ಪಿ.ಎಫ್‌ ದುಡ್ಡಲ್ಲಿ ಕಟ್ಟಿದ್ದ ಮನೆ ನೆಲಸಮ ಮಾಡಿಬಿಟ್ರು

ಮಿಮಿಕ್ರಿ ದಯಾನಂದ್‌ ಲೈಫ್‌ ಸ್ಟೋರಿ ಭಾಗ 38
ನನ್ನ ಪಿಎಫ್‌ ದುಡ್ಡಲ್ಲಿ ಈಗಿರುವ ಮನೆಯ ಜಾಗದಲ್ಲಿಯೇ ಪುಟ್ಟ ಮನೆ ಕಟ್ಟಿದ್ದೆ. ಬೇರೆಯವರಿಗೆ ಬಾಡಿಗೆಗೆ ಕೊಡುವುದೆಂದು ಯೋಚಿಸಿದ್ದೆ. ಪೂರ್ತಿ ಕಟ್ಟಿ ಆಗಿತ್ತು. ಆದ್ರೆ, ಯಾರು ಅಲ್ಲಿ ನೆಲೆಸಿರಲಿಲ್ಲ. ಜಾಗ ಸ್ವಲ್ಪ ಇತ್ತು. ಮನೆ ನೋಡಲು ಬಂದಾಗ ಅದು ನೆಲಸಮ ಆಗಿಹೋಗಿತ್ತು. ಗೇಟ್‌ ಎಲ್ಲ ಒಡೆದು ಚಿಂದಿ ಮಾಡಿದ್ರು. ಕಾನೂನು ಬದ್ಧವಾಗಿಯೇ ಒಡೆದು ಹಾಕಿಸಿದ್ರು. ಆದರೆ, ಅದು ಕಾನೂನು ಬದ್ಧವಾಗಿ ಇರಲಿಲ್ಲ. ನನಗೆ ನೋಟಿಸ್‌ ಕೊಟ್ಟಿದ್ದಾರೆ ಎಂದು ಹೇಳಿದ್ರು. ಆದರೆ ನನಗೆ ನೋಟಿಸ್‌ ಕೊಟ್ಟಿರಲಿಲ್ಲ. ಈ ಘಟನೆ ಆಗಿದ್ದು, 5.30ಕ್ಕೆ. 6.30ಗಕ್ಕೆ 20 ಸಾವಿರ ಜನರನ್ನು ನಾನು ನಗಿಸಬೇಕಿತ್ತು. ಒಂದು ಡೈಲಾಗ್‌ ಹೇಳುತ್ತಿದ್ದೆ. ಎಲ್ಲ ನಗುತ್ತಿದ್ದರೆ, ಗ್ಯಾಪಲ್ಲಿ ನಾನು ಅಳುತ್ತಿದ್ದೆ. ಮನೆ ಓಡೆದ್ದಿದೆ ನನ್ನ ಕಣ್ಣ ಮುಂದೆ ಬರುತ್ತಿತ್ತು. ಹೆಂಡತಿಗೆ ಟೆನ್ಷನ್‌ ತಡೆದುಕೊಳ್ಳುವ ಶಕ್ತಿ ಇರಲಿಲ್ಲ. ಹಾಗಾಗಿ ಅವಳಿಗೆ ಹೇಳುವಂತಿರಲಿಲ್ಲ. ಬಂದಿರುವ ಸ್ನೇಹಿತರಿಗೆ ಹೇಳಿದ್ರೆ ಶೋ ಕೆಟ್ಟು ಹೋಗುತ್ತಿತ್ತು. ನಾನೇ ನೋವನ್ನು ನುಂಗಬೇಕಿತ್ತು.


ಯಾವ ಸಚಿವರ ಪ್ರಭಾವವನ್ನು ಉಪಯೋಗಿಸದೆ, ನಾನೇ ಹೋರಾಡಿದೆ. ಹೊಡಿಸಿ ಹಾಕಿಸಿದ್ದವರ ಜೊತೆಗೆಯೇ ರಾಜಿ ಮಾಡಿಕೊಂಡೆ. ಅವರೀಗ ನನಗೆ ಒಳ್ಳೆಯ ಸ್ನೇಹಿತರು. ಅವರ ಮನೆಯಲ್ಲಿ ಹುಟ್ಟುಹಬ್ಬ ಇದ್ರು, ದಯಾನಂದ್‌ ಸರ್‌ ಇಲ್ಲ ಎಂದು ಆಚರಣೆಯ ದಿನವನ್ನು ಬದಲಾಯಿಸುತ್ತಾರೆ. ಅಷ್ಟು ಕ್ಲೋಸ್‌ ಆದೆವು. ನಾನು ಯಾರು ಎಂಬುದು ಅವರಿಗೆ ಆಮೇಲೆ ಗೊತ್ತಾಯ್ತು.ಮುಂದುವರೆಯುವುದು...

17 views