ಬೆಳಿಗ್ಗೆ 4 ಗಂಟೆಗೆ ಕಿಟಕಿ ಬೇಕು ಅಂದ್ರೆ ಕಿಟಕಿ ರೆಡಿ ಆಗೋದು

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 29

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)
ಪರಮ್: ಶಂಕರ್ ಐಡಿಯಾ?


ರಮೇಶ್ ಭಟ್: ಹೌದು ಸಾರ್, ಕಿಟಕಿಯಾಚೆ ಇರುವ ಟ್ರೈನ್, ಮತ್ತೆ ಸ್ವಾಮಿ ಇಬ್ಬರನ್ನ ಕಂಡ್ಬಿಟ್ರೆ ಸಾಕು ಅವ್ರಿಗೆ. ಟ್ರೈನ್ ಎಲ್ಲಿ ಬರುತ್ತೋ? ಅಲ್ಲಿಂದ ಐವತ್ತು ಅಡಿ ದೂರದಲ್ಲಿ ಕಿಟಕಿನ ಸೆಟ್ ಮಾಡಿ, ಸ್ವಾಮಿನ ಒಂದು ಸ್ಟೂಲ್ ಮೇಲೆ ನಿಲ್ಲಿಸಿ, ಕ್ಯಾಮೆರಾ ಮ್ಯಾನ್ ಗೆ ಸ್ವಾಮಿ ಹಾಗೂ ಕಿಟಕಿ ಇಟ್ಕೊಂಡು, ಟ್ರೈನ್ ಶಾಟ್ ತಗೊಳಕ್ಕೆ ಹೇಳಿದ್ರು.


“ಕಿಟಕಿ ಬೇಕು” ಅಂತಾರೆ. ಅದೂ ಮುಂಜಾನೆ ನಾಲ್ಕು ಗಂಟೆಗೆ ಕಿಟಕಿ ತಗೊಂಡು ಹೋಗ್ಬೇಕು. ಹಿಂದಿನ ದಿವ್ಸ ಸಂಜೆ ನಾಲ್ಕುವರೆ ಐದು ಗಂಟೆಗೆ ಹೇಳ್ತಾರೆ, ಬೇಕು ಅಂತ. ಲಕ್ಕಿಲಿ ನಮಗೆ ಜಾನ್ ದೇವರಾಜ್ ಅಂತ ಆರ್ಟ್ ಡೈರಕ್ಟರ್ ಸಿಕ್ಕಿದ್ರು. ಅವ್ರು ಆರ್ಟ್ ಡೈರಕ್ಟರ್ ಅಲ್ಲ. ಹೀ ಈಸ್ ಆನ್ ಆರ್ಟಿಸ್ಟ್. ಅವ್ರು ಕ್ಲೇ ಇಂದ ಮೋಲ್ಡ್ ಮಾಡ್ತಾರೆ, ಸ್ಕಲ್ಪ್ ಮಾಡ್ತಾರೆ, ಸೈನ್ ಬೋರ್ಡ್ ಬರಿತಾರೆ. ಏನೇನೋ, ಹಿ ಈಸ್ ಅ ಮಲ್ಟಿ ಟಾಲಂಟಡ್. ಅವ್ನಿಗೆ ಸಿನಿಮಾ ಮೇಲೆ ನಂಬಿಕೆ ಇಲ್ಲ. “ಸಿನಿಮಾ ಫೇಕ್” ಅಂತ. ಅಂದ್ರೆ ಅವ್ನದ್ದು ಮಾತ್ರ ಆರ್ಟ್, ಸಿನಿಮಾ ಆರ್ಟ್ ಅಲ್ಲ ಅಂತ. ಅವ್ರವ್ರ ನೋಷನ್.ಮುಂದುವರೆಯುವುದು…

12 views