ಬ್ರಿಡ್ಜ್‌ ಫಿಲ್ಮ್‌ ಅಂದ್ರೆ ಏನು ಹೇಗಿರುತ್ತೆ?

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 20

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ನನಗೂ ಏಜ್ ಆಗ್ಹೋಯ್ತು. ಗ್ರೇಟ್ ಪರ್ಸನ್ ಅನ್ಸುತ್ತೆ, ಅವ್ರು ಒಂದೇ ಪೀಸ್ ಅಂತ. ನಾವು ನೋಡಿ ಸ್ವಾಮಿ ಮಾಡಿದ್ವಿ ‘ಪರಮೇಶಿ ಪ್ರೇಮ ಪ್ರಸಂಗʼ ಮಾಡಿದ್ವಿ, ಎಲ್ಲಾ ತುಂಬಾ ದೊಡ್ಡ ಬಜೆಟ್ ಅಲ್ಲ. ತುಂಬಾ ಆರ್ಟ್ ಫಿಲ್ಮೂ ಅಲ್ಲ. ಅಥವಾ ತುಂಬಾ ಕಮರ್ಷಿಯಲೂ ಅಲ್ಲ. ಒಂಥರಾ ಬ್ರಿಡ್ಜ್ ಫಿಲಮ್. ಈ ಬ್ರಿಡ್ಜ್ ಫಿಲಮ್ಗೆ, ನಾವು ತುಂಬಾ ಖರ್ಚು ಮಾಡೊದು ಬೇಡ ಅಂತ. ಯಾಕಂದ್ರೆ ನಮ್ಮ ಸಂಕೇತ್ ಟೀಮಲ್ಲಿ ಸುಮಾರು ಹನ್ನೆರಡು, ಹದಿಮೂರು ಜನ ಹುಡುಗರಿದ್ರು, ಹೆಣ್ಮಕ್ಳೂ ಇದ್ರು. ಶಂಕರ್ ಗೆ ಯಾರ ಹತ್ರ ಏನು ಪ್ಲಸ್ ಪಾಯಿಂಟ್ ಇದೆ ಅಂತ ನೋಡ್ಕೊಂಡು, ತಕ್ಷಣ ಅವ್ರನ್ನ ಸಂಘಟನೆ ಮಾಡುವ ಕ್ವಾಲಿಟಿ ಇದೆ. ಎಕ್ಸ್ಟ್ರಾರ್ಡಿನರಿ ಕ್ವಾಲಿಟಿ ಅದು. ಹಾಗೇ ಜನರೂ ಇದ್ರು.


ಈಗ ನಾವು ನೋಡಿ ಸ್ವಾಮಿ ನಾಟಕ ಮಾಡ್ತಿದ್ವಿ. ಹಾಗಾಗಿ ನಮಗೆ ಅದನ್ನ ಸಿನಿಮಾ ಮಾಡಕ್ಕೆ ಸುಲಭ. ಯಾಕಂದ್ರೆ ಬಟ್ಟೆಗಳೆಲ್ಲಾ ನಾವು-ನಾವೇ ಮಾಡ್ಕೊಂಡು ಹಾಕ್ಕೊಂಡಿದ್ವಿ. ಅದನ್ನೇ ಇಲ್ಲಿಗೆ ಯಾಕೆ ಅಪ್ಲೇಯ್ ಮಾಡ್ಬಾರ್ದು? ಹೀಗೆ ಮಾಡ್ದಾಗ ಕಾಸ್ಟೂಮ್ ಎಕ್ಷಪೆನ್ಸ್ ಕಟ್ ಆಯ್ತು. ಇದು ನಮಗೆ ವಯೇಬಲ್ ಅನ್ನಿಸ್ತು. ಸಿನಿಮಾ ಒಂಥರಾ ಗ್ಯಾಂಬ್ಲಿಂಗೇ, ಈ ಗ್ಯಾಂಬ್ಲಿಂಗಲ್ಲಿ ಎಲ್ಲರೂ ತಲೆ ಕೊಡಕ್ಕಾಗಲ್ಲ. ಆದ್ರೆ ಒನ್ ಆಫ್ ದ ಬೆಸ್ಟ್ ಬ್ಯುಸ್ನೆಸ್. ಯಾಕಂದ್ರೆ, ನಾಲ್ಕು ತಿಂಗ್ಳಲ್ಲೇ ಸಕ್ಸಸ್ಸಾ? ಫೇಲ್ಯೂರಾ? ಅಂತ ಅದರ ಹಣೆಬರಹ ಏನೂಂತ ಗೊತ್ತಾಗ್ಬಿಡುತ್ತೆ. ಬೇರೆ ಬ್ಯುಸ್ನೆಸ್ ಹಾಗಲ್ಲ. ಹುಲಿ ಮೇಲೆ ಕೂತ್ಕೊಂಡಂಗೆ. ಕೆಳಗೆ ಇಳಿದ್ರೆ ತಿಂದ್ಬಿಡುತ್ತೆ ನಮ್ಮನ್ನ. ಅದ್ರ ಮೇಲೆ ಕೂತ್ಕೊಂಡೇ ಹುಲಿ ಸವಾರಿ ಮಾಡ್ಬೇಕು. ಸಿನಿಮಾ ಹಂಗಲ್ಲ, ನಾಲ್ಕು ತಿಂಗಳಲ್ಲೇ ಪ್ರಾಜೆಕ್ಟ್ ಮುಗಿದು ಹೋಗಿರುತ್ತೆ.ಮುಂದುವರೆಯುವುದು…


9 views