ಬ್ಯಾಂಕ್‌ ಅಲ್ಲಿದ್ರು ಬ್ಯಾಂಕ್‌ ಬ್ಯಾಲೆನ್ಸ್‌ ಇಲ್ಲ ನಮಗೆ

ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ಅವರ ಲೈಫ್ ಸ್ಟೋರಿ

ಭಾಗ – 21
ಬ್ಯಾಂಕ್‌ ಜನಾರ್ಧನ್‌: ಒಟ್ಟು 860 ಚಿತ್ರಗಳಲ್ಲಿ ಆಕ್ಟ್ ಮಾಡಿದ್ದೀನಿ ಸಾರ್ ಇವತ್ತಿನವರೆಗೂ.


ಪರಮ್: ಬರೀ ಕನ್ನಡದಲ್ಲಿ?


ಬ್ಯಾಂಕ್ ಜನಾರ್ಧನ್: ಹೌದು ಕನ್ನಡ. ಮೂರು ತೆಲುಗು ಸಿನಿಮಾ ಮಾಡ್ದೆ, ಮೂರು ತಮಿಳು, ನಾಲ್ಕು ತುಳು ಎಲ್ಲಾ ಸೇರಿ ಒಟ್ಟು 860 ಪಿಚ್ಚರ್ ಮಾಡ್ದೆ. ಆದರೆ ಬಡ್ಜೆಟ್ ಇಲ್ಲ. ಇವತ್ತಿಗೆ ನಾನು 860 ಪಿಚ್ಚರ್ ಮಾಡಿದ್ರೂ ಇವತ್ತು ನಮ್ಮ ಹತ್ರ ಬಡ್ಜೆಟ್ ಇಲ್ಲ. ಯಾಕೆ ಅಂದ್ರೆ ಅವಾಗ ನಾವು ಡಿಮ್ಯಾಂಡ್ ಮಾಡಕ್ಕೋಗ್ಲಿಲ್ಲ ಸಾರ್. ನನ್ನ ಅವಶ್ಯಕಥೆ ಇದೆ ಅಂದಾಗ ನಾನು ಡಿಮ್ಯಾಂಡ್ ಮಾಡಕ್ಕೋಗ್ಲಿಲ್ಲ. ಎಷ್ಟು ಕೊಡ್ತಾರೋ ಅಷ್ಟು ಇಸ್ಕೊಳ್ತಾ ಇದ್ದೆ. ಯಾಕಂದ್ರೆ ಪಾತ್ರಗಳಲ್ಲಿ ಮುಳುಗಿ ಬಿಟ್ಟೆ ನಾನು. ಒಳ್ಳೊಳ್ಳೆ ಪಾತ್ರಗಳು ಸಿಕ್ಬಿಡ್ತು ನಂಗೆ. ನಾನು ಬಯಸದೇ ಇದ್ದಂತಹ ಪಾತ್ರಗಳೆಲ್ಲಾ ಸಿಕ್ಬಿಟ್ವಲ್ಲಾ? ಹಾಗಾಗಿ ಪಾತ್ರಗಳ ಮೇಲೆ ಹೋಗ್ಬಿಟ್ಟೆ ನಾನು. “ಎಷ್ಟು ಕೊಡ್ಬೇಕು?” ಅಂತ ಕೇಳಿದ್ರೆ, “ನೀವೇ ಏನಾದ್ರೂ ಕೊಡಿ ಅಣ್ಣಾ” ಅಂತಿದ್ದೆ. “ಸರಿ ಆಯ್ತು ಬಿಡು” ಅಂತಿದ್ರು. ಹೀಗೇ ಹೋಗ್ಬಿಡ್ತು. ಇಷ್ಟೇ ಕೊಡಿ ಅಂತ ನಾನು ನಿಖರವಾಗಿ ಕೇಳ್ಳೇ ಇಲ್ಲ. ಹಾಗಾಗಿ ಏನಾಯ್ತು? ನಮಗೆ ಬ್ಯಾಂಕ್ ಬ್ಯಾಲೆನ್ಸ್ ಇಲ್ಲ.


ಪರಮ್: ಬ್ಯಾಂಕಲ್ಲಿದ್ರೂ?


ಬ್ಯಾಂಕ್ ಜನಾರ್ಧನ್: ಬ್ಯಾಂಕಲ್ಲಿದ್ರೂ ಬ್ಯಾಂಕ್ ಬ್ಯಾಲೆನ್ಸ್ ಇಲ್ಲ.ಮುಂದುವರೆಯುವುದು…


153 views