ನಿಮ್ಮ ಮಕ್ಕಳನ್ನ ಅನಾಥಾಶ್ರಮಕ್ಕೆ ಕರೆದುಕೊಂಡು ಹೋಗಬೇಡಿ

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 47
ಕೆಲವರು ಮಕ್ಕಳನ್ನು ಅನಾಥಾಶ್ರಮಕ್ಕೆ ಕರೆದುಕೊಂಡು ಹೋಗಿ, ಅಲ್ಲಿರುವ ಮಕ್ಕಳಿಗೆ ಊಟ ಹಾಕಿಸುತ್ತಾರೆ. ಅದು ಸರಿಯಲ್ಲ. ಯಾಕಂದ್ರೆ ಅನಾಥ ಮಕ್ಕಳಿಗೆ ಮನಸ್ಸಿಗೆ ನೋವಾಗುತ್ತದೆ. ಅವನಿಗೆ ಅಪ್ಪ, ಅಮ್ಮ ಇದ್ದಾರೆ. ನಮಗೆ ಯಾರೂ ಇಲ್ಲ ಎಂಬ ಭಾವನೆ ಬರುತ್ತದೆ. ಆದ್ರೆ, ಅವರಿಗೆ ಊಟ ಕೊಡಿ. ಅವರಿಗೆ ಯಾರು ಕೊಟ್ಟಿದ್ದು ಎಂಬುದು ಗೊತ್ತಾಗಬಾರದು. ತಿನ್ನುವ ಕೇಕ್‌ ತಂದು ಮುಖದ ಮೇಲೆ ಹೊಡೆದು ಹಾಳು ಮಾಡುತ್ತಾರೆ. ಕ್ಯಾಂಡಲ್‌ ಊದುತ್ತಾರೆ. ನಮ್ಮದು ದೀಪ ಹಚ್ಚುವ ದೇಶ. ಮಕ್ಕಳಿಗೆ ಒಳ್ಳೆಯದನ್ನೇ ಹೇಳಿಕೊಡಿ. ಅಹಂಕಾರವನ್ನು ಬೆಳೆಸಬೇಡಿ.ಮುಂದುವರೆಯುವುದು...

10 views