ನಿಮಗೆ ಯಾವುದಾದ್ರು ಸಬ್ಜೆಕ್ಟ್‌ ಕಷ್ಟ ಆದ್ರೆ ಏನು ಮಾಡ್ಬೇಕು…

ಹಿರಿಯ ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರ ಲೈಫ್ ಸ್ಟೋರಿ - ಭಾಗ 9ಮಂಡ್ಯ ರಮೇಶ: ಎಂಟನೇ ಕ್ಲಾಸಿಗೆ ನಾನು ಇನ್ನೇನು ಕಾಲಿಟ್ಟೆ ಅಷ್ಟರಲ್ಲಿ ನಮ್ಮ ತಂದೆಗೆ ಮತ್ತೆ ಟ್ರಾನ್ಸಫರ್ ಆಗೋಯ್ತು. ಮಂಡ್ಯಕ್ಕೆ ಬಂದ್ಬಿಟ್ರು ನಮ್ಮಪ್ಪ.


ಪರಮ್: ಟೌನ್?


ಮಂಡ್ಯ ರಮೇಶ್: ಮಂಡ್ಯ ಟೌನ್.


ಪರಮ್: ನಾಗಮಂಗಲ ಟು ಮಂಡ್ಯ?


ಮಂಡ್ಯ ರಮೇಶ್: ನಾನು ಅಲ್ಲಿ ಕನ್ನಡ ಮೀಡಿಯಮಲ್ಲಿ ಓದಿದವನು, ಇಲ್ಲಿ ಬಂದು ನನ್ನ ಇಂಗ್ಲೀಷ್ ಮೀಡಿಯಮ್‍ಗೆ ಹಾಕ್ಬಿಟ್ರು. ಇತ್ತ ಕಡೆ ಕನ್ನಡ ಮೀಡಿಯಮ್ ಕೂಡ ಸರಿಯಾಗಿ ಬರಲ್ಲ, ಇಂಗ್ಲೀಷ್ ಮೀಡಿಯಮ್ ಕೂಡ ಸರಿಯಾಗಿ ಬರಲ್ಲ. ನಾನು ಸ್ಕೂಲು ಕಾಲೇಜಿನಲ್ಲಿ ಮಾಥ್‍ಮೆಟಿಕ್ಸಲ್ಲಿ ತುಂಬಾ ವೀಕ್. ಆದರೆ ಮೋನೋ ಆಕ್ಟಿಂಗಲ್ಲಿ ಸಖತ್ ಸ್ಟ್ರಾಂಗ್. ನಾನು ಸೈನ್ಸಲ್ಲಿ ಬಹಳ ವೀಕ್ ಆದರೆ ಸಂಘಟನೆಯಲ್ಲಿ ನಂಬರ್ ಒನ್. ಯಾರನ್ನ ಬೇಕಾದ್ರೂ ನನ್ನ ಜೊತೆಯಲ್ಲಿ ಸೇರಿಸ್ಕೊಳ್ತಿದ್ದೆ. ಈಗ್ಲೂ ನಾಟಕ ಕಲಿಯಕ್ಕೆ ಪ್ರಯತ್ನ ಮಾಡ್ತೀನಿ ಅಂತ ಬರೋವಂತಹ ಎಷ್ಟೋ ಜನ ಹುಡುಗರಿಗೆ ನಾನು ಯಾವಾಗ್ಲೂ ಒಂದು ಮಾತು ಹೇಳ್ತೀನಿ “ನಿಮಗೆ ಯಾವುದೋ ಸಬ್ಜೆಕ್ಟ್ ಕಷ್ಟ ಆಯ್ತು ಅಂದ್ರೆ ನೀವು ಒಂದು ಚೂರೂ ಕೂಡ ಯೋಚನೆ ಮಾಡ್ಬೇಡಿ, ಅದಕ್ಕೆ ಪರ್ಯಾಯವಾಗಿ ಒಂದು ಹಾಡುಗಾರಿಕೆ ಹುಡುಕ್ಕೊಂಡ್ಬಿಡಿ, ಅದಕ್ಕೆ ಪರ್ಯಾಯವಾಗಿ ಕ್ರೀಡೆಯಲ್ಲಿ ತೊಡಗಿಸ್ಕೋಬಿಡಿ” ಅಂತ.


ನಾವು ಇನ್ಫೋಸಿಸ್ ನಾರಾಯಣ ಮೂರ್ತಿ ಅವರನ್ನ ಎಷ್ಟು ಗೌರವಿಸ್ತೀವೋ, ನಾರಾಯಣ ಮೂರ್ತಿ ಅವರನ್ನ ಎಷ್ಟು ಪ್ರೀತಿ ಮಾಡ್ತೀವೋ, ಅಷ್ಟೇ ಒಲಂಪಿಕಲ್ಲಿ ಚಿನ್ನ ತಂದವನನ್ನ ಪ್ರೀತಿ ಮಾಡ್ತೀವಲ್ಲಾ ಸಾರ್ ಈಗ? ಇಡೀ ಪ್ರಪಂಚದ ಮಧ್ಯೆ ಕ್ರೀಡೆಯಲ್ಲಿ ಹೇಗೆ ಚಿನ್ನ ತಗೊಂಡ್ಬಂದ? ಅಮಿತಾಬ್‍ ಬಚ್ಚನ್ ಅವರನ್ನ ಎಷ್ಟು ಗೌರವಿಸ್ತೀವಿ ಸಾರ್? “ಹಾಗಾಗಿ ನಮಗೆ ವಿದ್ಯೆ ಅನ್ನೊದು ಯಾವಾಗ್ಲೂ ಬೇರೆ ಬೇರೆ ಕ್ಷೇತ್ರಗಳ ಮೂಲಕ ದಕ್ಕುತ್ತಾ ಇರುತ್ತೆ. ಅದನ್ನ ದಕ್ಕಿಸಿ ಕೊಳ್ಳುವಂತಹ ಪ್ರಯತ್ನ ಮಾಡಿ. ದ್ವಿಮುಖರಾಗ್ಬೇಡಿ, ಖಿನ್ನತೆ ಇಟ್ಕೋಬೇಡಿ, ಎಂತದ್ದೇ ಸಂಧರ್ಭದಲ್ಲೂ ಆತ್ಮಹತ್ಯೆಗೆ ಮನಸ್ಸನ್ನ ಎಡೆ ಮಾಡ್ಕೊಡ್ಬೇಡಿ, ಬದುಕುವುದಕ್ಕೆ ತುಂಬಾ ದಾರಿ ಇವೆ. ಅದಕ್ಕೆ ಈ ರಂಗ ಸಹಾಯ ಮಾಡುತ್ತೆ” ಅಂತ ಯಾವಾಗ್ಲೂ ಹೇಳ್ತಾ ಇರ್ತೀನಿ. ಅದು ನಾನು ಚಿಕ್ಕಂದಿನಿಂದ ಬೇರೆ ಬೇರೆ ರೀತಿಯ ಜೀವಗಳನ್ನ ನೋಡಿ ಕಲ್ತಿದ್ದು.ಮುಂದುವರೆಯುವುದು…

68 views