ಬೆಳಿಗ್ಗೆ ಬ್ಯಾಂಕ್‌ ಕೆಲಸ ರಾತ್ರಿ ಟಾಕೀಸ್‌ ಕೆಲಸ ಜೊತೆಗೆ ನಾಟಕ

ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ಅವರ ಲೈಫ್ ಸ್ಟೋರಿ

ಭಾಗ-3ಅಲ್ಲಿ ಒಂದು ಮಲ್ಲಿಕಾರ್ಜುನ ಟ್ಯಾಕೀಸ್ ಅಂತ ಇತ್ತು. ಅವಾಗ ರಾತ್ರಿ ಹೊತ್ತು ಅಲ್ಲಿ ಅಸಿಸ್ಟೆಂಟ್ ಆಪರೇಟರ್ ಆಗಿ ಕೆಲಸಕ್ಕೆ ಸೇರ್ದೆ. ರೀಲ್ ಸುತ್ತೊದು, ಕಾರ್ಬನ್ ದಬ್ಬೊದು, ಮಿಷನ್ ಎಲ್ಲಾ ಒರೆಸೋದು ಈತರ ಕೆಲಸಗಳು ಮಾಡ್ತಾ ಇದ್ದೆ.


ಪರಮ್: ಪ್ರೊಜೆಕ್ಟರ್ ತರ ಇರುತ್ತಲ್ವಾ?


ಬ್ಯಾಂಕ್ ಜನಾರ್ಧನ್: ಆಪರೇಟರ್ ಆನ್ ಮಾಡಿ ಕೊಟ್ಟು ಹೋಗ್ಬಿಡೋರು. ನಾನು ಕಾರ್ಬನ್ ದಬ್ಕೊಂಡು ರೀಲ್ ಚೇಂಜ್ ಮಾಡ್ಕೊಂಡು, ರೀಲ್ ರಿವೈಂಡಿಂಗ್ ಮಾಡ್ಕೊಂಡು ಕೆಲ್ಸ ಮಾಡ್ತಾ ಇದ್ದೆ. ಆಗ ನಂಗೆ ದಿನಕ್ಕೆ ಒಂದು ರೂಪಾಯಿ ಕೊಡ್ತಿದ್ರು. ಎರಡು ಟೀ, ಎರಡು ಬನ್. ಫಸ್ಟ್ ಶೋ ಸೆಕೆಂಡ್ ಶೋ ಎರಡು ಶೋಗಳಿತ್ತು ಮ್ಯಾಟ್ನಿ ಶೋ ಇದ್ರೆ ಒಂದು ಟೀ ಒಂದು ಬನ್ ಕೊಡೋರು. ಹಗಲು ಬ್ಯಾಂಕ್‍ಗೆ ಕೆಲಸಕ್ಕೆ ಹೋಗ್ತಿದ್ದೆ. ರಾತ್ರಿ ಹೊತ್ತು ಮಂಜುನಾಥ ಟ್ಯಾಕೀಸ್‍ಗೆ ಹೋಗ್ತಾ ಇದ್ದೆ.

ಆ ಸಮಯದಲ್ಲಿ ಗೌಡ್ರ ಗದ್ಲ ಅಂತ ಒಂದು ನಾಟಕ ಮಾಡಿದ್ವಿ. ಆ ನಾಟಕ ಸ್ವಲ್ಪ ಸಕ್ಸಸ್ ಆಗೋಯ್ತು. ಊರಲ್ಲಿ ಎಲ್ಲರೂ “ಜನಾರ್ಧನ ಚನ್ನಾಗಿ ಮಾಡ್ತಾನೆ” ಅಂತ ಹೇಳ್ತಿದ್ರು. ಅವಾಗ ನಾನು ಟ್ಯಾಕೀಸ್‍ಗೆ ಹೋಗ್ತಾ ಇದ್ನಲ್ಲಾ, ಸಿನಿಮಾಗಳು ನೋಡ್ತಾ ಇದ್ನಲ್ಲಾ “ನಾನು ಯಾಕೆ ಕಲಾವಿದನಾಗ್ಬಾರ್ದು? ನಾನು ಯಾಕೆ ಆರ್ಟಿಸ್ಟ್ ಆಗ್ಬಾರ್ದು?” ಅನ್ನೋ ಒಂದು ಆಸೆ ಎಲ್ಲೋ ಮನಸ್ಸಲ್ಲಿ ಬಂತು. ಏನು ಮಾಡಕ್ಕಾಗುತ್ತೆ? ಬಡತನ ಬೇರೆ. ಯಾರು ನಮ್ಮನ್ನ ಸೇರಿಸ್ತಾರೆ? ಹಣ ಇದ್ಯಾ ಸೇರ್ಸಕ್ಕೆ? ಅದೂ ಇಲ್ಲ. ಏನು ಮಾಡ್ಬೇಕು? ಅಂತ ಯೋಚನೆ ಮಾಡೋವಾಗ ಈ ನಾಟಕಗಳಲ್ಲೇ ನಮ್ಮ ಚಟ ತೀರಿಸ್ಕೊಳ್ತಾ ಇದ್ವಿ.ಮುಂದುವರೆಯುವುದು…

19 views