ಪ್ರಪಂಚದ ಸಂಪರ್ಕವನ್ನೇ ಮರೆತು ಅಭಿನಯಿಸಿದ ಅಣ್ಣಾವ್ರ ಆ ಪಾತ್ರ ಹೇಗಿತ್ತು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 56


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ನನ್ನ ಆರಾಧ್ಯ ದೈವ ಮಂತ್ರಾಲಯ ಮಹಾತ್ಮೆ ಸಿನಿಮಾದಲ್ಲಿ ಮತ್ತೆರಡು ಘಟನೆಗಳು ನಡೆದಿದ್ದವು. ಇದು ರಾಜ್‌ಕುಮಾರ್‌ ಅವರ ಬಾಯಿಂದಲ್ಲೇ ಬಂದಿದ್ದು. ರಾಘವೇಂದ್ರ ಸ್ವಾಮಿಗಳ ಚಿತ್ರೀಕರಣದ ವೇಳೆ ರಾಜ್‌ಕುಮಾರ್‌ ಅವರ ತನ್ಮಯತೆ ಎಷ್ಟಿತ್ತು ಎಂಬುದಕ್ಕೆ ಒಂದೆರಡು ನಿದರ್ಶನಗಳಿವೆ.


ರಾಜ್‌ಕುಮಾರ್‌ ಅವರು ದೀಕ್ಷೆ ತೆಗೆದುಕೊಳ್ಳುವ ಸಂದರ್ಭವದು. ರಾಜ್‌ಕುಮಾರ್‌ ಅವರು ದೀಕ್ಷೆ ತೆಗೆದುಕೊಂಡ ದೃಶ್ಯ ಚಿತ್ರೀಕರಣದ ನಂತರ ಕಟ್‌ ಎಂದು ಹೇಳಿದ ಮೇಲೂ ಎರಡು ನಿಮಿಷ ಹಾಗೆಯೇ ಕೂತಿದ್ರು. ನಂತರ ಎದ್ದು ಬಂದ ಅವರು ಭಗವಾನ್‌ ಶಾಟ್‌ ತೆಗೆದ್ರಾ ಎಂದರು. ಹೌದು ಎಂದೆ. ನನಗೆ ಗೊತ್ತಾಗೇ ಇಲ್ಲ ಭಗವಾನ್‌. ನಾನು ನಡೆದುಕೊಂಡು ಹೋಗಿದ್ದು, ಅಲ್ಲಿ ಏನು ಹೇಳಿದ್ರೂ ಏನು ಗೊತ್ತಾಗಲಿಲ್ಲ ಅಂದ್ರು. ಈ ಪ್ರಪಂಚದ ಸಂಪರ್ಕವೇ ಇರಲಿಲ್ಲ ನನಗೆ. ನನ್ನನ್ನು ನಾನು ಮರೆತುಬಿಟ್ಟಿದ್ದೆ ಎಂದ್ರು. ಸಾಮಾನ್ಯವಾಗಿ ಪಾತ್ರದಲ್ಲಿ ಪರಾಕಾಯ ಪ್ರವೇಶ ಮಾಡಿದ್ದಾರೆ ಎಂದು ಬಾಯಿ ಮಾತಿಗೆ ಹೇಳುತ್ತೇವೆ. ಆದರೆ ಇಲ್ಲಿ ರಾಜ್‌ಕುಮಾರ್‌ ಅವರು ನಿಜವಾಗಿಯೂ ಪರಾಕಾಯ ಪ್ರವೇಶ ಮಾಡಿದ್ರು.ಮುಂದುವರೆಯುವುದು...

10 views