಾರೆ. ಅಲ್ಲಿ ಯಾರ ಹತ್ರನೋ ಮಾತಾಡಿ, ತಿರ್ಗ ವಾಪಸ್ ಬಂದು, ಒಳಗೆ ಹೋಗಿ ಇನ್ನೊಬ್ಬರ ಹತ್ರ ಮಾತಾಡಿ, ಒಳಗೆ ಹೋಗ್ತಾರೆ. ಅಷ್ಟನ್ನೂ ಟ್ರಾಲಿ-ಟ್ರಾಕಲ್ಲಿ ಒಂದೇ ಶಾಟ್ ತಗೊಂಡಿದಾರೆ. ನೋ ಕಟ್. ಈ ತರದ್ದು ಮಾಲ್ಗುಡಿ ಡೇಸಲ್ಲಿ ತುಂಬಾ ಸಿಗುತ್ತೆ.


ಮುಂದುವರೆಯುವುಯದು…

16 views