ಬೆಂಗಳೂರು ಗಣೇಶ ಉತ್ಸವಲ್ಲಿ ದಯಾನಂದ್‌ಗೆ ಸಿಗುವ ಸಂಭಾವನೆ

ಮಿಮಿಕ್ರಿ ದಯಾನಂದ್‌ ಲೈಫ್‌ ಸ್ಟೋರಿ ಭಾಗ 41
ಬೆಂಗಳೂರಿನಲ್ಲಿ ಮಿಮಿಕ್ರಿ ಕಲಾವಿದರು ಇನ್ನೂ 150 ಜನ ಬಂದ್ರು, ತಿಂಗಳಿಗೆ 50 ಸಾವಿರದಿಂದ 2 ಲಕ್ಷದವರೆಗೆ ದುಡಿಯಬಹುದಾದ, ವ್ಯವಸ್ಥೆ ಇಲ್ಲಿದೆ. ಜನ ಅಷ್ಟು ದುಡ್ಡು ಕೊಡುತ್ತಾರೆ. ನಮ್ಮಲ್ಲಿ ಯೋಗ್ಯತೆ ಇರಬೇಕು.


ಶ್ರೀ ವಿದ್ಯಾರಣ್ಯ ಯುವ ಸಂಘ ನಡೆಸುವ ಬೆಂಗಳೂರು ಗಣೇಶ ಉತ್ಸವದಲ್ಲಿ 32 ವರ್ಷ ನಿರಂತರವಾಗಿ ಪ್ರದರ್ಶನ ಕೊಟ್ಟಿದ್ದೇನೆ. ನಾನು ಹೊಸತನ್ನು ಮಾಡುತ್ತೇನೆ ಎಂಬ ನಂಬಿಕೆಯಿಂದಲೇ ಅವರು ನನಗೆ ಶೋ ನಡೆಸಲು ಅವಕಾಶ ಕೊಟ್ಟಿದ್ದಾರೆ. ನಮ್ಮನ್ನು ಬೆಳೆಸುವವರಿಗಾಗಿ ನಾವು ಹೊಸತನ್ನು ಕಲಿತು, ಮಾಡಲೇಬೇಕು. ಅಷ್ಟು ದೊಡ್ಡ ಸಮಿತಿಯವರು ನನಗೆ ಬೆಳ್ಳಿ ಕಿರೀಟ ಹಾಕಿ ಸನ್ಮಾನಿಸಿದರು. ನಾನು ಸೈಕಲ್‌ನಲ್ಲಿ ಹೋಗಿ ಆ ವೇದಿಕೆ ಹತ್ತಿದ್ದೆ. ಹೊಸ ಕಾರು ತೆಗೆದುಕೊಂಡಾಗ ಹೋಗಿದ್ದು, ಅದೇ ವೇದಿಕೆಗೆ. 3 ವರ್ಷದ ಹಿಂದೆ ಒಂದು ಅವರದೇ ಶೋ ಮಾಡಿದ್ದೆ. 6.30ಯಿಂದ 8.30 ವರೆಗೆ ನಾನು, ನಂತರ ಸೋನು ನಿಗಂ ಕಾರ್ಯಕ್ರಮ ನಡೆಸಿಕೊಡುವವರಿದ್ರು. ಸೋನು ನಿಗಂ ಅವರ ಜನಪ್ರಿಯತೆ ಎಲ್ಲರಿಗೂ ಗೊತ್ತಿರುವಂತಹದೇ. ಸೋನು ನಿಗಂ ಅವರಿಗಿರುವ ಪ್ರೇಕ್ಷಕರನ್ನು ರಂಜಿಸುವಂತಹ ಸೌಭಾಗ್ಯವನ್ನು ಅವರು ನನಗೆ ಕೊಟ್ಟಿದ್ದರು.


ಉಷಾ ಉತ್ತಪ್ಪ ಅವರು ಹಾಡು ಹಾಡುವಾಗ ನಾನು ಮಧ್ಯೆ ಹೋಗಿ ಕಾರ್ಯಕ್ರಮ ನಡೆಸಿಕೊಡುವ ಅವಕಾಶವೂ ದೊರಕಿತ್ತು. ಈ ಕಾರ್ಯಕ್ರಮಕ್ಕೆ ನನ್ನ ಜೊತೆ ಮಂದೀಪ್‌ರಾಯ್‌ ಅವರು ಬಂದಿದ್ರು. ಕಾರ್ಯಕ್ರಮ ಆಯೋಜಿಸಿದ್ದವರು ನನಗೆ 40 ಸಾವಿರ ಕೊಟ್ಟು, ಕನ್ನಡ ಕಲಾವಿದರಿಗೆ ದುಡ್ಡು ತೆಗೆದುಕೊಳ್ಳಲು ಗೊತ್ತಿಲ್ಲ ಎಂದ್ರು. ಯಾಕೆ ಸರ್‌, ಎಂದೆ. ಎಷ್ಟು ದೊಡ್ಡ ಶೋ ಹತ್ತಿದ್ದೀರಿ, ಒಂದು ಗಂಟೆ ಪ್ರದರ್ಶನ ಕೊಟ್ಟು 40 ಸಾವಿರ ಕೇಳಿದ್ರಿ. ನಾನು 50 ಸಾವಿರ ಹೇಳಿದೆ ಅವರಿಗೆ 10 ಸಾವಿರ ನನ್ನ ಕಮಿಷನ್‌. ನೀವು 60 ಸಾವಿರ, 70 ಸಾವಿರ ಹೇಳಿದ್ರು ಕೊಟ್ಟಿರುವವರು ಎಂದ್ರು. ಆಗ ನಾನು ನಿಮಗೆ ಶೋ ಮಾಡಲು ಗೊತ್ತಿಲ್ಲ. ನೀವು ನನಗೆ 40 ಸಾವಿರ ಕೊಟ್ಟಿದ್ದೀರಾ. ನೀವು ಮೊದಲೇ ಉಷಾ ಉತ್ತಪ್ಪ ಅವರ ಹೆಸರು ಹೇಳಿದ್ರೆ ನಾನು ಫ್ರಿಯಾಗಿಯೇ ಬರುತ್ತಿದ್ದೆ ಎಂದೆ. ಅಂತಹ ಮಹಾನ್‌ ಕಲಾವಿದೆ ನಿಂತಿರುವ ವೇದಿಕೆ ಮೇಲೆ ಇನ್ನೊಬ್ಬ ಕಲಾವಿದ ನಿಲ್ಲಲ್ಲು ಹೆಮ್ಮೆ ಪಡುತ್ತಾನೆ. ನನಗೊಂದು ಇದು ಅವಕಾಶ ಎಂದೆ.ಮುಂದುವೆಯುವುದು...

23 views