ನೂರು ಸಿನಿಮಾ ಮಾಡಿದ ಮೇಲೆ ಬೆಂಗಳೂರಿಗೆ ಬಂದದ್ದು ನಾನು

ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ಅವರ ಲೈಫ್ ಸ್ಟೋರಿ

ಭಾಗ-9ಅಲ್ಲಿಂದ ನನ್ನ ಚಿತ್ರರಂಗದ ಜೀವನ ಸ್ಟಾರ್ಟ್ ಆಯ್ತು. ಜೋಸೈಮನ್, ಧೀರೇಂದ್ರಗೋಪಾಲ್, ಕುಣಿಗಲ್ ನಾಗಭೂಷಣ್ ಇರುವಂತಹ ಪ್ರತಿಯೊಂದು ಚಿತ್ರಗಳಲ್ಲೂ ನಂಗೊಂದು ಪಾತ್ರ ಗ್ಯಾರೆಂಟಿ ಆಯ್ತು. ಕುಣಿಗಲ್ ನಾಗಭೂಷಣ್ ಅವರು ಯಾವುದೋ ಒಂದು ಸೀನಲ್ಲಿ ಜನಾರ್ಧನ ಅಂತ ಬರೆದು ಬಿಡೋರು. ಈ ರೀತಿಯಾಗಿ ನಂಗೆ ಪಾತ್ರಗಳು ಸಿಗೋದಕ್ಕೆ ಶುರುವಾಯ್ತು. ಅಷ್ಟರಲ್ಲಿ ನಂಗೆ ಬ್ಯಾಂಕಲ್ಲಿ ಪ್ರಾಬ್ಲಮ್ ಶುರುವಾಯ್ತು. ಆದ್ರೂ ಕೂಡ ಹೊಳಲ್ಕೆರೆಯಲ್ಲಿದ್ಕೊಂಡೇ ಬೆಂಗಳೂರಿಗೆ ಬಂದು ನೂರು ಪಿಚ್ಚರ್ ಮಾಡ್ದೆ. ಆಗ ನೀವು ಲೆಕ್ಕ ಹಾಕಿ ಬ್ಯಾಂಕ್ ಕೆಲ್ಸ ಹೇಗಿರ್ಬೋದು? ಅಂತ. ಕೆಲವೊಮ್ಮೆ ಶೂಟಿಂಗ್‍ಗೆ ಅಂತ ಬಂದ್ರೆ ಶೂಟಿಂಗ್ ಡೇಟ್ ಪೋಸ್ಟ್ ಪೋನ್ ಆಗ್ಬಿಡೋದು. ಏನ್ಮಾಡೋದು? ಎಲ್ಲಿ ಹೋಗೋದು? ಸೀದ ಧೀರೇಂದ್ರ ಗೋಪಾಲ್ ಅವರ ರೂಮ್‍ಗೆ ಹೋಗ್ತಿದ್ದೆ.


ಪರಮ್: ಜನಾರ್ಧನ್ ಲಾಡ್ಜ್?


ಬ್ಯಾಂಕ್ ಜನಾರ್ಧನ್: ಜನಾರ್ಧನ್ ಲಾಡ್ಜ್‍ಗೆ ಹೋಗ್ತಿದ್ದೆ. ಅಲ್ಲಿ ಹೋಗಿ ಇದ್ಬಿಡ್ತಿದ್ದೆ. ಅವರೂ ಪಾತ್ರ ಮಾಡ್ತಾ ಇದ್ರಲ್ಲಾ? ಹಾಗಾಗಿ ಅವರ ಜೊತೆ ಇದ್ಬಿಡ್ತಾ ಇದ್ದೆ. ಹೀಗೇ ಮಾಡಿ ನೂರು ಪಿಚ್ಚರ್‍ಗಳು ಮಾಡ್ದೆ ಸಾರ್. ಡಾಕ್ಟರ್, ಲಾಯರ್, ಸಬ್ ಇನ್ಸ್‍ಪೆಕ್ಟರ್, ಜಡ್ಜ್ ಎಲ್ಲಾ ತರದ ಕ್ಯಾರಕ್ಟರ್ ಒಂದೊಂದು ಸೀನ್ ಹೀಗೇ ನೂರು ಪಿಚ್ಚರ್ ಮಾಡ್ಬಿಟ್ಟೆ. ಒಂದು ಸೀನ್ ಅಥವಾ ಎರಡು ಸೀನ್ ಅಷ್ಟೇ, ಅದರ ಮೇಲೆ ಮಾಡ್ತಿರ್ಲಿಲ್ಲ. ಕಂಟಿನ್ಯುಟಿ ಇರ್ಲಿಲ್ಲ. ಹೀಗೇ ಆಗ್ತಾ ಇತ್ತು. ಅಷ್ಟೊತ್ತಿಗೆ ನಮ್ಮ ತಂದೆ ತೀರ್ಕೊಂಡ್ರು. ತಂದೆ ಯಾವಾಗ್ಲೂ ಬೈತಾ ಇದ್ರು. ತಂದೆ ತೀರ್ಕೊಂಡ ಮೇಲೆ ಬಲವಂತ ಕಡಿಮೆ ಆಯ್ತಲ್ಲಾ? ಆಮೇಲೆ ಇಲ್ಲಿ ಇದ್ರೆ ಆಗಲ್ಲಾ ಅಂತ ಹೇಳಿ ಬೆಂಗ್ಳೂರಿಗೆ ಟ್ರಾನ್ಸಫರ್ ತಗೊಂಡ್ಬಿಟ್ಟೆ. ಬ್ಯಾಂಕ್‍ನಲ್ಲಿ ನಾನು ಹೋದ್ರೆ ಸಾಕಾಗಿತ್ತು ಅವರಿಗೆ.


ಮುಂದುವರೆಯುವುದು...

22 views