ಬ್ಯಾಂಕ್‌ ಜನಾರ್ಧನ್‌ ಅವರ ಹಿನ್ನೆಲೆ

ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ಅವರ ಲೈಫ್ ಸ್ಟೋರಿ

ಭಾಗ-1ಬ್ಯಾಂಕ್ ಜನಾರ್ಧನ್: ನನ್ನ ಹುಟ್ಟೂರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ. ಹುಟ್ಟಿದ್ದು ಬೆಳೆದಿದ್ದು, ವೈವಾಹಿಕ ಜೀವನ ಆಗಿದ್ದು ಎಲ್ಲಾ ಅಲ್ಲೇ. ಬಣ್ಣ ಹಚ್ಚಿದ್ದೂ ಅಲ್ಲೇ. ಬ್ಯಾಂಕ್‍ಗೆ ಸೇರಿದ್ದೂ ಅಲ್ಲೇ. ನಾನು ಬಾಲ್ಯಾವಸ್ಥೆಯಲ್ಲಿ ಎಂಟನೇ ತರಗತಿಯಲ್ಲಿರ್ಬೇಕಾದ್ರೆ ಒಂದು ನಾಟಕದಲ್ಲಿ ಪಾರ್ಟ್ ಮಾಡ್ದೆ. ಸ್ಕೂಲ್ ಡೇ ಮಾಡ್ತಾರಲ್ಲಾ ಅದರಲ್ಲಿ ‘ಗಂಡ್ಸಲ್ವೇ ಗಂಡ್ಸು” ಅನ್ನೋ ಒಂದು ನಾಟಕದಲ್ಲಿ ಪಾರ್ಟ್ ಮಾಡ್ದೆ. ಅದರಲ್ಲಿ ಅಜ್ಜಿ ಪಾತ್ರ ಮಾಡಿದ್ದೆ. ಅದಕ್ಕೆ ಫಸ್ಟ್ ಪ್ರೈಸ್ ಬಂದ್ಬಿಡ್ತು. ನಾನು ಹುಟ್ಟಿದಾಗ ಕರಂಟೇ ಬಂದಿರ್ಲಿಲ್ಲ. 1949 ನಾನು ಹುಟ್ಟಿದ್ದು. ಸ್ವಾತಂತ್ರ್ಯ ಬಂದ್ಮೇಲೆ ಏನಾಗಿದೆ ದೇಶ ನೋಡೋಣ ಅಂತ ಹುಟ್ಬಿಟ್ಟೆ. ದೇಶಕ್ಕೇನಾದ್ರೂ ಮಾಡೋಣ ಅಂತ ಹೊರಟೆ. ಸಧ್ಯಕ್ಕೆ ಈಗ ಚಿತ್ರರಂಗಕ್ಕೆ ಏನಾದ್ರೂ ಮಾಡೋಣ ಅಂತ ಹೊರ್ಟಿದ್ದೀನಿ. ನನ್ನ ವಿಧ್ಯಾಭ್ಯಾಸ ಎಲ್ಲಾ ಹೊಳಲ್ಕೆರೆಯಲ್ಲೇ ಮುಗೀತು.

ಈ ಬಣ್ಣದ ಗೀಳು ನನಗೆ ಹೇಗೆ ಹಚ್ಕೊತು ಅಂದ್ರೆ ಗಂಡ್ಸಲ್ವೇ ಗಂಡ್ಸು ನಾಟಕದಲ್ಲಿ ಒಂದು ಪಾತ್ರ ಮಾಡ್ದೆ. ಅದು ಸೂಪರ್ ಹಿಟ್ ಆಗೋಯ್ತು. ಫಸ್ಟ್ ಪ್ರೈಸ್ ಬಂದ್ಬಿಡ್ತು. ಅಲ್ಲಿಂದ ನಾಟಕಗಳಲ್ಲಿ ಪಾರ್ಟ್ ಮಾಡುವ ಹುಚ್ಚು ಸ್ವಲ್ಪ ಜಾಸ್ತಿ ಆಯ್ತು. ನನ್ನ ಸಮ ವಯಸ್ಸಿನ ಅಂದ್ರೆ ಹದಿಮೂರು ಹದಿನೈದು ವರ್ಷದ ಹುಡುಗರನ್ನೆಲ್ಲಾ ಜೊತೆಯಲ್ಲಿ ಸೇರಿಸ್ಕೊಂಡು ರಾಜ್ಯೋತ್ಸವ, ಗಣೇಶನ ಹಬ್ಬ, ದಸರಾ ಹಬ್ಬಕ್ಕೆಲ್ಲಾ ನಾಟಕ ಮಾಡ್ತಾ ಇದ್ವಿ. ಯಾವುದೇ ಹಬ್ಬ ಬಂತು ಅಂದ್ರೂ “ಜನಾರ್ಧನನ ಟೀಮ್‍ಗೆ ಹೇಳ್ಬಿಡಪ್ಪಾ ಅವರು ನಾಟಕ ಆಡ್ತಾರೆ” ಅನ್ನೋ ತರ ಆಗಿತ್ತು. ವಿಧ್ಯಾಭ್ಯಾಸ ನಂದು ಅಷ್ಟೇನೂ ಇಲ್ಲ. ಎಸ್.ಎಸ್.ಎಲ್.ಸಿ ನೇ ಲಾಸ್ಟ್. ಅದೂ ಒಂದೇ ಸರಿ ಪಾಸ್ ಮಾಡ್ಲಿಲ್ಲ ನಾನು. ಯಾಕೆ ಒಂದೇ ಸಲ ಪಾಸ್ ಮಾಡ್ಬೇಕು? ಅಂತ ಎರಡನೇ ಸಲ ಪಾಸ್ ಮಾಡ್ದೆ.ಮುಂದುವರೆಯುವುದು...

31 views