ನಾವು ಸೀಬೆಕಾಯಿ,ಪರಂಗಿಕಾಯಿ ಕದ್ದು ಏನು ಮಾಡ್ತಿದ್ವಿ ಅಂದ್ರೆ……..

ಹಿರಿಯ ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರ ಲೈಫ್ ಸ್ಟೋರಿ - ಭಾಗ 8



ಎಲ್ಲಾ ಮನೆಗಳಲ್ಲಿ ಸೀಬೇಕಾಯಿ ಕದೀತಾ ಇದ್ವಿ. ಪರಂಗೀ ಕಾಯಿ ಕದೀತಾ ಇದ್ವಿ. ಆಕದ್ದ ಪರಂಗೀಕಾಯಿನ ಸಿನಿಮಾ ಟೆಂಟಲ್ಲಿ ಗೇಟ್ ಕೀಪರ್‍ಗೆ ಕೊಟ್ಬಿಟ್ಟು ರಾಜ್‍ಕುಮಾರ್‍ದು ಯಾವ್ಯಾವುದೋ ಪಿಚ್ಚರ್‍ಗಳೆಲ್ಲಾ ನೋಡ್ತಿದ್ವಿ. ಇಮ್ಮಡಿಪುಲಿಕೇಶಿ, ವೀರಕೇಸರಿ ಹೀಗೇ ಪಿಚ್ಚರ್‍ಗಳು ನೋಡೋದು.


ರಾಜ್ ಕುಮಾರ್‍ನಮನಸ್ಸಿನಲ್ಲೇ ಆರಾಧಿಸೋದು. ಆಧಟ್ಟವಾದ ಟೀಡಿ ಹೊಗೆಗಳ ನಡುವೆ, ಆ ಪ್ರೊಜೆಕ್ಟರ್‍ಗಳ ನಡುವೆ, ಹಳೇ ಕಿತ್ತು ಹೋದ ಪರದೆಯ ನಡುವೆ, ಎಲ್ಲಾ ಅಜೀರ್ಣವಾಗಿ ಬಿದ್ಹೋಗ್ತಾ ಇದ್ದ ಟೆಂಟಿನ ನಡುವೆ ರಾಜ್ ಕುಮಾರ್ ನಮಗೆ ಮಯ್ಯೂರ, ಶ್ರೀನಿವಾಸ ಕಲ್ಯಾಣ ಎಲ್ಲಾ ತೋರಿಸಿದಂತಹ ಆರಾಧ್ಯ ದೈವ. ಹಾಗೇ ರಾಜ್ ಕುಮಾರ್ ಹೇಗೆ ಕನ್ನಡ ನಾಡಿಗೆ ಒಂದು ಅಸ್ಮಿತಿಯನ್ನ ತಂದು ಕೊಟ್ರೋ, ಹಾಗೇ ಬಾಲ್ಯದಲ್ಲಿ ನಮಗೆ ದೊಡ್ಡ ಗುರುವಾದದ್ದೂ ಹೌದು. ಅವರ ಪಾತ್ರಗಳ ಮೂಲಕ, ಅವರ ಭಾಷೆಯ ಮೂಲಕ, ಹಾಗೂ ಅವರು ಯೋಚನೆ ಮಾಡ್ತಿದ್ದಂತಹ ಚಿಂತನೆಗಳ ಮೂಲಕ. ಬಿಳೀ ಶರ್ಟು ಹಾಗೂ ಬಿಳಿ ಪಂಚೆ ಹಾಕೊಂಡು ತನ್ನ ಪಾಡಿಗೆ ತಾನು ಮುದ್ದಾಗಿರುವ ಮುಖದಲ್ಲಿ ಇಡೀ ಕನ್ನಡ ನಾಡಿನ ಗೋಕಾಕ್ ಚಳುವಳಿಗೆ ಸುತ್ತಾಡ್ತಿದ್ದಂತಹ ರಾಜ್ ಕುಮಾರ್ ನಮಗೆಲ್ಲಾ ಒಂದು ಮಾದರಿ, ಒಂದು ಆದರ್ಷ. ಹಾಗಿರ್ಬೇಕು ಒಬ್ಬ ಮನುಷ್ಯ ಅಂದ್ರೆ,


ಈ ತರ ಬದುಕುಗಳನ್ನ ನೋಡ್ತಾ ನೋಡ್ತಾ, ನಾಟಕಗಳನ್ನ ಮಾಡ್ತಾ ಬೆಳೆದೆ. ನಾಗಮಂಗಲದಲ್ಲಿ ಶಿವಶಂಕರ ಸಮಿತಿ ಅಂತ ತಂಡ ಕಟ್ಟಿದ್ದೆ ಅಂತ ಹೇಳ್ದೆ ಅಲ್ವಾ ನಿಮಗೆ? ಅವಾಗ ಅಲ್ಲಿದ್ದ ಟೀಚರ್ಸ್‍ಗಳೆಲ್ಲಾ ಸಪೋರ್ಟ್ ಮಾಡ್ತಿದ್ರು. ಅವರು ನನ್ನ ನಾಟಕ ನೋಡಕ್ಕೆ ಬರೋರು. ಆದರೆ…



ಮುಂದುವರೆಯುವುದು…

30 views