ಬಾಲಣ್ಣ ಅವರಿಗಿದ್ದ ಹವ್ಯಾಸಗಳು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 95


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ಬಾಲಕೃಷ್ಣ ಅವರು ಪೇಟಿಂಗ್‌ ಮಾಡುತ್ತಿದ್ದರು ಎಂದು ಮೊದಲೇ ಹೇಳಿದ್ದೆ. ಪೇಂಟ್‌ನಲ್ಲಿ ಬರೆಯುವುದನ್ನು ನನಗೆ ಬಾಲಣ್ಣ ಹೇಳಿಕೊಟ್ಟಿದ್ದರು.


ಮೈಸೂರಿನಲ್ಲಿ ತುಳಸಿ ಜ್ಯುವೆಲ್ಲರಿ ಮಾರ್ಟ್ ಎಂದಿದೆ. ಅವರು ಬೋರ್ಡ್‌ ಬರೆದುಕೊಡುವಂತೆ ನನಗೆ ಕೇಳಿದ್ರು. ನಾನು ಬರೆದುಕೊಟ್ಟಿದ್ದೆ. ಆ ಅಂಗಡಿಯ ಮಾಲೀಕರು ನನ್ನ ಅಣ್ಣನ ಕ್ಲಾಸ್‌ಮೆಟ್‌. ಮೈಸೂರಿನಲ್ಲಿ ಗಾಂಧಿ ಚೌಕ ಎಂದಿದೆ. ಆಗ ಅದು ಹಾರ್ಡಿನ್‌ ಸರ್ಕಲ್‌ ಎನ್ನುತ್ತಿದ್ದರು. ಅಲ್ಲಿಯೇ ಹಾರ್ಡಿನ್‌ ಹೈಸ್ಕೂಲ್‌ ಇತ್ತು. ಆ ಶಾಲೆಯಲ್ಲಿ ನಮ್ಮ ಅಣ್ಣನ ಕ್ಲಾಸ್‌ಮೆಟ್‌ ಆಗಿದ್ದರವರು. ಅವರಿಗೆ ಸಿನಿಮಾ ನೋಡುವ ಹುಚ್ಚು. ಒಬ್ಬರಿಗೆ ಹೋಗಲು ಆಗುವುದಿಲ್ಲ ಎಂದು ನನ್ನನ್ನು ಕರೆದುಕೊಂಡು ಹೋಗುತ್ತಿದ್ರು. ನನಗೆ ಮೊದಲೇ ಸಿನಿಮಾದ ಬಗ್ಗೆ ವ್ಯಾಮೋಹ. ಇಂಥಹ ಅವಕಾಶವನ್ನು ತಪ್ಪಿಸಿಕೊಳ್ಳುತ್ತಲೇ ಇರಲಿಲ್ಲ. ಬಾಲಣ್ಣ ಅವರು ಎಷ್ಟೋ ಕ್ಯಾಂಪ್‌ಗಳಲ್ಲಿ ಬೋರ್ಡ್‌ ಬರೆದು ದುಡ್ಡು ಗಳಿಸುತ್ತಿದ್ದರು. ಅದು ಅವರಲ್ಲಿ ಇದ್ದಂತಹ ಕಲೆ. ಬರವಣಿಗೆಯ ಕೌಶಲವೂ ಅವರಿಗಿತ್ತು. ಜಿ.ವಿ.ಅಯ್ಯರ್‌ ಮತ್ತು ಬಾಲಕೃಷ್ಣ ಅವರಿಂದ ಬೇಡರ ಕಣ್ಣಪ್ಪ ನಾಟಕಕ್ಕೆ ರೂಪ ಬಂತು.ಮುಂದುವರಿಯುವುದು...


ಸಂದರ್ಶನ: ಕೆ.ಎಸ್‌. ಪರಮೇಶ್ವರ

34 views